- ಇಹಲೋಕ ಮತ್ತು ಪರಲೋಕದಲ್ಲಿ ಪ್ರಯೋಜನ ನೀಡುವ ವಿಷಯಗಳ ಬಗ್ಗೆ ತಿಳಿಯಲು ಸಹಾಬಿಗಳಿಗಿದ್ದ ಉತ್ಸಾಹವನ್ನು ತಿಳಿಸಲಾಗಿದೆ.
- ಸಲಾಂ ಹೇಳುವುದು ಮತ್ತು ಆಹಾರ ನೀಡುವುದು ಇಸ್ಲಾಂ ಧರ್ಮದಲ್ಲಿ ಶ್ರೇಷ್ಠ ಸತ್ಕರ್ಮಗಳಾಗಿವೆ. ಏಕೆಂದರೆ ಅದಕ್ಕೆ ಹೆಚ್ಚು ಪ್ರತಿಫಲವಿದೆ ಮತ್ತು ಜನರಿಗೆ ಅದು ಎಲ್ಲಾ ಸಮಯಗಳಲ್ಲೂ ಆವಶ್ಯಕವಾಗಿದೆ.
- ಈ ಎರಡು ಲಕ್ಷಣಗಳಿಂದ ಮಾತು ಮತ್ತು ಕ್ರಿಯೆಗಳ ಮೂಲಕ ಮಾಡುವ ಉಪಕಾರವನ್ನು ಜೊತೆಗೂಡಿಸಬಹುದು. ಇದು ಉಪಕಾರದ ಸಂಪೂರ್ಣ ರೂಪವಾಗಿದೆ.
- ಈ ಲಕ್ಷಣಗಳು ಮುಸ್ಲಿಮರು ಪರಸ್ಪರ ವ್ಯವಹರಿಸುವ ವಿಷಯಗಳಿಗೆ ಸಂಬಂಧಿಸಿವೆ. ದಾಸನು ತನ್ನ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ವ್ಯವಹರಿಸುವ ಬೇರೆ ಕೆಲವು ಲಕ್ಷಣಗಳಿವೆ.
- ಮುಂದಾಗಿ ಸಲಾಂ ಹೇಳಬೇಕಾದುದು ಮುಸ್ಲಿಮರಿಗೆ ಮಾತ್ರ. ಸತ್ಯನಿಷೇಧಿಗಳಿಗೆ ಮುಂದಾಗಿ ಸಲಾಂ ಹೇಳಲು ಹೋಗಬಾರದು.