- ಜನರು ವಿಶ್ವಾಸದಲ್ಲಿ ಒಂದೇ ರೀತಿಯಲ್ಲಿಲ್ಲ.
- ಶಕ್ತಿ ಉಪಯೋಗಿಸಿ ಕೆಲಸ ಮಾಡುವುದು ಅಪೇಕ್ಷಣೀಯವಾಗಿದೆ. ಏಕೆಂದರೆ ದೌರ್ಬಲ್ಯದಿಂದ ಪಡೆಯಲು ಸಾಧ್ಯವಾಗದ ಪ್ರಯೋಜನಗಳನ್ನು ಶಕ್ತಿಯಿಂದ ಪಡೆಯಬಹುದು.
- ಮನುಷ್ಯನು ತನಗೆ ಪ್ರಯೋಜನಕಾರಿಯಾದ ವಿಷಯಗಳಲ್ಲಿ ಉತ್ಸುಕನಾಗಬೇಕು ಮತ್ತು ಪ್ರಯೋಜನಕಾರಿಯಲ್ಲದ ವಿಷಯಗಳನ್ನು ಬಿಟ್ಟುಬಿಡಬೇಕು.
- ಸತ್ಯವಿಶ್ವಾಸಿ ಎಲ್ಲಾ ವಿಷಯಗಳಲ್ಲೂ ಅಲ್ಲಾಹನಿಂದ ಸಹಾಯ ಬೇಡುವುದು ಕಡ್ಡಾಯವಾಗಿದೆ. ಅವನು ಎಂದಿಗೂ ಸ್ವಯಂ ಅವಲಂಬಿತನಾಗಬಾರದು.
- ದೈವಿಕ ವಿಧಿ ಮತ್ತು ಪೂರ್ವನಿರ್ಧಾರವನ್ನು ದೃಢೀಕರಿಸಲಾಗಿದೆ. ಆದರೆ ಇದು ಕಾರ್ಯಕಾರಣ ಸಂಬಂಧಗಳನ್ನು ಬಳಸುವುದನ್ನು ಮತ್ತು ಒಳಿತಿನ ವಿಷಯಗಳಿಗಾಗಿ ಪರಿಶ್ರಮಿಸುವುದನ್ನು ನಿಷೇಧಿಸುವುದಿಲ್ಲ.
- ವಿಪತ್ತುಗಳು ಸಂಭವಿಸುವಾಗ ಸಿಟ್ಟಿನಿಂದ 'ಒಂದು ವೇಳೆ ' ಎಂಬ ಮಾತು ಹೇಳುವುದನ್ನು ನಿಷೇಧಿಸಲಾಗಿದೆ. ಅಲ್ಲಾಹನ ವಿಧಿಯನ್ನು ಮತ್ತು ಪೂರ್ವನಿರ್ಧಾರವನ್ನು ಆಕ್ಷೇಪಿಸುವುದನ್ನು ಕೂಡ ನಿಷೇಧಿಸಲಾಗಿದೆ.