/ ನಾವು ಉಮರ್ ರವರ ಜೊತೆಗಿದ್ದಾಗ ಅವರು ಹೇಳಿದರು: "(ಅನಗತ್ಯ) ಹೊರೆ ಹೊರುವುದನ್ನು ನಮಗೆ ವಿರೋಧಿಸಲಾಗಿದೆ

ನಾವು ಉಮರ್ ರವರ ಜೊತೆಗಿದ್ದಾಗ ಅವರು ಹೇಳಿದರು: "(ಅನಗತ್ಯ) ಹೊರೆ ಹೊರುವುದನ್ನು ನಮಗೆ ವಿರೋಧಿಸಲಾಗಿದೆ

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾವು ಉಮರ್ ರವರ ಜೊತೆಗಿದ್ದಾಗ ಅವರು ಹೇಳಿದರು: "(ಅನಗತ್ಯ) ಹೊರೆ ಹೊರುವುದನ್ನು ನಮಗೆ ವಿರೋಧಿಸಲಾಗಿದೆ."
رواه البخاري

ವಿವರಣೆ

ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ತಿಳಿಸುವುದೇನೆಂದರೆ, ಅನಗತ್ಯವಾಗಿ ನಮ್ಮನ್ನು ನಾವೇ ತೊಂದರೆಗೊಳಪಡಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ವಿರೋಧಿಸಿದ್ದಾರೆ. ಅದು ಮಾತುಗಳಲ್ಲಾದರೂ ಕೆಲಸಗಳಲ್ಲಾದರೂ ಸಹ.

Hadeeth benefits

  1. ನಮಗೆ ವಿರೋಧಿಸಲಾದ ಹೊರೆಗಳು ಎಂದರೆ: ವಿಪರೀತ ಪ್ರಶ್ನೆ ಕೇಳುವುದು, ಸರಿಯಾದ ಜ್ಞಾನವಿಲ್ಲದೆ ಒಂದು ಕೆಲಸವನ್ನು ಮಾಡುವುದು, ಅಥವಾ ಅಲ್ಲಾಹು ಸರಳಗೊಳಿಸಿರುವ ವಿಷಯವನ್ನು ಕಠಿಣಗೊಳಿಸುವುದು.
  2. ಮುಸಲ್ಮಾನನು ತನ್ನ ಮಾತು ಮತ್ತು ಕೆಲಸಗಳಲ್ಲಿ, ಅಂದರೆ ಆಹಾರ, ಪಾನೀಯ, ಮಾತು ಮುಂತಾದ ಎಲ್ಲಾ ಸ್ಥಿತಿಗಳಲ್ಲಿ ಸರಳತೆಯನ್ನು ಪಾಲಿಸುವುದು ಮತ್ತು ಅನಗತ್ಯವಾಗಿ ಹೊರೆ ಹೊರದಿರುವುದು ಅತ್ಯಾವಶ್ಯಕವಾಗಿದೆ.
  3. ಇಸ್ಲಾಂ ಸರಳ ಧರ್ಮವಾಗಿದೆ.