- ಜನರು ಅಲ್ಲಾಹನನ್ನು ಪ್ರೀತಿಸುವಂತೆ ಮಾಡುವುದು ಮತ್ತು ಒಳಿತುಗಳಲ್ಲಿ ಅವರಿಗೆ ಪ್ರಚೋದನೆ ನೀಡುವುದು ಸತ್ಯವಿಶ್ವಾಸಿಗೆ ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.
- ಧರ್ಮ ಪ್ರಚಾರಕರು ಇಸ್ಲಾಂ ಧರ್ಮವನ್ನು ಜನರಿಗೆ ತಲುಪಿಸುವ ಅತ್ಯುತ್ತಮ ವಿಧಾನದ ಬಗ್ಗೆ ವಿವೇಕಯುತವಾಗಿ ಆಲೋಚಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.
- ಸಿಹಿ ಸುದ್ದಿಯನ್ನು ತಿಳಿಸುವುದರಿಂದ ಜನರು ಧರ್ಮ ಪ್ರಚಾರಕನ ಬಗ್ಗೆ ಮತ್ತು ಅವನು ತಿಳಿಸಿಕೊಡುವ ಧರ್ಮದ ಬಗ್ಗೆ ಸಂತೋಷಪಡಲು, ಸ್ವೀಕರಿಸಲು ಮತ್ತು ನಿರಾಳರಾಗಲು ಕಾರಣವಾಗುತ್ತದೆ.
- ಕಷ್ಟಗೊಳಿಸುವುದರಿಂದ ಜನರು ಗಾಬರಿಯಾಗಲು, ಹಿಂಜರಿಯಲು ಮತ್ತು ಧರ್ಮಪ್ರಚಾರಕನ ಮಾತಿನಲ್ಲಿ ಸಂಶಯ ಪಡಲು ಕಾರಣವಾಗುತ್ತದೆ.
- ಅಲ್ಲಾಹನಿಗೆ ದಾಸರ ಮೇಲಿರುವ ವಿಶಾಲವಾದ ಕರುಣೆಯನ್ನು ಮತ್ತು ಅವನು ತನ್ನ ದಾಸರಿಗೆ ಸುಲಭ ಮತ್ತು ಸರಳವಾದ ಧರ್ಮವನ್ನು ಅನುಮೋದಿಸಿದ್ದಾನೆಂದು ಈ ಹದೀಸ್ ತಿಳಿಸುತ್ತದೆ.
- ಆದೇಶಿಸಲಾದ ಸುಲಭೀಕರಣವು ಧರ್ಮದ ಚೌಕಟ್ಟಿನೊಳಗೆ ಇರುವುದಕ್ಕೆ ಮಾತ್ರ ಸೀಮಿತವಾಗಿದೆ.