ನಿಶ್ಚಯವಾಗಿಯೂ ನಿಮ್ಮ ಬಟ್ಟೆ ಹಳತಾಗುವಂತೆ ನಿಮ್ಮ ಹೃದಯದಲ್ಲಿರುವ ವಿಶ್ವಾಸವು ಕೂಡ ಹಳತಾಗುತ್ತದೆ. ಆದ್ದರಿಂದ ನಿಮ್ಮ ಹೃದಯದಲ್ಲಿರುವ ವಿಶ್ವಾಸವನ್ನು ನವೀಕರಿಸಲು ನೀವು ಅಲ್ಲಾಹನಲ್ಲಿ ಬೇಡಿಕೊಳ್ಳಿರಿ...
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ನಿಮ್ಮ ಬಟ್ಟೆ ಹಳತಾಗುವಂತೆ ನಿಮ್ಮ ಹೃದಯದಲ್ಲಿರುವ ವಿಶ್ವಾಸವು ಕೂಡ ಹಳತಾಗುತ್ತದೆ. ಆದ್ದರಿಂದ ನಿಮ್ಮ ಹೃದಯದಲ್ಲಿರುವ ವಿಶ್ವಾಸವನ್ನು ನವೀಕರಿಸಲು ನೀವು ಅಲ್ಲಾಹನಲ್ಲಿ ಬೇಡಿಕೊಳ್ಳಿರಿ."
رواه الحاكم والطبراني
ವಿವರಣೆ
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಹೊಸ ಬಟ್ಟೆಯನ್ನು ಬಹಳ ಸಮಯದವರೆಗೆ ಬಳಸಿದರೆ ಅದು ಹಳತಾಗುವಂತೆ ಮುಸಲ್ಮಾನನ ಹೃದಯದಲ್ಲಿರುವ ವಿಶ್ವಾಸವು ಕೂಡ ಹಳತಾಗುತ್ತದೆ ಮತ್ತು ದುರ್ಬಲವಾಗುತ್ತದೆ. ಆರಾಧನೆಗಳಲ್ಲಿ ನಿಷ್ಠೆ ಇಲ್ಲದಿರುವುದು, ಪಾಪಗಳನ್ನು ಮಾಡುವುದು ಮತ್ತು ಮೋಜು ಮಸ್ತಿಗಳಲ್ಲಿ ಮುಳುಗುವುದು ಇದಕ್ಕೆ ಕಾರಣವಾಗಿದೆ. ಆದ್ದರಿಂದ, ಕಡ್ಡಾಯ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವುದರ ಮತ್ತು ಅಲ್ಲಾಹನ ಸ್ಮರಣೆ ಹಾಗೂ ಅವನಲ್ಲಿ ಕ್ಷಮೆ ಬೇಡುವುದನ್ನು ಹೆಚ್ಚಿಸುವುದರ ಜೊತೆಗೆ, ನಮ್ಮ ವಿಶ್ವಾಸವನ್ನು ನವೀಕರಿಸಲು ನಾವು ಅಲ್ಲಾಹನೊಂದಿಗೆ ನಿರಂತರ ಬೇಡಿಕೊಳ್ಳಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ನಿರ್ದೇಶಿಸುತ್ತಾರೆ.
Hadeeth benefits
ದೃಢತೆಯನ್ನು ನೀಡಲು ಮತ್ತು ಹೃದಯದಲ್ಲಿ ಸತ್ಯವಿಶ್ವಾಸವನ್ನು ನವೀಕರಿಸಲು ಅಲ್ಲಾಹನೊಂದಿಗೆ ಬೇಡಿಕೊಳ್ಳಬೇಕೆಂದು ಈ ಹದೀಸ್ ಪ್ರೋತ್ಸಾಹಿಸುತ್ತದೆ.
ವಿಶ್ವಾಸ ಎಂದರೆ ಮಾತು, ಕರ್ಮ ಮತ್ತು ನಂಬಿಕೆ. ಆಜ್ಞಾಪಾಲನೆ ಮಾಡುವಾಗ ಅದು ಹೆಚ್ಚಾಗುತ್ತದೆ ಮತ್ತು ಪಾಪಗಳನ್ನು ಮಾಡುವಾಗ ಅದು ಕಡಿಮೆಯಾಗುತ್ತದೆ.
Share
Use the QR code to easily share the message of Islam with others