- ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಮುಂದೆ ತೋರುತ್ತಿದ್ದ ಶರಣಾಗತಿ ಮತ್ತು ವಿನಮ್ರತೆಯನ್ನು ಮತ್ತು ಈ ಪ್ರಾರ್ಥನೆಯನ್ನು ಅಲ್ಲಾಹನಲ್ಲಿ ಬೇಡಬೇಕೆಂದು ಸಮುದಾಯಕ್ಕೆ ನಿರ್ದೇಶಿಸಿದ್ದನ್ನು ತಿಳಿಸಲಾಗಿದೆ.
- ಧರ್ಮದಲ್ಲಿ ನೇರವಾಗಿ ಮತ್ತು ದೃಢವಾಗಿ ನಿಲ್ಲುವುದರ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ. ಕರ್ಮಗಳನ್ನು ಅದರ ಅಂತ್ಯಸ್ಥಿತಿಯನ್ನು ನೋಡಿ ಪರಿಗಣಿಸಲಾಗುತ್ತದೆ.
- ಇಸ್ಲಾಂ ಧರ್ಮದಲ್ಲಿ ದೃಢವಾಗಿ ನಿಲ್ಲಲು ಅಲ್ಲಾಹು ನೀಡುವ ದೃಢತೆಯನ್ನು ಕಣ್ಣೆವೆಯಿಕ್ಕುವಷ್ಟು ಕಾಲ ಕೂಡ ಬೇಡವೆಂದು ನಿರಾಕರಿಸಿ ಸ್ವಾವಲಂಬಿಯಾಗಲು ಮನುಷ್ಯನಿಗೆ ಸಾಧ್ಯವಿಲ್ಲ.
- ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಕರಿಸುತ್ತಾ ಈ ಪ್ರಾರ್ಥನೆಯನ್ನು ಪದೇ ಪದೇ ಪ್ರಾರ್ಥಿಸಲು ಪ್ರೋತ್ಸಾಹಿಸಲಾಗಿದೆ.
- ಇಸ್ಲಾಂ ಧರ್ಮದಲ್ಲಿ ದೃಢವಾಗಿ ನಿಲ್ಲುವುದು ಅತಿದೊಡ್ಡ ಅನುಗ್ರಹವಾಗಿದ್ದು, ಅದಕ್ಕಾಗಿ ಪರಿಶ್ರಮಿಸುವುದು ಮತ್ತು ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವುದು ಮನುಷ್ಯನ ಕರ್ತವ್ಯವಾಗಿದೆ.