“ದಾಸನು ತನ್ನ ಒಡೆಯನಿಗೆ (ಅಲ್ಲಾಹನಿಗೆ) ಅತ್ಯಂತ ನಿಕಟನಾಗುವುದು ಸಾಷ್ಟಾಂಗ ಮಾಡುವಾಗ. ಆದ್ದರಿಂದ ನೀವು ಪ್ರಾರ್ಥಿಸುವುದನ್ನು ಹೆಚ್ಚಿಸಿರಿ.”...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ದಾಸನು ತನ್ನ ಒಡೆಯನಿಗೆ (ಅಲ್ಲಾಹನಿಗೆ) ಅತ್ಯಂತ ನಿಕಟನಾಗುವುದು ಸಾಷ್ಟಾಂಗ ಮಾಡುವಾಗ. ಆದ್ದರಿಂದ ನೀವು ಪ್ರಾರ್ಥಿಸುವುದನ್ನು ಹೆಚ್ಚಿಸಿರಿ.”
رواه مسلم
ವಿವರಣೆ
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಒಬ್ಬ ದಾಸನು ಸಾಷ್ಟಾಂಗ ಮಾಡುವಾಗ ತನ್ನ ಒಡೆಯನಿಗೆ (ಅಲ್ಲಾಹನಿಗೆ) ಅತಿನಿಕಟನಾಗುತ್ತಾನೆ. ಅದೇಕೆಂದರೆ, ನಮಾಝ್ ಮಾಡುವವನು ಸಾಷ್ಟಾಂಗ ಮಾಡುವಾಗ, ಸರ್ವಶಕ್ತನಾದ ಅಲ್ಲಾಹನಿಗೆ ವಿನಮ್ರತೆ ಮತ್ತು ವಿನಯವನ್ನು ಸೂಚಿಸಲು ತನ್ನ ಉನ್ನತ ಮತ್ತು ಅತಿಶ್ರೇಷ್ಠ ಅಂಗವನ್ನು ನೆಲದ ಮೇಲಿಡುತ್ತಾನೆ.
ಸಾಷ್ಟಾಂಗದಲ್ಲಿರುವಾಗ ಪ್ರಾರ್ಥನೆಗಳನ್ನು ಹೆಚ್ಚಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸಿದ್ದಾರೆ. ಆದ್ದರಿಂದ ಸಾಷ್ಟಾಂಗದಲ್ಲಿರುವ ವ್ಯಕ್ತಿ ಮಾತು ಮತ್ತು ಕ್ರಿಯೆ ಎರಡರೊಂದಿಗೂ ಅಲ್ಲಾಹನಿಗೆ ವಿನಮ್ರತೆ ತೋರುತ್ತಾನೆ.
Hadeeth benefits
ವಿಧೇಯತೆಯು ಮನುಷ್ಯನನ್ನು ಸರ್ವಶಕ್ತನಾದ ಅಲ್ಲಾಹನಿಗೆ ಮತ್ತಷ್ಟು ಹತ್ತಿರಗೊಳಿಸುತ್ತದೆಯೆಂದು ಈ ಹದೀಸ್ ತಿಳಿಸುತ್ತದೆ.
ಸಾಷ್ಟಾಂಗದಲ್ಲಿರುವಾಗ ಪ್ರಾರ್ಥನೆಗಳನ್ನು ಹೆಚ್ಚಿಸುವುದು ಅಪೇಕ್ಷಣೀಯವೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಪ್ರಾರ್ಥನೆಗೆ ಉತ್ತರ ಸಿಗುವ ಸ್ಥಳವಾಗಿದೆ.
Share
Use the QR code to easily share the message of Islam with others