- ಈ ಹದೀಸ್ ಪ್ರಾರ್ಥನೆಯ ಶ್ರೇಷ್ಠತೆಯನ್ನು ಮತ್ತು ಅಲ್ಲಾಹನನ್ನು ಕರೆದು ಪ್ರಾರ್ಥಿಸುವವರು ಅವನ ಮಹಿಮೆಯನ್ನು ಹೊಗಳುತ್ತಾರೆ ಮತ್ತು ಅವನನ್ನು ಶ್ರೀಮಂತನೆಂದು—ಏಕೆಂದರೆ ಬಡವನಲ್ಲಿ ಯಾರೂ ಕರೆಯುವುದಿಲ್ಲ; ಅವನು ಎಲ್ಲವನ್ನೂ ಕೇಳುತ್ತಾನೆಂದು—ಏಕೆಂದರೆ ಕಿವುಡನನ್ನು ಯಾರೂ ಕರೆಯುವುದಿಲ್ಲ; ಅವನು ಉದಾರಿಯೆಂದು—ಏಕೆಂದರೆ ಜಿಪುಣನಲ್ಲಿ ಯಾರೂ ಕೇಳುವುದಿಲ್ಲ; ಅವನು ದಯಾಳುವೆಂದು—ಏಕೆಂದರೆ ಒರಟನಲ್ಲಿ ಯಾರೂ ಕೇಳುವುದಿಲ್ಲ; ಅವನು ಸಾಮರ್ಥ್ಯವುಳ್ಳವನೆಂದು—ಏಕೆಂದರೆ ಅಶಕ್ತನಲ್ಲಿ ಯಾರೂ ಕೇಳುವುದಿಲ್ಲ; ಅವನು ಹತ್ತಿರದಲ್ಲಿರುವವನೆಂದು—ಏಕೆಂದರೆ ಕೇಳದಷ್ಟು ದೂರವಿರುವವನ್ನು ಯಾರೂ ಕರೆಯುವುದಿಲ್ಲ ಹಾಗೂ ಇಂತಹ ಅನೇಕ ಉತ್ಕೃಷ್ಟ ಮತ್ತು ಸುಂದರವಾದ ಗುಣಲಕ್ಷಣಗಳನ್ನು ಅಲ್ಲಾಹು ಹೊಂದಿದ್ದಾನೆಂದು ಒಪ್ಪಿಕೊಳ್ಳುತ್ತಾರೆ.