ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಕುದ್ಸಿ ಹದೀಸಿನಲ್ಲಿ ಹೀಗೆ ಹೇಳುತ್ತಾನೆ: "ಓ ಆದಮರ ಪುತ್ರನೇ! ನ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುವುದೇನೆಂದರೆ, ಒಬ್ಬ ದಾಸ ಪಾಪ ಮಾಡಿದ ನಂತರ, "ಓ ಅಲ್ಲಾಹ್! ನ...
ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನಾನು ಎಂತಹ ವ್ಯಕ್ತಿಯಾಗಿದ್ದೇನೆಂದರೆ, ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾವುದೇ ಒಬ್ಬ ವ್ಯಕ್ತಿ ಒಂದು ಪಾಪವನ್ನು ಮಾಡಿ, ನಂತರ ಅತ್ಯುತ್ತಮ ರೂಪದಲ್ಲಿ ವುದೂ ನಿರ್...
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಹಗಲಿನಲ್ಲಿ ಪಾಪ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ದಾಸನು ಹಗಲಿನಲ್ಲಿ ಪಾಪ ಮಾ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸರ್ವಶಕ್ತನಾದ ನಮ್ಮ ಪರಿಪಾಲಕನ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ನಮ್ಮ ಪರಿಪಾಲಕನು (ಅಲ್ಲಾಹು) ಪ್ರತಿ ರಾತ್ರಿಯೂ, ಅದರ ಮೂರನೇ ಒಂದು ಭಾಗ...

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಆದಮರ ಪುತ್ರನೇ! ನೀನು ಎಲ್ಲಿಯ ತನಕ ನನ್ನಲ್ಲಿ ಪ್ರಾರ್ಥಿಸುತ್ತೀಯೋ ಮತ್ತು ನನ್ನಲ್ಲಿ ನಿರೀಕ್ಷೆಯಿಡುತ್ತೀಯೋ ಅಲ್ಲಿಯ ತನಕ ನೀನು ಮಾಡಿದ್ದೆಲ್ಲವನ್ನೂ ನಾನು ನಿನಗೆ ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನಿನ್ನ ಪಾಪಗಳು ಆಕಾಶದಲ್ಲಿರುವ ಮೋಡಗಳನ್ನು ತಲುಪಿ, ನಂತರ ನೀನು ನನ್ನಲ್ಲಿ ಕ್ಷಮೆಯಾಚಿಸಿದರೂ, ನಾನು ನಿನ್ನನ್ನು ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನೀನು ನನ್ನ ಬಳಿಗೆ ಭೂಮಿ ತುಂಬಾ ಪಾಪಗಳೊಂದಿಗೆ ಬಂದು, ನಂತರ ನನ್ನೊಂದಿಗೆ ಯಾವುದೇ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನನ್ನನ್ನು ಭೇಟಿಯಾದರೆ, ನಾನು ಭೂಮಿ ತುಂಬಾ ಕ್ಷಮೆಯೊಂದಿಗೆ ನಿನ್ನ ಬಳಿಗೆ ಬರುತ್ತೇನೆ."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ಒಬ್ಬ ದಾಸ ಪಾಪವನ್ನು ಮಾಡಿ ನಂತರ ಹೇಳುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ." ನಂತರ, ಆ ದಾಸ ಮತ್ತೆ ಪಾಪ ಮಾಡಿ, ನಂತರ ಹೇಳುತ್ತಾನೆ: "ಓ ನನ್ನ ಪರಿಪಾಲಕನೇ! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ." ನಂತರ, ಆ ದಾಸ ಮತ್ತೆ ಪಾಪ ಮಾಡಿ, ನಂತರ ಹೇಳುತ್ತಾನೆ: "ಓ ನನ್ನ ಪರಿಪಾಲಕನೇ! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ. ನಿನಗೆ ಇಷ್ಟವಿರುವುದನ್ನು ಮಾಡು. ನಾನಂತೂ ನಿನ್ನನ್ನು ಕ್ಷಮಿಸಿದ್ದೇನೆ."

ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನಾನು ಎಂತಹ ವ್ಯಕ್ತಿಯಾಗಿದ್ದೇನೆಂದರೆ, ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾನು ಒಂದು ಹದೀಸನ್ನು ಕೇಳಿದಾಗಲೆಲ್ಲಾ, ಅಲ್ಲಾಹು ಅದರಿಂದ ಅವನು ಇಚ್ಛಿಸಿದ್ದನ್ನು ನನಗೆ ಪ್ರಯೋಜನವಾಗುವಂತೆ ಮಾಡುತ್ತಿದ್ದನು. ಅವರ ಸಹಚರರಲ್ಲಿ (ಸಹಾಬಿಗಳಲ್ಲಿ) ಯಾರಾದರೂ ನನಗೆ ಹದೀಸ್ ತಿಳಿಸಿದರೆ, ನಾನು ಅವರೊಡನೆ ಆಣೆ ಮಾಡಲು ಹೇಳುತ್ತಿದ್ದೆ. ಅವರು ಆಣೆ ಮಾಡಿದರೆ ನಾನು ಅವರು ಹೇಳಿದ್ದನ್ನು ನಂಬುತ್ತಿದ್ದೆ. ಒಮ್ಮೆ ಅಬೂಬಕರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನನಗೆ ಹದೀಸ್ ತಿಳಿಸಿದರು. ಅಬೂಬಕರ್ ಸತ್ಯ ಹೇಳುವವರಾಗಿದ್ದರು. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾವುದೇ ಒಬ್ಬ ವ್ಯಕ್ತಿ ಒಂದು ತಪ್ಪು ಮಾಡಿ, ನಂತರ ಎದ್ದು ವುದೂ ನಿರ್ವಹಿಸಿ, ನಮಾಝ್ ಮಾಡಿ, ನಂತರ ಅಲ್ಲಾಹನಲ್ಲಿ ಕ್ಷಮೆಯಾಚಿಸಿದರೆ, ಅಲ್ಲಾಹು ಅವನಿಗೆ ಕ್ಷಮಿಸದೇ ಇರಲಾರ." ನಂತರ ಅವರು ಈ ವಚನವನ್ನು ಪಠಿಸಿದರು: "ಅವರು ಏನಾದರೂ ನೀಚಕಾರ್ಯ ಮಾಡಿದರೆ ಅಥವಾ ಸ್ವಯಂ ಅಕ್ರಮವೆಸಗಿದರೆ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆಯಾಚಿಸುತ್ತಾರೆ." [ಆಲು ಇಮ್ರಾನ್:135] "

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಹಗಲಿನಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ರಾತ್ರಿಯಲ್ಲಿ ಕೈ ಚಾಚುತ್ತಾನೆ. ರಾತ್ರಿಯಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ಹಗಲಿನಲ್ಲಿ ಕೈ ಚಾಚುತ್ತಾನೆ. ಎಲ್ಲಿಯವರೆಗೆಂದರೆ, ಸೂರ್ಯ ಪಶ್ಚಿಮದಿಂದ ಉದಯವಾಗುವವರೆಗೆ."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸರ್ವಶಕ್ತನಾದ ನಮ್ಮ ಪರಿಪಾಲಕನು (ಅಲ್ಲಾಹು) ಪ್ರತಿ ರಾತ್ರಿಯೂ, ಅದರ ಮೂರನೇ ಒಂದು ಭಾಗ ಉಳಿದಿರುವಾಗ, ಅತಿಕೆಳಗಿನ ಆಕಾಶಕ್ಕೆ ಇಳಿಯುತ್ತಾನೆ. ನಂತರ ಹೇಳುತ್ತಾನೆ: "ನನ್ನನ್ನು ಕರೆದು ಪ್ರಾರ್ಥಿಸುವವರು ಯಾರು? ಅವರಿಗೆ ನಾನು ಉತ್ತರ ನೀಡುವೆನು. ನನ್ನಲ್ಲಿ ಬೇಡುವವರು ಯಾರು? ಅವರಿಗೆ ನಾನು ನೀಡುವೆನು. ನನ್ನಲ್ಲಿ ಕ್ಷಮೆ ಕೇಳುವವರು ಯಾರು? ಅವರಿಗೆ ನಾನು ಕ್ಷಮಿಸುವೆನು."

ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ. ಹೀಗೆ ಹೇಳುವಾಗ ಅವರು ತಮ್ಮ ಬೆರಳುಗಳನ್ನು ಕಿವಿಗಳಲ್ಲಿಟ್ಟರು: "ಹಲಾಲ್ ಅತ್ಯಂತ ಸ್ಪಷ್ಟವಾಗಿದೆ ಮತ್ತು ಹರಾಮ್ ಕೂಡ ಅತ್ಯಂತ ಸ್ಪಷ್ಟವಾಗಿದೆ. ಇವೆರಡರ ಮಧ್ಯೆ ಸಂಶಯಾಸ್ಪದ ವಿಷಯಗಳಿವೆ. ಜನರಲ್ಲಿ ಹೆಚ್ಚಿನವರಿಗೂ ಅವುಗಳ ಬಗ್ಗೆ ಜ್ಞಾನವಿಲ್ಲ. ಯಾರು ಈ ಸಂಶಯಾಸ್ಪದ ವಿಷಯಗಳಿಂದ ದೂರವಿರುತ್ತಾನೋ, ಅವನು ತನ್ನ ಧರ್ಮ ಮತ್ತು ಘನತೆಯನ್ನು ಕಾಪಾಡಿಕೊಂಡನು. ಯಾರು ಈ ಸಂಶಯಾಸ್ಪದ ವಿಷಯಗಳಲ್ಲಿ ಒಳಪಡುತ್ತಾನೋ ಅವನು ಹರಾಮ್‌ನಲ್ಲಿ ಒಳಪಡುತ್ತಾನೆ. ಅವನ ಸ್ಥಿತಿಯು (ಪ್ರವೇಶಾನುಮತಿಯಿಲ್ಲದ) ಹುಲ್ಲುಗಾವಲಿನ ಅಂಚಿನಲ್ಲಿ ತನ್ನ ಕುರಿಮಂದೆಯನ್ನು ಮೇಯಿಸುವ ಒಬ್ಬ ಕುರಿಗಾಹಿಯಂತೆ. ಅವನ ಕುರಿಗಳು ಹುಲ್ಲುಗಾವಲಿನೊಳಗೆ ನುಗ್ಗಿ ಮೇಯುವ ಸಾಧ್ಯತೆಯಿದೆ. ಎಚ್ಚರಾ! ಪ್ರತಿಯೊಬ್ಬ ರಾಜನಿಗೂ ಒಂದು (ನಿಷೇಧಿತ) ವಲಯವಿದೆ. ಎಚ್ಚರಾ! ಅಲ್ಲಾಹು ನಿಷೇಧಿಸಿದ ಕಾರ್ಯಗಳು ಅವನ (ನಿಷೇಧಿತ) ವಲಯವಾಗಿದೆ. ಎಚ್ಚರಾ! ದೇಹದಲ್ಲಿ ಒಂದು ಮಾಂಸದ ತುಂಡಿದೆ. ಅದು ಸರಿಯಾದರೆ ಸಂಪೂರ್ಣ ದೇಹವು ಸರಿಯಾಗುತ್ತದೆ. ಅದು ಕೆಟ್ಟರೆ ಸಂಪೂರ್ಣ ದೇಹವು ಕೆಡುತ್ತದೆ. ಎಚ್ಚರಾ! ಅದು ಹೃದಯವಾಗಿದೆ."

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಂದು ದಿನ ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಭಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದೆ. ಆಗ ಅವರು ಹೇಳಿದರು: "ಮಗೂ! ನಾನು ನಿನಗೆ ಕೆಲವು ವಚನಗಳನ್ನು ಕಲಿಸುತ್ತೇನೆ. ಅಲ್ಲಾಹನ ಸಂರಕ್ಷಣೆ ಮಾಡು, ಅವನು ನಿನ್ನ ಸಂರಕ್ಷಣೆ ಮಾಡುವನು. ಅಲ್ಲಾಹನ ಸಂರಕ್ಷಣೆ ಮಾಡು, ಆಗ ನೀನು ಅವನನ್ನು ನಿನ್ನ ಮುಂಭಾಗದಲ್ಲಿ ಕಾಣಬಹುದು. ನೀನು ಬೇಡುವುದಾದರೆ ಅಲ್ಲಾಹನಲ್ಲಿ ಬೇಡು. ನೀನು ಸಹಾಯ ಯಾಚಿಸುವುದಾದರೆ, ಅಲ್ಲಾಹನಲ್ಲಿ ಸಹಾಯ ಯಾಚಿಸು. ತಿಳಿದುಕೋ! ನಿನಗೆ ಯಾವುದಾದರೂ ಉಪಕಾರ ಮಾಡಲು ಸಂಪೂರ್ಣ ಸಮುದಾಯವು ಒಗ್ಗಟ್ಟಾದರೂ ಕೂಡ, ಅಲ್ಲಾಹು ನಿನ್ನ ಪರವಾಗಿ ಏನು ಬರೆದಿಟ್ಟಿದ್ದಾನೋ ಅದಲ್ಲದೆ ಬೇರೇನೂ ಉಪಕಾರ ಮಾಡಲು ಅವರಿಗೆ ಸಾಧ್ಯವಿಲ್ಲ. ನಿನಗೆ ಏನಾದರೂ ತೊಂದರೆ ಮಾಡಲು ಸಂಪೂರ್ಣ ಸಮುದಾಯವು ಒಗ್ಗಟ್ಟಾದರೂ ಕೂಡ, ಅಲ್ಲಾಹು ನಿನಗೆ ವಿರುದ್ಧವಾಗಿ ಏನು ಬರೆದಿಟ್ಟಿದ್ದಾನೋ ಅದಲ್ಲದೆ ಬೇರೇನೂ ತೊಂದರೆ ಮಾಡಲು ಅವರಿಗೆ ಸಾಧ್ಯವಿಲ್ಲ. ಲೇಖನಿಯನ್ನು ಎತ್ತಲಾಗಿದೆ ಮತ್ತು ಗ್ರಂಥಗಳು ಒಣಗಿವೆ."

ಸುಫ್ಯಾನ್ ಬಿನ್ ಅಬ್ದುಲ್ಲಾ ಸಕಫಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನಗೆ ಇಸ್ಲಾಮಿನ ಬಗ್ಗೆ, ನಿಮ್ಮ ಹೊರತು ಬೇರೆ ಯಾರಲ್ಲೂ ಕೇಳಬೇಕಾಗಿ ಬರದಂತಹ ಒಂದು ಮಾತನ್ನು ಹೇಳಿಕೊಡಿ." ಅವರು ಹೇಳಿದರು: "ನಾನು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದೇನೆ ಎಂದು ಹೇಳಿರಿ, ನಂತರ ದೃಢವಾಗಿ ನಿಲ್ಲಿರಿ."

ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪರಸ್ಪರ ಪ್ರೀತಿ, ಕರುಣೆ ಮತ್ತು ಸಹಾನುಭೂತಿ ತೋರುವುದರಲ್ಲಿ ಸತ್ಯವಿಶ್ವಾಸಿಗಳ ಉದಾಹರಣೆಯು ಒಂದು ದೇಹದಂತೆ. ಅದರ ಒಂದು ಅಂಗವು ನೋವಿನಿಂದ ಬಳಲುವಾಗ, ದೇಹದ ಉಳಿದೆಲ್ಲಾ ಭಾಗಗಳು ನಿದ್ರಾಹೀನತೆ ಮತ್ತು ಜ್ವರದ ಮೂಲಕ ಅದಕ್ಕೆ ಸ್ಪಂದಿಸುತ್ತವೆ."

ಉಸ್ಮಾನ್ ಬಿನ್ ಅಫ್ಫಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸುತ್ತಾರೋ ಅವರ ಪಾಪಗಳು ಅವರ ದೇಹದಿಂದ ಹೊರಟುಹೋಗುತ್ತವೆ; ಎಲ್ಲಿಯವರೆಗೆಂದರೆ, ಅವರ ಉಗುರುಗಳ ಅಡಿಭಾಗದಿಂದಲೂ ಸಹ."

ಅಬೂ ಅಯ್ಯೂಬ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಮಲ ವಿಸರ್ಜನೆ ಮಾಡುವ ಸ್ಥಳಕ್ಕೆ ಹೋದರೆ ಕಿಬ್ಲದ ದಿಕ್ಕಿಗೆ ಮುಖ ಮಾಡಬೇಡಿ ಮತ್ತು ಅದರ ಕಡೆಗೆ ಬೆನ್ನು ಹಾಕಬೇಡಿ. ಬದಲಿಗೆ, ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಮುಖ ಮಾಡಿರಿ." ಅಬೂ ಅಯ್ಯೂಬ್ ಹೇಳಿದರು: ನಾವು ಶಾಮ್‌ಗೆ ಬಂದಾಗ ಅಲ್ಲಿ ಶೌಚಾಲಯಗಳನ್ನು ಕಿಬ್ಲದ ದಿಕ್ಕಿಗೆ ನಿರ್ಮಿಸಿರುವುದನ್ನು ಕಂಡೆವು. ಆಗ ನಾವು (ಆ ದಿಕ್ಕಿನಿಂದ) ಸರಿಯುತ್ತಿದ್ದೆವು ಮತ್ತು ಅಲ್ಲಾಹನಲ್ಲಿ ಕ್ಷಮೆಯಾಚಿಸುತ್ತಿದ್ದೆವು.

ಅಬೂ ಕತಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರು ಮೂತ್ರ ವಿಸರ್ಜನೆ ಮಾಡುವಾಗ ತನ್ನ ಜನನಾಂಗವನ್ನು ಬಲಗೈಯಲ್ಲಿ ಹಿಡಿಯಬಾರದು, ಬಲಗೈಯಿಂದ ಶೌಚವನ್ನು ಒರೆಸಬಾರದು, ಮತ್ತು ಪಾತ್ರೆಯೊಳಗೆ ಶ್ವಾಸ ಬಿಡಬಾರದು."