- ಅಲ್ಲಾಹನಿಗೆ ತನ್ನ ದಾಸರ ಮೇಲಿರುವ ಕರುಣೆಯನ್ನು ಮತ್ತು ಮನುಷ್ಯನು ಪಾಪ ಮಾಡಿ ಪಶ್ಚಾತ್ತಾಪಪಡುತ್ತಿರುವ ತನಕ ಅಲ್ಲಾಹು ಅವನಿಗೆ ಕ್ಷಮಿಸುತ್ತಾನೆಂದು ಈ ಹದೀಸ್ ತಿಳಿಸುತ್ತದೆ.
- ಸರ್ವಶಕ್ತನಾದ ಅಲ್ಲಾಹನಲ್ಲಿ ವಿಶ್ವಾಸವಿರುವ ದಾಸನು ಅಲ್ಲಾಹನ ಕ್ಷಮೆಯಲ್ಲಿ ನಿರೀಕ್ಷೆಯಿಡುತ್ತಾನೆ ಮತ್ತು ಅವನ ಶಿಕ್ಷೆಯನ್ನು ಭಯಪಡುತ್ತಾನೆ. ಆದ್ದರಿಂದ ಅವನು ತಕ್ಷಣ ಪಶ್ಚಾತ್ತಾಪ ಪಡುತ್ತಾನೆ ಮತ್ತು ಆ ಪಾಪವನ್ನು ಮುಂದುವರಿಸುವುದಿಲ್ಲ.
- ಸ್ವೀಕಾರಯೋಗ್ಯ ಪಶ್ಚಾತ್ತಾಪದ ಷರತ್ತುಗಳು: ಪಾಪವನ್ನು ತ್ಯಜಿಸುವುದು, ಅದರ ಬಗ್ಗೆ ವಿಷಾದ ವ್ಯಕ್ತಪಡಿಸುವುದು ಮತ್ತು ಅದನ್ನು ಮತ್ತೆ ಮಾಡದಿರಲು ದೃಢನಿರ್ಧಾರ ತಾಳುವುದು. ಆದರೆ, ಇತರರ ಆಸ್ತಿ, ಮಾನ ಅಥವಾ ಪ್ರಾಣಕ್ಕೆ ಸಂಬಂಧಿಸಿದ ಪಾಪಕ್ಕೆ ಪಶ್ಚಾತ್ತಾಪ ಪಡುವುದಾದರೆ, ನಾಲ್ಕನೇ ಹೆಚ್ಚುವರಿ ಷರತ್ತು ಇದೆ. ಅದು: ಅನ್ಯಾಯಕ್ಕೊಳಗಾದ ವ್ಯಕ್ತಿಯೊಡನೆ ಕ್ಷಮೆ ಕೇಳುವುದು ಅಥವಾ ಅವನ ಹಕ್ಕನ್ನು ಅವನಿಗೆ ಹಿಂದಿರುಗಿಸುವುದು.
- ಅಲ್ಲಾಹನ ಕುರಿತಾದ ಜ್ಞಾನದ ಪ್ರಾಮುಖ್ಯತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಆ ಜ್ಞಾನವು ವ್ಯಕ್ತಿಗೆ ಧಾರ್ಮಿಕ ವಿಷಯಗಳ ಬಗ್ಗೆ ಅರಿವು ಮೂಡಿಸುತ್ತದೆ. ಆದ್ದರಿಂದ ಅವನು ಪ್ರತಿ ಬಾರಿ ಪಾಪ ಮಾಡಿದಾಗಲೂ ಪಶ್ಚಾತ್ತಾಪ ಪಡುತ್ತಾನೆ. ಅವನು ಹತಾಶನಾಗುವುದಿಲ್ಲ ಅಥವಾ ಪಾಪಗಳಲ್ಲಿ ಮುಂದುವರಿಯುವುದಿಲ್ಲ.