/ ನಿಮ್ಮಲ್ಲೊಬ್ಬರು ಮೂತ್ರ ವಿಸರ್ಜನೆ ಮಾಡುವಾಗ ತನ್ನ ಜನನಾಂಗವನ್ನು ಬಲಗೈಯಲ್ಲಿ ಹಿಡಿಯಬಾರದು, ಬಲಗೈಯಿಂದ ಶೌಚವನ್ನು ಒರೆಸಬಾರದು, ಮತ್ತು ಪಾತ್ರೆಯೊಳಗೆ ಶ್ವಾಸ ಬಿಡಬಾರದು...

ನಿಮ್ಮಲ್ಲೊಬ್ಬರು ಮೂತ್ರ ವಿಸರ್ಜನೆ ಮಾಡುವಾಗ ತನ್ನ ಜನನಾಂಗವನ್ನು ಬಲಗೈಯಲ್ಲಿ ಹಿಡಿಯಬಾರದು, ಬಲಗೈಯಿಂದ ಶೌಚವನ್ನು ಒರೆಸಬಾರದು, ಮತ್ತು ಪಾತ್ರೆಯೊಳಗೆ ಶ್ವಾಸ ಬಿಡಬಾರದು...

ಅಬೂ ಕತಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರು ಮೂತ್ರ ವಿಸರ್ಜನೆ ಮಾಡುವಾಗ ತನ್ನ ಜನನಾಂಗವನ್ನು ಬಲಗೈಯಲ್ಲಿ ಹಿಡಿಯಬಾರದು, ಬಲಗೈಯಿಂದ ಶೌಚವನ್ನು ಒರೆಸಬಾರದು, ಮತ್ತು ಪಾತ್ರೆಯೊಳಗೆ ಶ್ವಾಸ ಬಿಡಬಾರದು."
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕೆಲವು ಶಿಷ್ಟಾಚಾರಗಳನ್ನು ವಿವರಿಸಿದ್ದಾರೆ. ಪುರುಷರು ಮೂತ್ರ ವಿಸರ್ಜನೆ ಮಾಡುವಾಗ ತಮ್ಮ ಜನನಾಂಗವನ್ನು ಬಲಗೈಯಲ್ಲಿ ಹಿಡಿಯುವುದನ್ನು ನಿಷೇಧಿಸಿದರು. ಮುಂದ್ವಾರದ ಅಥವಾ ಗುದದ್ವಾರದ ಮಾಲಿನ್ಯವನ್ನು ಬಲಗೈಯಿಂದ ಸ್ವಚ್ಛಗೊಳಿಸುವುದನ್ನು ನಿಷೇಧಿಸಿದರು. ಏಕೆಂದರೆ, ಬಲಗೈ ಗೌರವಾರ್ಹ ವಿಷಯಗಳಿಗೆ ಇರುವುದಾಗಿದೆ. ಅದೇ ರೀತಿ, ಮನುಷ್ಯನು ಕುಡಿಯುವ ಪಾತ್ರೆಯೊಳಗೆ ಶ್ವಾಸ ಬಿಡುವುದನ್ನು ನಿಷೇಧಿಸಿದರು.

Hadeeth benefits

  1. ಶಿಷ್ಟಾಚಾರ ಮತ್ತು ಶುಚಿತ್ವದ ವಿಷಯದಲ್ಲಿ ಇಸ್ಲಾಂ ಧರ್ಮವು ಮುಂಚೂಣಿಯಲ್ಲಿದೆಯೆಂದು ವಿವರಿಸಲಾಗಿದೆ.
  2. ಮಲಿನ ವಸ್ತುಗಳಿಂದ ದೂರವಿರಬೇಕೆಂದು ತಿಳಿಸಲಾಗಿದೆ. ಅವುಗಳನ್ನು ಮುಟ್ಟುವುದು ಅನಿವಾರ್ಯವಾದರೆ, ಎಡಗೈಯನ್ನು ಬಳಸಬೇಕಾಗಿದೆ.
  3. ಬಲಗೈಯ ಘನತೆ ಮತ್ತು ಎಡಗೈಯ ಮೇಲೆ ಅದಕ್ಕಿರುವ ಶ್ರೇಷ್ಠತೆಯನ್ನು ವಿವರಿಸಲಾಗಿದೆ.
  4. ಇಸ್ಲಾಮಿ ಧರ್ಮಶಾಸ್ತ್ರದ ಸಂಪೂರ್ಣತೆ ಮತ್ತು ಅದರ ಬೋಧನೆಗಳ ಸಮಗ್ರತೆಯನ್ನು ತಿಳಿಸಲಾಗಿದೆ.