ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರಿಗೆ ಅಶುದ್ಧಿಯುಂಟಾದರೆ...
ಶುದ್ಧಿಯು ನಮಾಝ್ ಸಿಂಧುವಾಗಲಿರುವ ಷರತ್ತುಗಳಲ್ಲಿ ಒಂದಾಗಿದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸಿದ್ದಾರೆ. ಆದ್ದರಿಂದ, ನಮಾಝ್ ನಿರ್...
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಉಮರ್ ಬಿನ್ ಖತ್ತಾಬ್ ನನಗೆ ತಿಳಿಸಿದರು: ಒಬ್ಬ ವ್ಯಕ್ತಿ ವುದೂ ನಿರ್ವಹಿಸಿದರು ಮತ್ತು ತನ್ನ ಪಾದದಲ್ಲಿ ಉಗುರಿನ ಗಾತ್ರದ...
ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ವ್ಯಕ್ತಿ ವುದೂ ಮುಗಿಸಿದಾಗ ಅವನ ಪಾದದಲ್ಲಿ ಉಗುರಿನ ಗಾತ್ರದ ಸ್ಥಳವನ್ನು ನೀರು ತಾಗಿಸದೆ ಬಿಟ್ಟ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾವು ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಂಗಡಿಗರೊಂದಿಗೆ ಮಕ್ಕಾದಿಂದ ಮದೀನಕ್ಕೆ ಪ್ರಯಾಣ ಬೆಳೆಸಿದರು. ದಾರಿಮಧ್ಯೆ ಅವರು ನೀರನ್ನು ಕಂಡರು. ಆಗ ಕೆಲವು ಸಹ...
ಅಮ್ರ್ ಬಿನ್ ಆಮಿರ್ ರಿಂದ, ಅವರು ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಕಡ್ಡಾಯ ನಮಾಝ್‌ಗಳಿಗೆ ಪ್ರತ್ಯೇಕವಾಗಿ ವುದೂ ನಿರ್ವಹಿಸುತ್ತಿದ್ದರು. ವುದೂ ಅಸಿಂಧುವಾಗಿರದಿದ್ದರೂ ಸಹ. ಅದರ ಪೂ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಒಂದೊಂದು ಬ...
ಕೆಲವು ಸಂದರ್ಭಗಳಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂವಿನ ಅಂಗಗಳನ್ನು ಒಂದೊಂದು ಬಾರಿ ತೊಳೆಯುತ್ತಾ ವುದೂ ನಿರ್ವಹಿಸುತ್ತಿದ್ದರು. ಅವರು ಮುಖ—ಬಾ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರಿಗೆ ಅಶುದ್ಧಿಯುಂಟಾದರೆ ಅವರು ವುದೂ ನಿರ್ವಹಿಸುವ ತನಕ ಅಲ್ಲಾಹು ಅವರ ನಮಾಝನ್ನು ಸ್ವೀಕರಿಸುವುದಿಲ್ಲ."

ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಉಮರ್ ಬಿನ್ ಖತ್ತಾಬ್ ನನಗೆ ತಿಳಿಸಿದರು: ಒಬ್ಬ ವ್ಯಕ್ತಿ ವುದೂ ನಿರ್ವಹಿಸಿದರು ಮತ್ತು ತನ್ನ ಪಾದದಲ್ಲಿ ಉಗುರಿನ ಗಾತ್ರದ ಸ್ಥಳವನ್ನು ಬಿಟ್ಟುಬಿಟ್ಟರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ನೋಡಿ ಹೇಳಿದರು: "ಹಿಂದಿರುಗಿ ಹೋಗು ಮತ್ತು ಅತ್ಯುತ್ತಮವಾಗಿ ವುದೂ ನಿರ್ವಹಿಸು." ಆ ವ್ಯಕ್ತಿ ಹಿಂದಿರುಗಿ ಹೋಗಿ, ನಂತರ ನಮಾಝ್ ನಿರ್ವಹಿಸಿದರು.

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾವು ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾದಿಂದ ಮದೀನಕ್ಕೆ ಹಿಂದಿರುಗಿದೆವು. ಹೀಗೆ ನಾವು ದಾರಿ ಮಧ್ಯೆ ಒಂದು ನೀರಿನ ಸ್ಥಳ ತಲುಪಿದಾಗ, ಅಸರ್ ನಮಾಝ್‌ನ ಸಮಯದಲ್ಲಿ ನಮ್ಮಲ್ಲಿ ಒಂದು ಗುಂಪು ಜನರು ಆತುರದಿಂದ ಓಡಿ ಆತುರದಿಂದ ವುದೂ ನಿರ್ವಹಿಸಿದರು. ನಾವು ಅವರ ಬಳಿಗೆ ತಲುಪಿದಾಗ, ಅವರ ಹಿಮ್ಮಡಿಗಳು ನೀರು ತಾಗದಂತೆ ಕಾಣುತ್ತಿದ್ದವು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಿಮ್ಮಡಿಗಳಿಗೆ ನರಕಾಗ್ನಿಯಿಂದ ವಿನಾಶವಿದೆ. ಪೂರ್ಣವಾಗಿ ವುದೂ ನಿರ್ವಹಿಸಿರಿ."

ಅಮ್ರ್ ಬಿನ್ ಆಮಿರ್ ರಿಂದ, ಅವರು ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ನಮಾಝ್‌ಗಳಿಗೂ ಪ್ರತ್ಯೇಕವಾಗಿ ವುದೂ ಮಾಡುತ್ತಿದ್ದರು. ನಾನು ಕೇಳಿದೆ: "ನೀವೇನು ಮಾಡುತ್ತಿದ್ದಿರಿ?" ಅವರು ಉತ್ತರಿಸಿದರು: "ವುದೂ ಅಸಿಂಧುವಾಗುವ ತನಕ ನಮಗೆ ಅದೇ ವುದೂ ಸಾಕಾಗುತ್ತಿತ್ತು."

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಒಂದೊಂದು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಿದರು."

ಅಬ್ದುಲ್ಲಾ ಬಿನ್ ಝೈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಎರಡೆರಡು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಿದರು."

ಉಸ್ಮಾನ್ ಬಿನ್ ಅಫ್ಫಾನ್ ರವರ ವಿಮೋಚಿತ ಗುಲಾಮರಾದ ಹುಮ್ರಾನ್ ರಿಂದ ವರದಿ: ಒಮ್ಮೆ ಉಸ್ಮಾನ್ ಬಿನ್ ಅಫ್ಫಾನ್ ವುದೂ ನಿರ್ವಹಿಸಲು ನೀರು ತರಿಸುವುದನ್ನು ಅವರು ಕಂಡರು. ಅವರು (ಉಸ್ಮಾನ್) ಪಾತ್ರೆಯಿಂದ ತಮ್ಮ ಎರಡು ಕೈಗಳಿಗೆ ನೀರು ಸುರಿದು, ಅವುಗಳನ್ನು ಮೂರು ಬಾರಿ ತೊಳೆದರು. ನಂತರ ಬಲಗೈಯನ್ನು ನೀರಿಗೆ ತೂರಿಸಿದರು. ನಂತರ ಬಾಯಿ ಮುಕ್ಕಳಿಸಿ ಮೂಗಿಗೆ ನೀರೆಳೆದು ಹೊರಬಿಟ್ಟರು. ನಂತರ ಮೂರು ಬಾರಿ ಮುಖವನ್ನು ತೊಳೆದರು. ಮೊಣಕೈಗಳ ವರೆಗೆ ಎರಡು ಕೈಗಳನ್ನು ಮೂರು ಬಾರಿ ತೊಳೆದರು. ನಂತರ ತಲೆಯನ್ನು ಸವರಿದರು. ನಂತರ ಎರಡು ಕಾಲುಗಳನ್ನು ಮೂರು ಬಾರಿ ತೊಳೆದರು. ನಂತರ ಹೇಳಿದರು: "ನಾನಿಲ್ಲಿ ವುದೂ ನಿರ್ವಹಿಸಿದಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸುವುದನ್ನು ನಾನು ಕಂಡಿದ್ದೇನೆ." ಅವರು (ಪ್ರವಾದಿಯವರು) ಹೇಳಿದರು: "ಯಾರು ನಾನಿಲ್ಲಿ ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ, ಇಹಲೋಕದ ಯಾವುದೇ ವಿಷಯದ ಬಗ್ಗೆ ಏನೂ ಯೋಚಿಸದೆ ಎರಡು ರಕಅತ್ ನಮಾಝ್ ನಿರ್ವಹಿಸುತ್ತಾರೋ ಅವರ ಗತ ಪಾಪಗಳನ್ನು ಅಲ್ಲಾಹು ಕ್ಷಮಿಸುತ್ತಾನೆ."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರು ವುದೂ (ಅಂಗಸ್ನಾನ) ಮಾಡುವಾಗ, ಮೂಗಿಗೆ ನೀರನ್ನು ಎಳೆದು ಹೊರಬಿಡಲಿ. ನಿಮ್ಮಲ್ಲೊಬ್ಬನು ಇಸ್ತಿಜ್ಮಾರ್ (ಕಲ್ಲು ಮುಂತಾದ ವಸ್ತುಗಳಿಂದ ಶುಚಿ) ಮಾಡುವಾಗ ಬೆಸ ಸಂಖ್ಯೆಯಲ್ಲಿ ಮಾಡಲಿ. ನಿಮ್ಮಲ್ಲೊಬ್ಬರು ನಿದ್ದೆಯಿಂದ ಎದ್ದರೆ ಕೈಯನ್ನು ನೀರಿನ ಪಾತ್ರೆಯೊಳಗೆ ಮುಳುಗಿಸುವ ಮೊದಲು ಅದನ್ನು ತೊಳೆಯಲಿ. ಏಕೆಂದರೆ ರಾತ್ರಿ ತನ್ನ ಕೈ ಎಲ್ಲೆಲ್ಲಾ ಇತ್ತೆಂದು ಯಾರಿಗೂ ತಿಳಿದಿರುವುದಿಲ್ಲ." ಮುಸ್ಲಿಂರ ವರದಿಯಲ್ಲಿ ಹೀಗಿದೆ: "ನಿಮ್ಮಲ್ಲೊಬ್ಬರು ನಿದ್ದೆಯಿಂದ ಎದ್ದರೆ ತನ್ನ ಕೈಯನ್ನು ನೀರಿನ ಪಾತ್ರೆಯೊಳಗೆ ಮುಳುಗಿಸುವ ಮೊದಲು ಮೂರು ಬಾರಿ ತೊಳೆಯಲಿ. ಏಕೆಂದರೆ ರಾತ್ರಿ ತನ್ನ ಕೈ ಎಲ್ಲೆಲ್ಲಾ ಇತ್ತೆಂದು ಅವರಿಗೆ ತಿಳಿದಿರುವುದಿಲ್ಲ."

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸಮಾಧಿಗಳ ಮೂಲಕ ಹಾದು ಹೋಗುತ್ತಿದ್ದಾಗ ಹೇಳಿದರು: "ಇವರಿಬ್ಬರಿಗೂ ಶಿಕ್ಷೆ ನೀಡಲಾಗುತ್ತಿದೆ. ಇವರಿಗೆ ಶಿಕ್ಷೆ ನೀಡಲಾಗುತ್ತಿರುವುದು ಯಾವುದೋ ದೊಡ್ಡ ತಪ್ಪಿಗಲ್ಲ. ಇವರಲ್ಲೊಬ್ಬನು ಮೂತ್ರದ ಮಾಲಿನ್ಯದಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಿರಲಿಲ್ಲ. ಇನ್ನೊಬ್ಬನು ಚಾಡಿ ಮಾತುಗಳೊಂದಿಗೆ ನಡೆದಾಡುತ್ತಿದ್ದ." ನಂತರ ಅವರು ಖರ್ಜೂರದ ಹಸಿಕೊಂಬೆಯನ್ನು ತೆಗೆದು ಎರಡು ತುಂಡು ಮಾಡಿದರು. ನಂತರ ಒಂದೊಂದು ಸಮಾಧಿಯ ಮೇಲೆ ಒಂದೊಂದನ್ನು ನೆಟ್ಟರು. ಸಹಚರರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಾವೇಕೆ ಹೀಗೆ ಮಾಡಿದಿರಿ?" ಅವರು ಉತ್ತರಿಸಿದರು: "ಅವು ಒಣಗುವ ತನಕ ಅವರಿಗೆ ಶಿಕ್ಷೆಯಲ್ಲಿ ರಿಯಾಯಿತಿ ಸಿಗಬಹುದು."

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯವನ್ನು ಪ್ರವೇಶಿಸುವಾಗ,ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಖುಬುಸಿ ವಲ್ ಖಬಾಇಸ್ (ಓ ಅಲ್ಲಾಹ್, ಗಂಡು ಶೈತಾನರಿಂದ ಮತ್ತು ಹೆಣ್ಣು ಶೈತಾನರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ) ಎಂದು ಹೇಳುತ್ತಿದ್ದರು."

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸಿವಾಕ್ (ಹಲ್ಲುಜ್ಜುವುದು) ಬಾಯಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅಲ್ಲಾಹನನ್ನು ಸಂಪ್ರೀತಗೊಳಿಸುತ್ತದೆ.”

ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಿದ್ರೆಯಿಂದ ಎದ್ದರೆ, ಹಲ್ಲುಜ್ಜುವ ಕಡ್ಡಿಯಿಂದ ತಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತಿದ್ದರು."