/ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ನಮಾಝ್‌ಗಳಿಗೂ ಪ್ರತ್ಯೇಕವಾಗಿ ವುದೂ ಮಾಡುತ್ತಿದ್ದರು...

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ನಮಾಝ್‌ಗಳಿಗೂ ಪ್ರತ್ಯೇಕವಾಗಿ ವುದೂ ಮಾಡುತ್ತಿದ್ದರು...

ಅಮ್ರ್ ಬಿನ್ ಆಮಿರ್ ರಿಂದ, ಅವರು ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ನಮಾಝ್‌ಗಳಿಗೂ ಪ್ರತ್ಯೇಕವಾಗಿ ವುದೂ ಮಾಡುತ್ತಿದ್ದರು. ನಾನು ಕೇಳಿದೆ: "ನೀವೇನು ಮಾಡುತ್ತಿದ್ದಿರಿ?" ಅವರು ಉತ್ತರಿಸಿದರು: "ವುದೂ ಅಸಿಂಧುವಾಗುವ ತನಕ ನಮಗೆ ಅದೇ ವುದೂ ಸಾಕಾಗುತ್ತಿತ್ತು."
رواه البخاري

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಕಡ್ಡಾಯ ನಮಾಝ್‌ಗಳಿಗೆ ಪ್ರತ್ಯೇಕವಾಗಿ ವುದೂ ನಿರ್ವಹಿಸುತ್ತಿದ್ದರು. ವುದೂ ಅಸಿಂಧುವಾಗಿರದಿದ್ದರೂ ಸಹ. ಅದರ ಪೂರ್ಣ ಪ್ರತಿಫಲ ಮತ್ತು ಶ್ರೇಷ್ಠತೆಯನ್ನು ಪಡೆಯುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದರು. ವುದೂ ಅಸಿಂಧುವಾಗದಿದ್ದರೆ, ಒಂದೇ ವುದೂನಲ್ಲಿ ಒಂದಕ್ಕಿಂತ ಹೆಚ್ಚು ಕಡ್ಡಾಯ ನಮಾಝ್‌ಗಳನ್ನು ನಿರ್ವಹಿಸಬಹುದು.

Hadeeth benefits

  1. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪದೇ ಪದೇ ನಿರ್ವಹಿಸುತ್ತಿದ್ದ ಕರ್ಮವು ವುದೂ ಆಗಿತ್ತು. ಪೂರ್ಣತೆಯನ್ನು ಪಡೆಯುವುದಕ್ಕಾಗಿ ಅವರು ಎಲ್ಲಾ ನಮಾಝ್‌ಗಳಿಗೂ ಪ್ರತ್ಯೇಕವಾಗಿ ವುದೂ ನಿರ್ವಹಿಸುತ್ತಿದ್ದರು.
  2. ಪ್ರತಿ ನಮಾಝಿಗೂ ವುದೂ ನಿರ್ವಹಿಸುವುದು ಅಪೇಕ್ಷಣೀಯವಾಗಿದೆ.
  3. ಒಂದೇ ವುದೂನಲ್ಲಿ ಒಂದಕ್ಕಿಂತ ಹೆಚ್ಚು ನಮಾಝ್ ನಿರ್ವಹಿಸಬಹುದು.