/ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಒಂದೊಂದು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಿದರು...

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಒಂದೊಂದು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಿದರು...

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಒಂದೊಂದು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಿದರು."
رواه البخاري

ವಿವರಣೆ

ಕೆಲವು ಸಂದರ್ಭಗಳಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂವಿನ ಅಂಗಗಳನ್ನು ಒಂದೊಂದು ಬಾರಿ ತೊಳೆಯುತ್ತಾ ವುದೂ ನಿರ್ವಹಿಸುತ್ತಿದ್ದರು. ಅವರು ಮುಖ—ಬಾಯಿ ಮುಕ್ಕಳಿಸುವುದು ಮತ್ತು ಮೂಗಿಗೆ ನೀರೆಳೆಯುವುದು ಅದರಲ್ಲಿ ಒಳಪಡುತ್ತದೆ—, ಕೈಗಳು ಮತ್ತು ಕಾಲುಗಳನ್ನು ಒಂದೊಂದು ಬಾರಿ ತೊಳೆಯುತ್ತಿದ್ದರು. ವುದೂವಿನ ಅಂಗಗಳನ್ನು ಕನಿಷ್ಠ ಒಂದು ಬಾರಿ ತೊಳೆಯುವುದು ಕಡ್ಡಾಯವಾಗಿದೆ.

Hadeeth benefits

  1. ವುದೂವಿನ ಅಂಗಗಳನ್ನು ಒಂದು ಬಾರಿ ತೊಳೆಯುವುದು ಕಡ್ಡಾಯವಾಗಿದೆ. ಅದಕ್ಕಿಂತ ಹೆಚ್ಚು ತೊಳೆಯುವುದು ಅಪೇಕ್ಷಣೀಯವಾಗಿದೆ.
  2. ಕೆಲವೊಮ್ಮೆ ಅಂಗಗಳನ್ನು ಒಂದೊಂದು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಬೇಕು.
  3. ತಲೆಯನ್ನು ಒಂದು ಬಾರಿ ಮಾತ್ರ ಸವರಬೇಕು.