- ವುದೂ ನಿರ್ವಹಿಸುವಾಗ ಎರಡು ಪಾದಗಳನ್ನು ತೊಳೆಯುವುದು ಕಡ್ಡಾಯವಾಗಿದೆ. ಏಕೆಂದರೆ, ಅವುಗಳನ್ನು ಸವರುವುದು ಸಾಕಾಗುತ್ತಿದ್ದರೆ, ಹಿಮ್ಮಡಿಯನ್ನು ತೊಳೆಯದವರಿಗೆ ಅವರು ನರಕಾಗ್ನಿಯ ಬಗ್ಗೆ ಎಚ್ಚರಿಸುತ್ತಿರಲಿಲ್ಲ.
- ತೊಳೆಯಬೇಕಾದ ಅಂಗಗಳನ್ನು ಪೂರ್ಣವಾಗಿ ನೀರು ಹರಿಸಿ ತೊಳೆಯುವುದು ಕಡ್ಡಾಯವಾಗಿದೆ. ಕಡ್ಡಾಯವಾಗಿ ಶುದ್ಧೀಕರಿಸಬೇಕಾದ ಅಂಗವನ್ನು—ಅದರ ಸಣ್ಣ ಭಾಗವನ್ನಾದರೂ ಸರಿ—ಯಾರು ಉದ್ದೇಶಪೂರ್ವಕವಾಗಿ ಅಥವಾ ಅಸಡ್ಡೆಯಿಂದ ನಿರ್ಲಕ್ಷಿಸುತ್ತಾರೋ, ಅವರ ನಮಾಝ್ ಸಿಂಧುವಾಗುವುದಿಲ್ಲ.
- ಅರಿವಿಲ್ಲದವರಿಗೆ ಕಲಿಸುವುದರ ಮತ್ತು ಮಾರ್ಗದರ್ಶನ ಮಾಡುವುದರ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.
- ಯಾರಾದರೂ ಕಡ್ಡಾಯ ಕಾರ್ಯಗಳನ್ನು ಮತ್ತು ಐಚ್ಛಿಕ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದು ಕಂಡರೆ ತಿಳಿದವರು ಅದನ್ನು ಸೂಕ್ತವಾದ ಶೈಲಿಯಲ್ಲಿ ಖಂಡಿಸಬೇಕು.
- ಮುಹಮ್ಮದ್ ಬಿನ್ ಇಸ್‌ಹಾಕ್ ದೆಹ್ಲವಿ ಹೇಳಿದರು: ವುದೂವನ್ನು ಪೂರ್ಣವಾಗಿ ನಿರ್ವಹಿಸುವುದರಲ್ಲಿ ಮೂರು ವಿಧಗಳಿವೆ: ಕಡ್ಡಾಯ, ಅಂದರೆ ತೊಳೆಯಬೇಕಾದ ಸ್ಥಳಕ್ಕೆ ಪೂರ್ಣ ಗಮನ ನೀಡಿ ಒಂದು ಬಾರಿ ತೊಳೆಯುವುದು. ಐಚ್ಛಿಕ, ಅಂದರೆ ಮೂರು ಬಾರಿ ತೊಳೆಯುವುದು. ಅಪೇಕ್ಷಣೀಯ, ಅಂದರೆ ಮೂರು ಬಾರಿ ತೊಳೆಯುವುದನ್ನು ದೀರ್ಘವಾಗಿ ನಿರ್ವಹಿಸುವುದು.