- ಒಳಿತನ್ನು ಆದೇಶಿಸಲು ಮತ್ತು ಅಜ್ಞಾನಿಗಳಿಗೆ ಹಾಗೂ ನಿರ್ಲಕ್ಷ್ಯ ವಹಿಸುವವರಿಗೆ ಮಾರ್ಗನಿರ್ದೇಶನ ನೀಡಲು ತ್ವರೆ ಮಾಡುವುದು ಕಡ್ಡಾಯವಾಗಿದೆ. ವಿಶೇಷವಾಗಿ ಅವರ ಪ್ರಮಾದವು ಆರಾಧನೆಯನ್ನು ನಿಷ್ಫಲಗೊಳಿಸುವ ರೀತಿಯಲ್ಲಿದ್ದರೆ.
- ವುದೂವಿನ ಎಲ್ಲಾ ಅಂಗಗಳಿಗೂ ನೀರನ್ನು ತಲುಪಿಸುವುದು ಕಡ್ಡಾಯವಾಗಿದೆ. ಯಾವುದೇ ಅಂಗದ ಒಂದು ಭಾಗವನ್ನು—ಅದು ಚಿಕ್ಕ ಭಾಗವಾದರೂ ಸರಿ—ಬಿಟ್ಟರೆ ಅವನ ವುದೂ ಸಿಂಧುವಾಗುವುದಿಲ್ಲ. ವುದೂ ನಿರ್ವಹಿಸಿ ತುಂಬಾ ಹೊತ್ತು ಕಳೆದಿದ್ದರೆ ವುದೂವನ್ನು ಪುನಃ ನಿರ್ವಹಿಸುವುದು ಕಡ್ಡಾಯವಾಗಿದೆ.
- ಅತ್ಯುತ್ತಮವಾಗಿ ವುದೂ ನಿರ್ವಹಿಸಬೇಕೆಂದು ಶರಿಯತ್ (ಧರ್ಮಶಾಸ್ತ್ರ) ಆದೇಶಿಸಿದೆ. ಅದು ಹೇಗೆಂದರೆ, ವುದೂವನ್ನು ಪೂರ್ಣವಾಗಿ ಮತ್ತು ಶಾಸ್ತ್ರವು ಆದೇಶಿಸಿದ ರೀತಿಯಲ್ಲಿ ನಿರ್ವಹಿಸುವುದು.
- ಎರಡು ಪಾದಗಳು ವುದೂವಿನ ಅಂಗಗಳಲ್ಲಿ ಒಳಪಡುತ್ತವೆ. ಅವುಗಳ ಮೇಲೆ ಸವರಿದರೆ ಸಾಕಾಗುವುದಿಲ್ಲ. ಬದಲಿಗೆ, ಅವುಗಳನ್ನು ತೊಳೆಯುವುದು ಕಡ್ಡಾಯವಾಗಿದೆ.
- ವುದೂವಿನ ಅಂಗಗಳ ನಡುವೆ ಮುಂದುವರಿಕೆ (ಮುವಾಲಾತ್) ಕಾಪಾಡಬೇಕು. ಅಂದರೆ ಪ್ರತಿಯೊಂದು ಅಂಗವನ್ನು ಅದಕ್ಕಿಂತ ಮೊದಲು ತೊಳೆದ ಅಂಗವು ಒಣಗುವ ಮೊದಲು ತೊಳೆಯಬೇಕು.
- ಅಜ್ಞಾನ ಮತ್ತು ಮರೆವು ಕಡ್ಡಾಯ ಕಾರ್ಯದಿಂದ ವಿನಾಯಿತಿ ನೀಡುವುದಿಲ್ಲ. ಅವು ಪಾಪಕೃತ್ಯದಿಂದ ಮಾತ್ರ ವಿನಾಯಿತಿ ನೀಡುತ್ತದೆ. ಅಜ್ಞಾನದಿಂದಾಗಿ ಸರಿಯಾಗಿ ವುದೂ ನಿರ್ವಹಿಸದ ಈ ವ್ಯಕ್ತಿಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡ್ಡಾಯ ಕಾರ್ಯದಿಂದ, ಅಂದರೆ ವುದೂ ನಿರ್ವಹಿಸುವುದರಿಂದ ವಿನಾಯಿತಿ ನೀಡಲಿಲ್ಲ. ಅವರು ಆತನಿಗೆ ಪುನಃ ವುದೂ ನಿರ್ವಹಿಸುವಂತೆ ಆದೇಶಿಸಿದರು.