- ವುದೂ ಪ್ರಾರಂಭಿಸುವಾಗ ಕೈಗಳನ್ನು ಪಾತ್ರೆಗೆ ತೂರಿಸುವ ಮೊದಲು ಅವುಗಳನ್ನು ತೊಳೆಯುವುದು ಅಪೇಕ್ಷಣೀಯವಾಗಿದೆ. ಅದು ನಿದ್ದೆಯಿಂದ ಎದ್ದ ಸಂದರ್ಭವಲ್ಲದಿದ್ದರೂ ಸಹ. ನಿದ್ದೆಯಿಂದ ಎದ್ದ ಸಂದರ್ಭವಾಗಿದ್ದರೆ, ಕೈಗಳನ್ನು ತೊಳೆಯುವುದು ಕಡ್ಡಾಯವಾಗಿದೆ.
- ವಿದ್ಯಾರ್ಥಿಗಳು ವಿಷಯವನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳಲು ಮತ್ತು ಆ ಜ್ಞಾನವು ಅವರಲ್ಲಿ ಸದಾ ಉಳಿದುಕೊಳ್ಳಲು ಅಧ್ಯಾಪಕರು ಪ್ರಾಯೋಗಿಕವಾಗಿ ಮಾಡಿ ತೋರಿಸುವುದು ಮುಂತಾದ ಅತ್ಯಂತ ಪರಿಣಾಮಕಾರಿ ಮಾರ್ಗಗಳನ್ನು ಬಳಸಬೇಕು.
- ನಮಾಝ್ ಮಾಡುವವರು (ನಮಾಝಿನ ಏಕಾಗ್ರತೆಗೆ ಭಂಗ ತರುವ) ಭೌತಿಕ ಆಲೋಚನೆಗಳಿಂದ ದೂರವಿರಬೇಕು. ಹೃದಯ ಸಾನಿಧ್ಯತೆಯಿಂದ ಮಾಡುವ ನಮಾಝ್ ಸಂಪೂರ್ಣ ಮತ್ತು ಪರಿಪೂರ್ಣವಾದ ನಮಾಝ್ ಆಗಿದೆ. ನಮಾಝ್ ಮಾಡುವಾಗ ಮನಸ್ಸನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟವಾದರೂ, ಅದಕ್ಕಾಗಿ ಪರಿಶ್ರಮ ಪಡಬೇಕು. ಮನಸ್ಸನ್ನು ಆಲೋಚನೆಗಳಲ್ಲಿ ವಿಹರಿಸುವಂತೆ ಬಿಟ್ಟುಬಿಡಬಾರದು.
- ವುದೂ ನಿರ್ವಹಿಸುವಾಗ ಬಲಭಾಗಕ್ಕೆ ಆದ್ಯತೆ ನೀಡುವುದು ಅಪೇಕ್ಷಣೀಯವಾಗಿದೆ.
- ಬಾಯಿ ಮುಕ್ಕಳಿಸುವುದು, ಮೂಗಿಗೆ ನೀರೆಳೆಯುವುದು, ಮೂಗಿನಿಂದ ನೀರು ಹೊರಬಿಡುವುದು ಇವುಗಳನ್ನು ಅನುಕ್ರಮವಾಗಿ ನಿರ್ವಹಿಸಬೇಕು.
- ಮುಖ, ಕೈ ಮತ್ತು ಕಾಲುಗಳನ್ನು ಮೂರು ಬಾರಿ ತೊಳೆಯುವುದು ಅಪೇಕ್ಷಣೀಯವಾಗಿದೆ. ಒಂದು ಬಾರಿ ತೊಳೆಯುವುದು ಕಡ್ಡಾಯವಾಗಿದೆ.
- ಅಲ್ಲಾಹು ಗತಪಾಪಗಳನ್ನು ಕ್ಷಮಿಸಬೇಕಾದರೆ, ಹದೀಸಿನಲ್ಲಿ ವಿವರಿಸಲಾದ ರೀತಿಯಲ್ಲಿ ವುದೂ ನಿರ್ವಹಿಸುವುದು ಮತ್ತು ಎರಡು ರಕಅತ್ ನಮಾಝ್ ನಿರ್ವಹಿಸುವುದು ಎಂಬ ಎರಡು ವಿಷಯಗಳ ಪಾಲನೆಯಾಗಬೇಕು.
- ವುದೂವಿನ ಪ್ರತಿಯೊಂದು ಅಂಗಕ್ಕೂ ಒಂದು ವ್ಯಾಪ್ತಿಯಿದೆ. ಮುಖದ ವ್ಯಾಪ್ತಿಯು ಹಣೆಯಲ್ಲಿ ಕೂದಲು ಬೆಳೆಯುವ ಸ್ಥಳದಿಂದ ತೊಡಗಿ ಗಡ್ಡ ಮತ್ತು ಗಲ್ಲದವರೆಗೆ ಲಂಬವಾಗಿ; ಮತ್ತು ಒಂದು ಕಿವಿಯಿಂದ ಇನ್ನೊಂದು ಕಿವಿಯವರೆಗೆ ಅಡ್ಡವಾಗಿ. ಕೈಯ ವ್ಯಾಪ್ತಿಯು ಬೆರಳಿನ ತುದಿಗಳಿಂದ ಮೊಣಕೈಯವರೆಗೆ. ಮೊಣಕೈ ಎಂದರೆ ಕೈ ಮತ್ತು ತೋಳು ಜೋಡಣೆಯಾಗುವ ಸ್ಥಳ. ತಲೆಯ ವ್ಯಾಪ್ತಿಯು ಮುಖದ ಸುತ್ತಲೂ ಕೂದಲು ಬೆಳೆಯುವ ಸ್ಥಳದಿಂದ ತೊಡಗಿ ಕತ್ತಿನ ಮೇಲ್ಭಾಗದವರೆಗೆ. ಎರಡು ಕಿವಿಗಳನ್ನು ಸವರುವುದು ಇದರಲ್ಲಿ ಒಳಪಡುತ್ತದೆ. ಕಾಲಿನ ವ್ಯಾಪ್ತಿಯು ಪಾದ ಮತ್ತು ಕಣಕಾಲು ಜೋಡಣೆಯಾಗುವ ಹರಡುಗಂಟುಗಳು ಸೇರಿದಂತೆ ಸಂಪೂರ್ಣ ಪಾದ.