- ರಾತ್ರಿ ನಿದ್ರೆಯಿಂದ ಎದ್ದಾಗ ಹಲ್ಲು ಕಡ್ಡಿಯಿಂದ ಬಾಯಿ ಸ್ವಚ್ಛ ಮಾಡಬೇಕೆಂಬ ಧಾರ್ಮಿಕ ನಿಯಮಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಏಕೆಂದರೆ, ನಿದ್ರೆಯಿಂದ ಬಾಯಿ ದುರ್ವಾಸನೆ ಬೀರುತ್ತದೆ ಮತ್ತು ಹಲ್ಲು ಕಡ್ಡಿಯು (ಮಿಸ್ವಾಕ್) ಅದನ್ನು ಸ್ವಚ್ಛಗೊಳಿಸುವ ಸಾಧನವಾಗಿದೆ.
- ಬಾಯಿ ದುರ್ವಾಸನೆ ಬೀರುವಾಗಲೆಲ್ಲಾ ಅದನ್ನು ಹಲ್ಲು ಕಡ್ಡಿಯಿಂದ ಸ್ವಚ್ಛ ಮಾಡುವ ಧಾರ್ಮಿಕ ನಿಯಮವನ್ನು ಈ ಹದೀಸಿನ ಆಧಾರದಲ್ಲಿ ಇನ್ನಷ್ಟು ಪ್ರಬಲಗೊಳಿಸಲಾಗಿದೆ.
- ಸ್ವಚ್ಛತೆಯು ಸಾಮಾನ್ಯವಾಗಿರುವ ಒಂದು ಧಾರ್ಮಿಕ ನಿಯಮವಾಗಿದೆ. ಅದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯಲ್ಲಿದೆ ಮತ್ತು ಉದಾತ್ತ ಶಿಷ್ಟಾಚಾರಗಳಲ್ಲಿ ಒಂದಾಗಿದೆ.
- ಬಾಯಿಯನ್ನು ಸ್ವಚ್ಛಗೊಳಿಸುವುದರಲ್ಲಿ ಹಲ್ಲು, ಒಸಡು ಮತ್ತು ನಾಲಗೆಯನ್ನು ಸ್ವಚ್ಛಗೊಳಿಸುವುದು ಕೂಡ ಒಳಪಡುತ್ತದೆ.
- ಹಲ್ಲು ಕಡ್ಡಿ (ಮಿಸ್ವಾಕ್) ಎಂದರೆ ಅರಾಕ್ ಮುಂತಾದ ಮರಗಳಿಂದ ತಯಾರಿಸುವ ಕಡ್ಡಿ. ಬಾಯಿ ಮತ್ತು ಹಲ್ಲುಗಳನ್ನು ಸ್ವಚ್ಛ ಮಾಡಲು ಇದನ್ನು ಬಳಸಲಾಗುತ್ತದೆ. ಅದು ಬಾಯಿಗೆ ಸುವಾಸನೆಯನ್ನು ನೀಡುತ್ತದೆ ಮತ್ತು ದುರ್ವಾಸನೆಯನ್ನು ನಿವಾರಿಸುತ್ತದೆ.