- ಅಶುದ್ಧಿಯಲ್ಲಿರುವವರು—ಅವರು ದೊಡ್ಡ ಅಶುದ್ಧಿಯಲ್ಲಿದ್ದರೆ ಸ್ನಾನ ಮಾಡುವ ತನಕ ಮತ್ತು ಚಿಕ್ಕ ಅಶುದ್ಧಿಯಲ್ಲಿದ್ದರೆ ವುದೂ ನಿರ್ವಹಿಸುವ ತನಕ ಅವರ ನಮಾಝ್ ಸ್ವೀಕರಿಸಲ್ಪಡುವುದಿಲ್ಲ.
- ವುದೂ ಎಂದರೆ, ಅಂಗೈಗಳನ್ನು ತೊಳೆಯುವುದು, ನೀರನ್ನು ಬಾಯಿಗೆ ಹಾಕಿ ಮುಕ್ಕಳಿಸಿ ಉಗಿಯುವುದು, ನಂತರ ಶ್ವಾಸದೊಂದಿಗೆ ನೀರನ್ನು ಮೂಗಿನೊಳಗೆ ಎಳೆದು ರಭಸವಾಗಿ ಹೊರಬಿಡುವುದು, ನಂತರ ಮುಖವನ್ನು ಮೂರು ಬಾರಿ ತೊಳೆಯುವುದು, ನಂತರ ಮೊಣಕೈಗಳನ್ನು ಸೇರಿಸಿ ಎರಡು ಕೈಗಳನ್ನು ಮೂರು ಬಾರಿ ತೊಳೆಯುವುದು, ನಂತರ ತಲೆಯನ್ನು ಸಂಪೂರ್ಣವಾಗಿ ಒಂದು ಬಾರಿ ಸವರುವುದು, ನಂತರ ಕಾಲಿನ ಹರಡುಗಂಟುಗಳನ್ನು ಸೇರಿಸಿ ಎರಡು ಕಾಲುಗಳನ್ನು ಮೂರು ಬಾರಿ ತೊಳೆಯುವುದು.