ಅಬ್ದುಲ್ಲಾ ಬಿನ್ ಮಸ್‍ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:...
ಧಾರ್ಮಿಕ ಮತ್ತು ಲೌಕಿಕ ವಿಷಯಗಳಲ್ಲಿ ಹಾಗೂ ಮಾತು ಮತ್ತು ಕೆಲಸಗಳಲ್ಲಿ, ಯಾವುದೇ ಮಾರ್ಗದರ್ಶನ ಅಥವಾ ಜ್ಞಾನವಿಲ್ಲದೆ ಅತಿರೇಕಕ್ಕೆ ಹೋಗುವವರು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ...
ಅದೀ ಬಿನ್ ಹಾತಿಂ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಹೂದಿಗಳು (ಅಲ್ಲಾಹನ) ಕೋಪಕ್ಕೆ ಪ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಹೂದಿಗಳು ಅಲ್ಲಾಹನ ಕೋಪಕ್ಕೆ ಪಾತ್ರರಾಗಿದ್ದಾರೆ. ಏಕೆಂದರೆ ಅವರು ಸತ್ಯವನ್ನು ತಿಳಿದೂ ಸ...
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮು...
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)—ಅವರು ಸತ್ಯವಂತರು ಮತ್ತು ಸ...
ಇಬ್ನ್ ಮಸ್‌ಊದ್ ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ತಿಳಿಸಿದರು. ಅವರು ಮಾತಿನಲ್ಲಿ ಸತ್ಯವಂತರಾಗಿದ್ದಾರೆ ಮತ್ತು ಅಂಗೀಕರಿಸ...
ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಹೇಳಿದರು: “ನಿಮ್ಮಲ್ಲೊಬ್ಬನಿಗ...
ಮನುಷ್ಯನ ಚಪ್ಪಲಿಯ ಮೇಲಿರುವ ತೊಗಲಪಟ್ಟಿಗಿಂತಲೂ ಸ್ವರ್ಗ ಮತ್ತು ನರಕ ಅವನಿಗೆ ಹತ್ತಿರದಲ್ಲಿದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸಿದ್...

ಅಬ್ದುಲ್ಲಾ ಬಿನ್ ಮಸ್‍ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ತೀವ್ರವಾದಿಗಳು ನಾಶವಾದರು.” ಅವರು ಇದನ್ನು ಮೂರು ಸಲ ಹೇಳಿದರು.

ಅದೀ ಬಿನ್ ಹಾತಿಂ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಹೂದಿಗಳು (ಅಲ್ಲಾಹನ) ಕೋಪಕ್ಕೆ ಪಾತ್ರರಾದವರು ಮತ್ತು ಕ್ರೈಸ್ತರು ದಾರಿತಪ್ಪಿದವರು."

ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮುಂಚೆ ಎಲ್ಲಾ ಸೃಷ್ಟಿಗಳ ವಿಧಿ ನಿರ್ಣಯಗಳನ್ನು ದಾಖಲಿಸಿದ್ದಾನೆ." ಅವರು ಹೇಳಿದರು: "ಆಗ ಅವನ ಅರ್ಶ್ ನೀರಿನ ಮೇಲಿತ್ತು."

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)—ಅವರು ಸತ್ಯವಂತರು ಮತ್ತು ಸತ್ಯವಂತರೆಂದು ಅಂಗೀಕರಿಸಲ್ಪಟ್ಟವರು—ತಿಳಿಸಿದರು: ನಿಶ್ಚಯವಾಗಿಯೂ, ನಿಮ್ಮಲ್ಲಿ ಪ್ರತಿಯೊಬ್ಬನ ಸೃಷ್ಟಿಯನ್ನು ಅವನ ತಾಯಿಯ ಉದರದಲ್ಲಿ ನಲ್ವತ್ತು ದಿನ-ರಾತ್ರಿಗಳ ಕಾಲ 'ನುತ್ಫ'ದ (ವೀರ್ಯದ) ರೂಪದಲ್ಲಿ ಜೋಡಿಸಿಡಲಾಗುತ್ತದೆ. ನಂತರ ಅಷ್ಟೇ ಅವಧಿಯವರೆಗೆ ಅವನು 'ಅಲಕ'ದ (ಹೆಪ್ಪುಗಟ್ಟಿದ ರಕ್ತದ) ರೂಪದಲ್ಲಿರುತ್ತಾನೆ. ನಂತರ ಅಷ್ಟೇ ಅವಧಿಯವರೆಗೆ ಅವನು 'ಮುದ್ಗ'ದ (ಮಾಂಸ ಮುದ್ದೆಯ) ರೂಪದಲ್ಲಿರುತ್ತಾನೆ. ನಂತರ ಅವನ ಬಳಿಗೆ ಒಬ್ಬ ದೇವದೂತರನ್ನು ಕಳುಹಿಸಿ, ನಾಲ್ಕು ವಿಷಯಗಳನ್ನು ಬರೆಯುವಂತೆ ಆಜ್ಞಾಪಿಸಲಾಗುತ್ತದೆ. ದೇವದೂತರು ಅವನ ಜೀವನೋಪಾಯ, ಆಯುಷ್ಯ, ಕರ್ಮ ಮತ್ತು ಅವನು ನತದೃಷ್ಟನೋ ಅಥವಾ ಅದೃಷ್ಟವಂತನೋ ಎಂಬುದನ್ನು ಬರೆಯುತ್ತಾರೆ. ನಂತರ ಅವರು ಅವನಿಗೆ ಆತ್ಮವನ್ನು ಊದುತ್ತಾರೆ. ನಿಶ್ಚಯವಾಗಿಯೂ, ನಿಮ್ಮಲ್ಲೊಬ್ಬನು ಸ್ವರ್ಗವಾಸಿಗಳ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಎಲ್ಲಿಯವರೆಗೆಂದರೆ ಅವನ ಮತ್ತು ಸ್ವರ್ಗದ ಮಧ್ಯೆ ಒಂದು ಮೊಳದಷ್ಟು ಮಾತ್ರ ಅಂತರವಿರುವಾಗ ಅವನ ಗ್ರಂಥವು (ವಿಧಿ-ಬರಹ) ಅವನಿಗಿಂತ ಮುಂದೆ ಬಂದು ಅವನು ನರಕವಾಸಿಗಳ ಕರ್ಮವನ್ನು ಮಾಡುತ್ತಾನೆ. ನಂತರ ಅವನು ನರಕವನ್ನು ಪ್ರವೇಶಿಸುತ್ತಾನೆ. ಅದೇ ರೀತಿ, ನಿಶ್ಚಯವಾಗಿಯೂ, ನಿಮ್ಮಲ್ಲೊಬ್ಬನು ನರಕವಾಸಿಗಳ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಎಲ್ಲಿಯವರೆಗೆಂದರೆ ಅವನ ಮತ್ತು ನರಕದ ಮಧ್ಯೆ ಒಂದು ಮೊಳದಷ್ಟು ಮಾತ್ರ ಅಂತರವಿರುವಾಗ ಅವನ ಗ್ರಂಥವು (ವಿಧಿ-ಬರಹ) ಅವನಿಗಿಂತ ಮುಂದೆ ಬಂದು ಅವನು ಸ್ವರ್ಗವಾಸಿಗಳ ಕರ್ಮವನ್ನು ಮಾಡುತ್ತಾನೆ. ನಂತರ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ."

ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಹೇಳಿದರು: “ನಿಮ್ಮಲ್ಲೊಬ್ಬನಿಗೆ ಸ್ವರ್ಗವು ಅವನ ಚಪ್ಪಲಿಯ ತೊಗಲಪಟ್ಟಿಗಿಂತಲೂ ಹತ್ತಿರದಲ್ಲಿದೆ; ಹಾಗೆಯೇ ನರಕವೂ ಕೂಡ.”

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನರಕವನ್ನು ಮೋಹಗಳಿಂದ ಮರೆಮಾಡಲಾಗಿದೆ ಮತ್ತು ಸ್ವರ್ಗವನ್ನು ಸಂಕಷ್ಟಗಳಿಂದ ಮರೆಮಾಡಲಾಗಿದೆ.”

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದಾಗ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಸ್ವರ್ಗಕ್ಕೆ ಕಳುಹಿಸಿ ಹೇಳಿದನು: "ಸ್ವರ್ಗವನ್ನು ಮತ್ತು ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಜಿಬ್ರೀಲರು ನೋಡಿ ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದರ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸದೇ ಇರಲಾರ." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಕಷ್ಟಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಸ್ವರ್ಗಕ್ಕೆ ಹೋಗಿ ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಕಷ್ಟಗಳಿಂದ ಹೊದಿಯಲಾಗಿತ್ತು. ಅವರು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗಲಾರದೆಂದು ನಾನು ಭಯಪಡುತ್ತೇನೆ." ಅಲ್ಲಾಹು ಹೇಳಿದನು: "ನರಕಕ್ಕೆ ಹೋಗಿ ಅಲ್ಲಿ ನಾನು ನರಕವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದರ ಭಾಗಗಳು ಒಂದು ಇನ್ನೊಂದರ ಮೇಲೆ ಏರಿ ಹೋಗುವುದನ್ನು ಕಂಡರು. ಅವರು ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಯಾರೂ ಅದನ್ನು ಪ್ರವೇಶಿಸಲಾರರು." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಮೋಹಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಹೋಗು, ಅದನ್ನು ಪುನಃ ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಮೋಹಗಳಿಂದ ಹೊದಿಯಲಾಗಿತ್ತು. ಅವರು ಹಿಂದಿರುಗಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸದೇ ಬಚಾವಾಗಲು ಯಾರಿಗೂ ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಉರಿಸುವ ಬೆಂಕಿ ನರಕದ ಬೆಂಕಿಯ ಎಪ್ಪತ್ತನೇ ಒಂದು ಭಾಗವಾಗಿದೆ." ಆಗ ಒಬ್ಬರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಈ ಬೆಂಕಿಯೇ ಸಾಕಷ್ಟು ಬಿಸಿಯಾಗಿದೆ." ಅವರು ಹೇಳಿದರು: "ಈ ಬೆಂಕಿಗೆ ಅರುವತ್ತೊಂಬತ್ತು ಭಾಗಗಳನ್ನು ಸೇರಿಸಲಾಗುತ್ತದೆ. ಪ್ರತಿಯೊಂದು ಭಾಗವೂ ಅದರಷ್ಟೇ ಉರಿಯನ್ನು ಹೊಂದಿದೆ."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಅಲ್ಲಾಹು ಭೂಮಿಯನ್ನು ಮುಷ್ಠಿಯಲ್ಲಿ ಹಿಡಿಯುತ್ತಾನೆ ಮತ್ತು ಆಕಾಶಗಳನ್ನು ಬಲಗೈಯಿಂದ ಸುರುಳಿಯಾಗಿ ಮಡಚುತ್ತಾನೆ. ನಂತರ ಹೇಳುತ್ತಾನೆ: ನಾನೇ ರಾಜ. ಭೂಮಿಯ ರಾಜರುಗಳು ಎಲ್ಲಿದ್ದಾರೆ?"

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಬಳಿಗೆ ಬಂದಾಗ, ನಾನು ಚಿತ್ರಗಳಿರುವ ಒಂದು ಪರದೆಯಿಂದ ನನ್ನ ಗೋಡೆಯಲ್ಲಿನ ರಂಧ್ರವನ್ನು ಮುಚ್ಚಿಟ್ಟಿದ್ದೆ. ಅವರು ಅದನ್ನು ನೋಡಿ ಅದನ್ನು ಹರಿದು ಹಾಕಿದರು. ಅವರ ಮುಖದ ಬಣ್ಣ ಬದಲಾಯಿತು. ಅವರು ಹೇಳಿದರು: “ಓ ಆಯಿಶಾ! ಅಲ್ಲಾಹನ ಸೃಷ್ಟಿಯನ್ನು ಅನುಕರಿಸುವವರು ಯಾರೋ ಅವರು ಪುನರುತ್ಥಾನ ದಿನದಂದು ಅಲ್ಲಾಹನಿಂದ ಕಠೋರವಾಗಿ ಶಿಕ್ಷಿಸಲ್ಪಡುವರು.” ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: “ಆದ್ದರಿಂದ ನಾವು ಅದನ್ನು ಕತ್ತರಿಸಿ, ಅದರಿಂದ ಒಂದೆರಡು ದಿಂಬುಗಳನ್ನು ಮಾಡಿದೆವು.”

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಮರ್ಯಮರ ಪುತ್ರ (ಈಸಾ) ಶೀಘ್ರದಲ್ಲೇ ನಿಮ್ಮ ನಡುವೆ ನ್ಯಾಯಯುತ ಆಡಳಿತಗಾರನಾಗಿ ಇಳಿದು ಬರುವರು. ಅವರು ಶಿಲುಬೆಯನ್ನು ಒಡೆಯುವರು, ಹಂದಿಯನ್ನು ಕೊಲ್ಲುವರು ಮತ್ತು ಜಿಝ್ಯವನ್ನು (ಮುಸ್ಲಿಮೇತರರ ಮೇಲಿನ ತೆರಿಗೆ) ರದ್ದುಗೊಳಿಸುವರು. ಆಗ ಸಂಪತ್ತು ಎಷ್ಟರ ಮಟ್ಟಿಗೆ ಹೇರಳವಾಗುತ್ತದೆಯೆಂದರೆ ಅದನ್ನು ಸ್ವೀಕರಿಸಲು ಯಾರೂ ಮುಂದೆ ಬರುವುದಿಲ್ಲ."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಚಿಕ್ಕಪ್ಪರಿಗೆ ಹೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳಿರಿ. ಪುನರುತ್ಥಾನ ದಿನದಂದು ನಾನು ಅದರ ಮೂಲಕ ನಿಮ್ಮ ಪರವಾಗಿ ಸಾಕ್ಷಿ ಹೇಳುವೆನು." ಅವರು ಹೇಳಿದರು: "ಕುರೈಷರು ನನ್ನನ್ನು ಆಕ್ಷೇಪಿಸುವರು ಮತ್ತು ಅವರು (ಸಾವಿನ) ಭಯದಿಂದ ಹಾಗೆ ಹೇಳಿದರು ಎಂದು ನನ್ನ ಬಗ್ಗೆ ಹೇಳುವರೆಂಬ ಭಯವಿಲ್ಲದಿರುತ್ತಿದ್ದರೆ ನಾನು ನಿನ್ನ ಮಾತನ್ನು ಒಪ್ಪಿ, ನಿನಗೆ ಸಂತೋಷ ಉಂಟಾಗುವಂತೆ ಮಾಡುತ್ತಿದ್ದೆ." ಆಗ ಅಲ್ಲಾಹು ಈ ವಚನವನ್ನು ಅವತೀರ್ಣಗೊಳಿಸಿದನು: "ತಾವು ಪ್ರೀತಿಸುವವರನ್ನು ಸನ್ಮಾರ್ಗಕ್ಕೆ ತರಲು ತಮಗೆ ಸಾಧ್ಯವಿಲ್ಲ. ಆದರೆ ಅಲ್ಲಾಹು ಅವನು ಬಯಸಿದವರನ್ನು ಸನ್ಮಾರ್ಗಕ್ಕೆ ತರುತ್ತಾನೆ." [ಕಸಸ್: 56].