- ಜನರ ಮಾತಿಗೆ ಹೆದರಿ ಸತ್ಯವನ್ನು ತ್ಯಜಿಸಬಾರದೆಂದು ಈ ಹದೀಸ್ ತಿಳಿಸುತ್ತದೆ.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಧಿಕಾರದಲ್ಲಿರುವುದು ಪುರಾವೆಗಳು ಮತ್ತು ನಿರ್ದೇಶನಗಳ ಮೂಲಕ ಸನ್ಮಾರ್ಗ ತೋರಿಸುವುದು ಮಾತ್ರವಾಗಿದೆ. ಹೃದಯವನ್ನು ಪರಿವರ್ತಿಸುವ ಅಧಿಕಾರ ಅವರಿಗಿಲ್ಲ.
- ಇಸ್ಲಾಂ ಧರ್ಮದ ಕಡೆಗೆ ಆಮಂತ್ರಿಸುವುದಕ್ಕಾಗಿ ರೋಗಿಯಾದ ಸತ್ಯನಿಷೇಧಿಯನ್ನು ಭೇಟಿ ಮಾಡಬಹುದೆಂದು ಈ ಹದೀಸ್ ತಿಳಿಸುತ್ತದೆ.
- ಎಲ್ಲಾ ಸ್ಥಿತಿಗಳಲ್ಲೂ ಜನರನ್ನು ಅಲ್ಲಾಹನ ಕಡೆಗೆ ಆಮಂತ್ರಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತೀವ ಉತ್ಸಾಹ ತೋರುತ್ತಿದ್ದರೆಂದು ಈ ಹದೀಸ್ ತಿಳಿಸುತ್ತದೆ.