/ ಯಹೂದಿಗಳು (ಅಲ್ಲಾಹನ) ಕೋಪಕ್ಕೆ ಪಾತ್ರರಾದವರು ಮತ್ತು ಕ್ರೈಸ್ತರು ದಾರಿತಪ್ಪಿದವರು

ಯಹೂದಿಗಳು (ಅಲ್ಲಾಹನ) ಕೋಪಕ್ಕೆ ಪಾತ್ರರಾದವರು ಮತ್ತು ಕ್ರೈಸ್ತರು ದಾರಿತಪ್ಪಿದವರು

ಅದೀ ಬಿನ್ ಹಾತಿಂ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಹೂದಿಗಳು (ಅಲ್ಲಾಹನ) ಕೋಪಕ್ಕೆ ಪಾತ್ರರಾದವರು ಮತ್ತು ಕ್ರೈಸ್ತರು ದಾರಿತಪ್ಪಿದವರು."
رواه الترمذي

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಹೂದಿಗಳು ಅಲ್ಲಾಹನ ಕೋಪಕ್ಕೆ ಪಾತ್ರರಾಗಿದ್ದಾರೆ. ಏಕೆಂದರೆ ಅವರು ಸತ್ಯವನ್ನು ತಿಳಿದೂ ಸಹ ಅದರ ಪ್ರಕಾರ ನಡೆಯಲಿಲ್ಲ. ಕ್ರೈಸ್ತರು ದಾರಿತಪ್ಪಿದ್ದಾರೆ. ಏಕೆಂದರೆ ಅವರು ಜ್ಞಾನವಿಲ್ಲದೆ ಕರ್ಮವೆಸಗುತ್ತಿದ್ದಾರೆ.

Hadeeth benefits

  1. ಜ್ಞಾನ ಮತ್ತು ಕರ್ಮವು ಜೊತೆಯಾಗಿದ್ದರೆ ಮಾತ್ರ ಕೋಪಕ್ಕೆ ಪಾತ್ರರಾದವರ ಮತ್ತು ದಾರಿತಪ್ಪಿದವರ ಮಾರ್ಗದಿಂದ ರಕ್ಷಣೆ ಸಿಗಬಹುದು.
  2. ಯಹೂದಿಗಳು ಮತ್ತು ಕ್ರೈಸ್ತರ ಮಾರ್ಗದ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಇಸ್ಲಾಂ ಎಂಬ ನೇರ ಮಾರ್ಗಕ್ಕೆ ಬದ್ಧವಾಗಿರಬೇಕೆಂದು ತಿಳಿಸಲಾಗಿದೆ.
  3. ಯಹೂದಿಗಳು ಮತ್ತು ಕ್ರೈಸ್ತರೆಲ್ಲರೂ ದಾರಿತಪ್ಪಿದವರು ಮತ್ತು ಕೋಪಕ್ಕೆ ಪಾತ್ರರಾದವರಾಗಿದ್ದಾರೆ. ಆದರೆ ಕೋಪಕ್ಕೆ ಪಾತ್ರರಾದವರು ಎಂಬುದು ಯಹೂದಿಗಳ ವಿಶೇಷ ಗುರುತಾಗಿದೆ ಮತ್ತು ದಾರಿತಪ್ಪಿದವರು ಎಂಬುದು ಕ್ರೈಸ್ತರ ವಿಶೇಷ ಗುರುತಾಗಿದೆ.