- ಕೆಟ್ಟ ಮತ್ತು ಹೊಲಸು ಕೃತ್ಯಗಳನ್ನು ಶೈತಾನನು ಸುಂದರವಾಗಿ ತೋರಿಸಿ ಕೊಡುವುದು ಮನಸ್ಸಿನಲ್ಲಿ ಮೋಹ ಉಂಟಾಗಲು ಕಾರಣವಾಗುತ್ತದೆ. ಎಲ್ಲಿಯವರೆಗೆಂದರೆ ಮನಸ್ಸು ಅದನ್ನು ಉತ್ತಮವಾಗಿ ಕಂಡು ಅದರೆಡೆಗೆ ವಾಲುತ್ತದೆ.
- ನಿಷೇಧಿಸಲಾದ ಮೋಹಗಳಿಂದ ದೂರವಿರಬೇಕೆಂದು ಈ ಹದೀಸಿನಲ್ಲಿ ಆಜ್ಞೆ ಇದೆ. ಏಕೆಂದರೆ ಅದು ನರಕಕ್ಕೆ ಸಾಗಿಸುವ ದಾರಿಯಾಗಿದೆ. ಅದೇ ರೀತಿ ಸಂಕಷ್ಟಗಳ ಬಗ್ಗೆ ತಾಳ್ಮೆಯಿಂದ ಇರಬೇಕೆಂಬ ಆಜ್ಞೆ ಇದೆ. ಏಕೆಂದರೆ ಅದು ಸ್ವರ್ಗಕ್ಕೆ ಸಾಗಿಸುವ ದಾರಿಯಾಗಿದೆ.
- ಮನಸ್ಸಿನ ವಿರುದ್ಧ ಹೋರಾಡುವುದು, ಆರಾಧನೆಗಳನ್ನು ಮಾಡಲು ಪರಿಶ್ರಮಿಸುವುದು, ಸತ್ಕರ್ಮಗಳನ್ನು ಆವರಿಸಿಕೊಂಡಿರುವ ಕಷ್ಟಕೋಟಲೆಗಳನ್ನು ಸಹಿಸುವುದು ಮುಂತಾದವುಗಳ ಶ್ರೇಷ್ಠತೆಯನ್ನು ಈ ಹದೀಸ್ ವಿವರಿಸುತ್ತದೆ.