- ಸ್ವರ್ಗ ಮತ್ತು ನರಕಗಳು ಈಗಾಗಲೇ ಅಸ್ತಿತ್ವದಲ್ಲಿವೆ ಎಂಬ ವಿಶ್ವಾಸವನ್ನು ಈ ಹದೀಸ್ ಸಾಬೀತುಪಡಿಸುತ್ತದೆ.
- ಅಗೋಚರ ವಿಷಯಗಳಲ್ಲಿ ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ ಎಲ್ಲಾ ವಿಷಯಗಳಲ್ಲಿ ವಿಶ್ವಾಸವಿಡುವುದು ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.
- ಕಷ್ಟ ಮತ್ತು ಪ್ರಯಾಸಕರ ಕಾರ್ಯಗಳಲ್ಲಿ ತಾಳ್ಮೆ ವಹಿಸುವುದರ ಪ್ರಾಮುಖ್ಯತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಸ್ವರ್ಗಕ್ಕೆ ತಲುಪಿಸುವ ಮಾರ್ಗವಾಗಿದೆ.
- ನಿಷೇಧಿಸಲಾದ ಕಾರ್ಯಗಳಿಂದ ದೂರವಿರುವುದರ ಪ್ರಾಮುಖ್ಯತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ನರಕಕ್ಕೆ ತಲುಪಿಸುವ ಮಾರ್ಗವಾಗಿದೆ.
- ಇಹಲೋಕದಲ್ಲಿ ಮನುಷ್ಯರನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗವನ್ನು ಕಷ್ಟಗಳಿಂದ ಮತ್ತು ನರಕವನ್ನು ಮೋಹಗಳಿಂದ ಸುತ್ತುವರಿಯಲಾಗಿದೆ.
- ಸ್ವರ್ಗದ ದಾರಿಯು ಕಠಿಣ ಮತ್ತು ತ್ರಾಸದಾಯಕವಾಗಿದೆ. ಆ ದಾರಿಯಲ್ಲಿ ಸಾಗಲು ಸತ್ಯವಿಶ್ವಾಸದ ಜೊತೆಗೆ ತಾಳ್ಮೆ ಮತ್ತು ಸಹಿಷ್ಣುತೆಯ ಅಗತ್ಯವಿದೆ. ನರಕದ ದಾರಿಯಲ್ಲಿ ಐಹಿಕ ವಿಲಾಸ ಮತ್ತು ಮೋಹಗಳು ತುಂಬಿಕೊಂಡಿವೆ.