- ಅಲ್ಲಾಹನ ತೀರ್ಮಾನ ಮತ್ತು ನಿರ್ಣಯದಲ್ಲಿ (ವಿಧಿಯಲ್ಲಿ) ವಿಶ್ವಾಸವಿಡುವುದು ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.
- ವಿಧಿ ನಿರ್ಣಯ ಎಂದರೆ, ಅಲ್ಲಾಹನಿಗೆ ಎಲ್ಲಾ ವಸ್ತುಗಳ ಬಗ್ಗೆ ಜ್ಞಾನವಿದೆ, ಅವನು ಅವೆಲ್ಲವನ್ನೂ ದಾಖಲಿಸಿಟ್ಟಿದ್ದಾನೆ, ಎಲ್ಲವೂ ಅವನ ಇಚ್ಛೆಯಂತೆಯೇ ನಡೆಯುತ್ತದೆ ಮತ್ತು ಅವನೇ ಅವುಗಳನ್ನು ಸೃಷ್ಟಿಸುತ್ತಾನೆ ಎಂದಾಗಿದೆ.
- ಆಕಾಶಗಳು ಮತ್ತು ಭೂಮಿಯ ಸೃಷ್ಟಿಗಿಂತ ಮೊದಲೇ ವಿಧಿ ನಿರ್ಣಯಗಳನ್ನು ದಾಖಲಿಸಲಾಗಿದೆ ಎಂಬ ವಿಶ್ವಾಸವು ಆ ವಿಧಿಗಳನ್ನು ಆತ್ಮತೃಪ್ತಿಯಿಂದ ಅಂಗೀಕರಿಸುವಂತೆ ಮಾಡುತ್ತದೆ.
- ಆಕಾಶಗಳು ಮತ್ತು ಭೂಮಿಯ ಸೃಷ್ಟಿಗಿಂತ ಮೊದಲು ಅಲ್ಲಾಹನ ಅರ್ಶ್ ನೀರಿನ ಮೇಲಿತ್ತು ಎಂದು ಈ ಹದೀಸ್ ತಿಳಿಸುತ್ತದೆ.