- ಎಲ್ಲಾ ವಿಷಯಗಳಲ್ಲೂ ಹದ್ದುಮೀರುವುದನ್ನು ಮತ್ತು ಶಕ್ತಿಮೀರಿ ಹೊರೆ ಹೊರುವುದನ್ನು ನಿಷೇಧಿಸಲಾಗಿದೆ, ಎಲ್ಲಾ ವಿಷಯಗಳಲ್ಲೂ—ವಿಶೇಷವಾಗಿ ಆರಾಧನೆಯ ವಿಷಯದಲ್ಲಿ ಮತ್ತು ಸಜ್ಜನರನ್ನು ಗೌರವಿಸುವ ವಿಷಯದಲ್ಲಿ—ಇವುಗಳನ್ನು ತೊರೆಯಬೇಕೆಂದು ಈ ಹದೀಸ್ ತಿಳಿಸುತ್ತದೆ.
- ಆರಾಧನಾ ವಿಷಯಗಳಲ್ಲಿ ಪರಿಪೂರ್ಣತೆಯನ್ನು ಪಡೆಯಲು ಬಯಸುವುದು ಉತ್ತಮ ಕಾರ್ಯವಾಗಿದ್ದರೂ, ಅದು ಧರ್ಮಸಂಹಿತೆಗೆ ಅನುಗುಣವಾಗಿರಬೇಕೆಂದು ಈ ಹದೀಸ್ ತಿಳಿಸುತ್ತದೆ.
- ಪ್ರಮುಖ ವಿಷಯಗಳನ್ನು ಒತ್ತಿ ಹೇಳುವುದು ಅಪೇಕ್ಷಣೀಯವೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಈ ವಾಕ್ಯವನ್ನು ಮೂರು ಸಲ ಪುನರಾವರ್ತಿಸಿದರು.
- ಇಸ್ಲಾಂ ಧರ್ಮದ ಸಹಿಷ್ಣುತೆ ಮತ್ತು ಸರಳತೆಯನ್ನು ಈ ಹದೀಸ್ ತಿಳಿಸುತ್ತದೆ.