ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನ ಹೌದ್ (ಕೊಳ) ಒಂದು ತ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪುನರುತ್ಥಾನ ದಿನ ಅವರಿಗೆ ಒಂದು ಕೊಳ (ಹೌದ್) ಇರಲಿದೆ. ಅದರ ಉದ್ದ ಮತ್ತು ಅಗಲ ಒಂದು ತಿ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "(ಪುನರ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪುನರುತ್ಥಾನ ದಿನದಂದು ಸಾವನ್ನು ಕಪ್ಪು ಬಿಳುಪು ರೋಮಗಳಿರುವ ಟಗರಿನ ರೂಪದಲ್ಲಿ ತರಲಾಗುವ...
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು...
ಪ್ರಾಪಂಚಿಕ ಮತ್ತು ಧಾರ್ಮಿಕವಾದ ಎಲ್ಲಾ ವಿಷಯಗಳಲ್ಲೂ ಲಾಭವನ್ನುಂಟು ಮಾಡಲು ಮತ್ತು ಹಾನಿಯನ್ನು ನಿವಾರಿಸಲು ಅಲ್ಲಾಹನ ಮೇಲೆ ಅವಲಂಬಿತರಾಗಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸವಾರಿ ಮಾಡುವ...
ಜನರಿಗೆ "ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು" ಎಂದು ಸಲಾಂ ಹೇಳುವುದರ ಶಿಷ್ಟಾಚಾರವನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕಲಿಸುತ್ತ...
ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅವನು ಸ್ವಯಂ ಅವನ ಮೇಲೆ ಅನ್ಯಾಯವನ್ನು ನಿಷೇಧಿಸಿ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನ ಹೌದ್ (ಕೊಳ) ಒಂದು ತಿಂಗಳ ಪ್ರಯಾಣದಷ್ಟಿದೆ. ಅದರ ನೀರು ಹಾಲಿಗಿಂತಲೂ ಬೆಳ್ಳಗೆ ಮತ್ತು ಅದರ ಪರಿಮಳ ಕಸ್ತೂರಿಗಿಂತಲೂ ಉತ್ತಮವಾಗಿದೆ. ಅದರ ಲೋಟಗಳು ಆಕಾಶದಲ್ಲಿರುವ ನಕ್ಷತ್ರಗಳಂತಿವೆ. ಯಾರು ಅದರ ನೀರನ್ನು ಕುಡಿಯುತ್ತಾರೋ ಅವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ."
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "(ಪುನರುತ್ಥಾನ ದಿನದಂದು) ಸಾವನ್ನು ಕಪ್ಪು ಮತ್ತು ಬಿಳಿ ಬಣ್ಣವಿರುವ ಟಗರಿನ ರೂಪದಲ್ಲಿ ತರಲಾಗುವುದು. ಆಗ ಒಬ್ಬರು, "ಓ ಸ್ವರ್ಗವಾಸಿಗಳೇ!" ಎಂದು ಕೂಗಿ ಕರೆಯುವರು. ಆಗ ಸ್ವರ್ಗವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ಸ್ವರ್ಗವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅವರು, "ಓ ನರಕವಾಸಿಗಳೇ" ಎಂದು ಕೂಗಿ ಕರೆಯುವರು. ಆಗ ನರಕವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ನರಕವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅದನ್ನು ಕೊಯ್ಯಲಾಗುವುದು. ನಂತರ ಅವರು ಹೇಳುವರು: "ಓ ಸ್ವರ್ಗವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ. ಓ ನರಕವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: “ಮತ್ತು ಎಲ್ಲಾ ಕಾರ್ಯಗಳಿಗೂ ತೀರ್ಪು ನೀಡಲಾಗುವ ಆ ವ್ಯಥೆಯ ದಿನದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿರಿ. ಆದರೆ ಅವರು ನಿರ್ಲಕ್ಷ್ಯದಲ್ಲಿದ್ದಾರೆ.” [ಮರ್ಯಮ್ 39] ಇಹಲೋಕದ ಈ ಜನರು ನಿರ್ಲಕ್ಷ್ಯದಲ್ಲಿದ್ದಾರೆ. "ಮತ್ತು ಅವರ ವಿಶ್ವಾಸವಿಡುವುದಿಲ್ಲ." [ಮರ್ಯಮ್ 39]
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನೀವು ಅಲ್ಲಾಹನಲ್ಲಿ ಭರವಸೆಯಿಡಬೇಕಾದ ರೀತಿಯಲ್ಲೇ ಭರವಸೆಯಿಟ್ಟರೆ, ಅವನು ಹಕ್ಕಿಗಳಿಗೆ ಆಹಾರ ನೀಡುವಂತೆ ನಿಮಗೂ ಆಹಾರ ನೀಡುವನು. ಅವು ಬೆಳಗ್ಗೆ ಖಾಲಿ ಹೊಟ್ಟೆಯಿಂದ ಹೊರಟು ಸಂಜೆ ತುಂಬಿದ ಹೊಟ್ಟೆಯೊಂದಿಗೆ ಮರಳುತ್ತವೆ."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸವಾರಿ ಮಾಡುವವನು ಪಾದಚಾರಿಗೆ ಸಲಾಂ ಹೇಳಬೇಕು, ಪಾದಚಾರಿ ಕುಳಿತಿರುವವನಿಗೆ ಸಲಾಂ ಹೇಳಬೇಕು ಮತ್ತು ಸಣ್ಣ ಗುಂಪಿನ ಜನರು ದೊಡ್ಡ ಗುಂಪಿನ ಜನರಿಗೆ ಸಲಾಂ ಹೇಳಬೇಕು."
ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ಓ ನನ್ನ ದಾಸರೇ! ನಾನು ಸ್ವಯಂ ನನ್ನ ಮೇಲೆ ಅನ್ಯಾಯವನ್ನು ನಿಷೇಧಿಸಿದ್ದೇನೆ. ಅದೇ ರೀತಿ ಅದನ್ನು ನಿಮಗೂ ನಿಷೇಧಿಸಿದ್ದೇನೆ. ಆದ್ದರಿಂದ ನೀವು ಪರಸ್ಪರ ಅನ್ಯಾಯ ಮಾಡಬೇಡಿ. ಓ ನನ್ನ ದಾಸರೇ! ನಾನು ಸನ್ಮಾರ್ಗ ತೋರಿಸಿದವರ ಹೊರತು ನೀವೆಲ್ಲರೂ ದಾರಿ ತಪ್ಪಿದವರು. ಆದ್ದರಿಂದ ನನ್ನಲ್ಲಿ ಸನ್ಮಾರ್ಗವನ್ನು ಬೇಡಿರಿ. ನಾನು ನಿಮಗೆ ಸನ್ಮಾರ್ಗ ತೋರಿಸುತ್ತೇನೆ. ಓ ನನ್ನ ದಾಸರೇ! ನಾನು ಆಹಾರ ನೀಡಿದವರ ಹೊರತು ನೀವೆಲ್ಲರೂ ಹಸಿದವರು. ಆದ್ದರಿಂದ ನನ್ನಲ್ಲಿ ಆಹಾರವನ್ನು ಬೇಡಿರಿ. ನಾನು ನಿಮಗೆ ಆಹಾರ ನೀಡುತ್ತೇನೆ. ಓ ನನ್ನ ದಾಸರೇ! ನಾನು ಬಟ್ಟೆ ಉಡಿಸಿದವರ ಹೊರತು ನೀವೆಲ್ಲರೂ ನಗ್ನರು. ಆದ್ದರಿಂದ ನನ್ನಲ್ಲಿ ಬಟ್ಟೆಯನ್ನು ಬೇಡಿರಿ. ನಾನು ನಿಮಗೆ ಬಟ್ಟೆ ಉಡಿಸುತ್ತೇನೆ. ಓ ನನ್ನ ದಾಸರೇ! ನೀವು ಹಗಲೂ-ರಾತ್ರಿ ಪಾಪ ಮಾಡುತ್ತೀರಿ. ನಾನು ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತೇನೆ. ಆದ್ದರಿಂದ ನನ್ನಲ್ಲಿ ಕ್ಷಮೆಯಾಚಿಸಿರಿ. ನಾನು ನಿಮ್ಮನ್ನು ಕ್ಷಮಿಸುತ್ತೇನೆ. ಓ ನನ್ನ ದಾಸರೇ! ನನಗೆ ಯಾವುದೇ ತೊಂದರೆ ಮಾಡಲು ನಿಮಗೆ ಎಂದಿಗೂ ಸಾಧ್ಯವಿಲ್ಲ. ಅದೇ ರೀತಿ ನನಗೆ ಯಾವುದೇ ಉಪಕಾರ ಮಾಡಲೂ ನಿಮಗೆ ಎಂದಿಗೂ ಸಾಧ್ಯವಿಲ್ಲ. ಓ ನನ್ನ ದಾಸರೇ! ನಿಮಗಿಂತ ಮೊದಲಿನವರು, ನಿಮಗಿಂತ ನಂತರದವರು, ನಿಮ್ಮಲ್ಲಿರುವ ಮನುಷ್ಯರು ಮತ್ತು ನಿಮ್ಮಲ್ಲಿರುವ ಜಿನ್ನ್‌ಗಳು—ಎಲ್ಲರೂ ನಿಮ್ಮ ಪೈಕಿ ಮಹಾ ದೇವಭಯವುಳ್ಳವನಿಗೆ ಇರುವಂತಹ ಹೃದಯದಂತೆಯಾದರೂ, ಅದರಿಂದ ನನ್ನ ಆಧಿಪತ್ಯದಲ್ಲಿ ಏನೂ ಹೆಚ್ಚಾಗುವುದಿಲ್ಲ. ಓ ನನ್ನ ದಾಸರೇ! ನಿಮಗಿಂತ ಮೊದಲಿನವರು, ನಿಮಗಿಂತ ನಂತರದವರು, ನಿಮ್ಮಲ್ಲಿರುವ ಮನುಷ್ಯರು ಮತ್ತು ನಿಮ್ಮಲ್ಲಿರುವ ಜಿನ್ನ್‌ಗಳು—ಎಲ್ಲರೂ ನಿಮ್ಮ ಪೈಕಿ ಮಹಾ ದುಷ್ಟನಿಗೆ ಇರುವಂತಹ ಹೃದಯದಂತೆಯಾದರೂ, ಅದರಿಂದ ನನ್ನ ಆಧಿಪತ್ಯದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಓ ನನ್ನ ದಾಸರೇ! ನಿಮಗಿಂತ ಮೊದಲಿನವರು, ನಿಮಗಿಂತ ನಂತರದವರು, ನಿಮ್ಮಲ್ಲಿರುವ ಮನುಷ್ಯರು ಮತ್ತು ನಿಮ್ಮಲ್ಲಿರುವ ಜಿನ್ನ್‌ಗಳು—ಎಲ್ಲರೂ ಒಂದೇ ಬಯಲು ಪ್ರದೇಶದಲ್ಲಿ ನಿಂತು, (ಎಲ್ಲರೂ) ನನ್ನಲ್ಲಿ ಬೇಡಿಕೆಯಿಟ್ಟು, ನಾನು ಪ್ರತಿಯೊಬ್ಬ ಮನುಷ್ಯನ ಬೇಡಿಕೆಯನ್ನು ಈಡೇರಿಸಿದರೂ, ಒಂದು ಸೂಜಿಯನ್ನು ಸಮುದ್ರಕ್ಕೆ ಚುಚ್ಚಿದರೆ (ಸಮುದ್ರದಲ್ಲಿ) ಏನು ಕಡಿಮೆಯಾಗಬಹುದೋ ಅಷ್ಟಲ್ಲದೆ ನನ್ನ ಆಧಿಪತ್ಯದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಓ ನನ್ನ ದಾಸರೇ! ನಾನು ನಿಮಗೆ ನಿಮ್ಮ ಕರ್ಮಗಳನ್ನು ಮಾತ್ರ ಎಣಿಸಿಡುತ್ತೇನೆ. ನಂತರ ಅವುಗಳಿಗೆ ಪ್ರತಿಫಲ ನೀಡುತ್ತೇನೆ. ಆದ್ದರಿಂದ ಯಾರಾದರೂ ಒಳಿತನ್ನು ಪಡೆದರೆ ಅವನು ಅಲ್ಲಾಹನನ್ನು ಸ್ತುತಿಸಲಿ. ಯಾರಾದರೂ ಅದಲ್ಲದೆ ಬೇರೇನಾದರೂ ಪಡೆದರೆ, ಅವನು ಸ್ವತಃ ಅವನನ್ನಲ್ಲದೆ ಇನ್ನಾರನ್ನೂ ದೂಷಿಸದಿರಲಿ.”
ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದಬ್ಬಾಳಿಕೆಯ ಬಗ್ಗೆ ಎಚ್ಚರದಿಂದಿರಿ. ಏಕೆಂದರೆ, ನಿಶ್ಚಯವಾಗಿಯೂ ದಬ್ಬಾಳಿಕೆಯು ಪುನರುತ್ಥಾನ ದಿನದಂದು ಅಂಧಕಾರಗಳಾಗಿರುತ್ತವೆ. ಜಿಪುಣತನದ ಬಗ್ಗೆ ಎಚ್ಚರದಿಂದಿರಿ. ಏಕೆಂದರೆ, ನಿಶ್ಚಯವಾಗಿಯೂ ಜಿಪುಣತನವು ನಿಮಗಿಂತ ಮೊದಲಿನವರನ್ನು ನಾಶ ಮಾಡಿದೆ. ಅದು ಅವರನ್ನು ಅವರ ರಕ್ತ ಹರಿಸುವಂತೆ ಮತ್ತು ಅವರಿಗೆ ನಿಷಿದ್ಧವಾದುದನ್ನು ಧರ್ಮಸಮ್ಮತವಾಗಿ ಪರಿಗಣಿಸುವಂತೆ ಪ್ರೇರೇಪಿಸಿದೆ."
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಅಕ್ರಮವೆಸಗುವವನಿಗೆ ಸಮಯಾವಕಾಶವನ್ನು ನೀಡುತ್ತಾನೆ. ಆದರೆ ಅವನು ಅವನನ್ನೇನಾದರೂ ಹಿಡಿದುಬಿಟ್ಟರೆ, ನಂತರ ಅವನನ್ನು ಬಿಟ್ಟುಬಿಡುವುದಿಲ್ಲ." ನಂತರ ಅವರು ಈ ವಚನವನ್ನು ಪಠಿಸಿದರು: "ಅಕ್ರಮವೆಸಗುತ್ತಿರುವ ಊರುಗಳನ್ನು ಹಿಡಿಯುವಾಗ ತಮ್ಮ ಪರಿಪಾಲಕನ (ಅಲ್ಲಾಹನ) ಹಿಡಿತವು ಹೀಗೆಯೇ ಆಗಿರುತ್ತದೆ. ನಿಶ್ಚಯವಾಗಿಯೂ ಅವನ ಹಿಡಿತವು ವೇದನಾಭರಿತ ಮತ್ತು ಕಠೋರವಾಗಿದೆ." [ಸೂರ ಹೂದ್: 102]
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ನಿಶ್ಚಯವಾಗಿಯೂ ಅಲ್ಲಾಹು ಒಳಿತು ಮತ್ತು ಕೆಡುಕುಗಳನ್ನು ದಾಖಲಿಸಿದನು. ನಂತರ ಅವುಗಳನ್ನು (ಹೀಗೆ) ವಿವರಿಸಿದನು: ಒಬ್ಬ ವ್ಯಕ್ತಿ ಒಂದು ಒಳಿತನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡದಿದ್ದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಪೂರ್ಣ ಒಳಿತನ್ನು ದಾಖಲಿಸುವನು. ಅವನು ಒಂದು ಒಳಿತನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ, ಅಲ್ಲಾಹು ಅದರ ಪ್ರತಿಫಲವನ್ನು ಹತ್ತರಿಂದ ಏಳು ನೂರರವರೆಗೆ ಇಮ್ಮಡಿಗೊಳಿಸಿ, ಅಥವಾ ಅದಕ್ಕಿಂತಲೂ ಹೆಚ್ಚು ಪ್ರತಿಫಲವನ್ನು ದಾಖಲಿಸುವನು. ಒಬ್ಬ ವ್ಯಕ್ತಿ ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡದಿದ್ದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಪೂರ್ಣ ಒಳಿತನ್ನು ದಾಖಲಿಸುವನು. ಅವನು ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಕೆಡುಕನ್ನು ಮಾತ್ರ ದಾಖಲಿಸುವನು."
ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ಮಾಡಿದ ದುಷ್ಕರ್ಮಗಳಿಗಾಗಿ ನಮ್ಮನ್ನು ಶಿಕ್ಷಿಸಲಾಗುವುದೇ?" ಅವರು ಉತ್ತರಿಸಿದರು: "ಯಾರು ಇಸ್ಲಾಂ ಧರ್ಮದಲ್ಲಿ ಒಳಿತು ಮಾಡುತ್ತಾನೋ, ಅವನನ್ನು ಅಜ್ಞಾನ ಕಾಲದಲ್ಲಿ ಮಾಡಿದ ದುಷ್ಕರ್ಮಗಳಿಗಾಗಿ ಶಿಕ್ಷಿಸಲಾಗುವುದಿಲ್ಲ. ಆದರೆ ಯಾರು ಇಸ್ಲಾಂ ಧರ್ಮದಲ್ಲಿ ಕೆಡುಕು ಮಾಡುತ್ತಾನೋ, ಅವನನ್ನು ಹಿಂದಿನ ಮತ್ತು ನಂತರದ ದುಷ್ಕರ್ಮಗಳಿಗಾಗಿ ಶಿಕ್ಷಿಸಲಾಗುತ್ತದೆ."
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ಬಹಳಷ್ಟು ಕೊಲೆಗಳನ್ನು ಮಾಡಿದ ಮತ್ತು ಬಹಳಷ್ಟು ವ್ಯಭಿಚಾರಗಳನ್ನು ಮಾಡಿದ ಕೆಲವು ಬಹುದೇವವಿಶ್ವಾಸಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನೀವು ಏನು ಹೇಳುತ್ತಿದ್ದೀರೋ ಮತ್ತು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಬಹಳ ಸುಂದರವಾಗಿದೆ. ನಾವು ಮಾಡಿದ ತಪ್ಪುಗಳಿಗೆ ಏನಾದರೂ ಪರಿಹಾರವಿದೆಯೇ ಎಂದು ತಿಳಿಸಿ." ಆಗ ಈ ವಚನವು ಅವತೀರ್ಣವಾಯಿತು: "ಯಾರು ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸುವುದಿಲ್ಲವೋ, ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲುವುದಿಲ್ಲವೋ ಮತ್ತು ವ್ಯಭಿಚಾರ ಮಾಡುವುದಿಲ್ಲವೋ." [ಫುರ್ಕಾನ್ 68] ಮತ್ತು ಈ ವಚನ ಅವತೀರ್ಣವಾಯಿತು: "ಹೇಳಿರಿ: ಸ್ವಯಂ ಅತಿರೇಕವೆಸಗಿದ ನನ್ನ ದಾಸರೇ! ಅಲ್ಲಾಹನ ದಯೆಯ ಬಗ್ಗೆ ನಿರಾಶರಾಗಬೇಡಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತಾನೆ. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ." [ಝುಮರ್ 53].
ಹಕೀಮ್ ಬಿನ್ ಹಿಝಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ನಾನು ದಾನ ಧರ್ಮ, ಗುಲಾಮ ವಿಮೋಚನೆ, ಕುಟುಂಬ ಸಂಬಂಧ ಜೋಡಿಸುವುದು ಮುಂತಾದ ಸತ್ಕರ್ಮಗಳನ್ನು ಮಾಡುತ್ತಿದ್ದೆ. ಅದಕ್ಕಾಗಿ ನನಗೆ ಏನಾದರೂ ಪ್ರತಿಫಲ ದೊರೆಯುವುದೇ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀನು ಹಿಂದೆ ಮಾಡಿದ ಒಳಿತುಗಳೊಂದಿಗೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವೆ."
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ, ಒಳಿತಿನ ವಿಷಯದಲ್ಲಿ ಅಲ್ಲಾಹು ಸತ್ಯವಿಶ್ವಾಸಿಗೆ ಅನ್ಯಾಯ ಮಾಡುವುದಿಲ್ಲ. ಒಳಿತು ಮಾಡಿದ್ದಕ್ಕಾಗಿ ಅವನಿಗೆ ಇಹಲೋಕದಲ್ಲಿ (ಜೀವನೋಪಾಯವನ್ನು) ನೀಡಲಾಗುತ್ತದೆ ಮತ್ತು ಪರಲೋಕದಲ್ಲೂ ಪ್ರತಿಫಲ ನೀಡಲಾಗುತ್ತದೆ. ಆದರೆ ಸತ್ಯನಿಷೇಧಿಯು ಇಹಲೋಕದಲ್ಲಿ ಅಲ್ಲಾಹನ ಸಂಪ್ರೀತಿಗಾಗಿ ಮಾಡಿದ ಒಳಿತುಗಳಿಗಾಗಿ ಅವನಿಗೆ ಆಹಾರವನ್ನು ನೀಡಲಾಗುವುದು. ಹೀಗೆ ಅವನು ಪರಲೋಕಕ್ಕೆ ತಲುಪಿದಾಗ, ಪ್ರತಿಫಲ ನೀಡಲಾಗುವ ಯಾವುದೇ ಒಳಿತುಗಳು ಅವನಲ್ಲಿ ಉಳಿದಿರುವುದಿಲ್ಲ."