- ಬುದ್ಧಿವಂತರು ಪಶ್ಚಾತ್ತಾಪ ಪಡಲು ಆತುರಪಡಬೇಕು ಮತ್ತು ಅನ್ಯಾಯದಲ್ಲಿ ಮುಂದುವರಿಯಬಾರದೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅಲ್ಲಾಹು ಯಾವಾಗ ಹೇಗೆ ಹಿಡಿದು ಶಿಕ್ಷಿಸುತ್ತಾನೆಂದು ಯಾರಿಗೂ ತಿಳಿದಿರುವುದಿಲ್ಲ.
- ಸರ್ವಶಕ್ತನಾದ ಅಲ್ಲಾಹು ಅನ್ಯಾಯವೆಸಗುವವರನ್ನು ಹಂತ ಹಂತವಾಗಿ ಆವರಿಸಿಕೊಳ್ಳುವುದಕ್ಕಾಗಿ ಮತ್ತು ಅವರು ಪಶ್ಚಾತಾಪ ಪಡದಿದ್ದರೆ ಅವರಿಗೆ ಇಮ್ಮಡಿ ಶಿಕ್ಷೆ ನೀಡುವುದಕ್ಕಾಗಿ ಅವರಿಗೆ ಕಾಲಾವಕಾಶ ನೀಡುತ್ತಾನೆ ಮತ್ತು ಅವರನ್ನು ಶಿಕ್ಷಿಸಲು ಆತುರ ಪಡುವುದಿಲ್ಲ.
- ಅನೇಕ ಸಮುದಾಯಗಳಿಗೆ ಅಲ್ಲಾಹು ಶಿಕ್ಷೆ ನೀಡಲು ಅವರ ಅನ್ಯಾಯಗಳೇ ಕಾರಣವಾಗಿವೆ.
- ಅಲ್ಲಾಹು ಒಂದು ಊರನ್ನು ನಾಶಪಡಿಸಿದರೆ, ಆ ಊರಿನಲ್ಲಿ ಧರ್ಮನಿಷ್ಠರು ಕೂಡ ಇರಬಹುದು. ಇವರು ಪುನರುತ್ಥಾನ ದಿನದಂದು ಅವರ ಧರ್ಮನಿಷ್ಠೆಯ ಆಧಾರದಲ್ಲಿ ಪ್ರತಿಫಲವನ್ನು ಪಡೆಯುತ್ತಾರೆ. ಶಿಕ್ಷೆಯಲ್ಲಿ ಅವರು ಒಳಗೊಂಡಿರುವುದು ಅವರಿಗೆ ಯಾವುದೇ ತೊಂದರೆ ಮಾಡುವುದಿಲ್ಲ.