/ ಸವಾರಿ ಮಾಡುವವನು ಪಾದಚಾರಿಗೆ ಸಲಾಂ ಹೇಳಬೇಕು, ಪಾದಚಾರಿ ಕುಳಿತಿರುವವನಿಗೆ ಸಲಾಂ ಹೇಳಬೇಕು ಮತ್ತು ಸಣ್ಣ ಗುಂಪಿನ ಜನರು ದೊಡ್ಡ ಗುಂಪಿನ ಜನರಿಗೆ ಸಲಾಂ ಹೇಳಬೇಕು...

ಸವಾರಿ ಮಾಡುವವನು ಪಾದಚಾರಿಗೆ ಸಲಾಂ ಹೇಳಬೇಕು, ಪಾದಚಾರಿ ಕುಳಿತಿರುವವನಿಗೆ ಸಲಾಂ ಹೇಳಬೇಕು ಮತ್ತು ಸಣ್ಣ ಗುಂಪಿನ ಜನರು ದೊಡ್ಡ ಗುಂಪಿನ ಜನರಿಗೆ ಸಲಾಂ ಹೇಳಬೇಕು...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸವಾರಿ ಮಾಡುವವನು ಪಾದಚಾರಿಗೆ ಸಲಾಂ ಹೇಳಬೇಕು, ಪಾದಚಾರಿ ಕುಳಿತಿರುವವನಿಗೆ ಸಲಾಂ ಹೇಳಬೇಕು ಮತ್ತು ಸಣ್ಣ ಗುಂಪಿನ ಜನರು ದೊಡ್ಡ ಗುಂಪಿನ ಜನರಿಗೆ ಸಲಾಂ ಹೇಳಬೇಕು."
متفق عليه

ವಿವರಣೆ

ಜನರಿಗೆ "ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು" ಎಂದು ಸಲಾಂ ಹೇಳುವುದರ ಶಿಷ್ಟಾಚಾರವನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕಲಿಸುತ್ತಿದ್ದಾರೆ. ಕಿರಿಯರು ಹಿರಿಯರಿಗೆ ಸಲಾಂ ಹೇಳಬೇಕು, ಸವಾರಿ ಮಾಡುವವನು ಪಾದಚಾರಿಗೆ ಸಲಾಂ ಹೇಳಬೇಕು, ಪಾದಚಾರಿ ಕುಳಿತಿರುವವನಿಗೆ ಸಲಾಂ ಹೇಳಬೇಕು, ಸಣ್ಣ ಸಂಖ್ಯೆಯ ಜನರು ದೊಡ್ಡ ಸಂಖ್ಯೆಯ ಜನರಿಗೆ ಸಲಾಂ ಹೇಳಬೇಕು.

Hadeeth benefits

  1. ಹದೀಸಿನಲ್ಲಿ ತಿಳಿಸಲಾದ ರೀತಿಯಲ್ಲಿ ಸಲಾಂ ಹೇಳುವುದು ಅಪೇಕ್ಷಣೀಯವಾಗಿದೆ. ಆದರೆ ಹದೀಸಿನಲ್ಲಿ ತಿಳಿಸಿರುವುದಕ್ಕೆ ವಿರುದ್ಧವಾಗಿ, ಉದಾಹರಣೆಗೆ, ಕುಳಿತಿರುವವನು ಪಾದಚಾರಿಗೆ ಸಲಾಂ ಹೇಳಿದರೆ ಅದರಲ್ಲೇನೂ ತೊಂದರೆಯಿಲ್ಲ. ಆದರೆ ಅದು ಸೂಕ್ತ ಮತ್ತು ಶ್ರೇಷ್ಠ ವಿಧಾನಕ್ಕೆ ವಿರುದ್ಧವಾಗಿದೆ.
  2. ಹದೀಸಿನಲ್ಲಿ ತಿಳಿಸಲಾದ ವಿಧಾನದಲ್ಲಿ ಸಲಾಂ ಹೇಳುವುದನ್ನು ವ್ಯಾಪಕಗೊಳಿಸುವುದು ಪ್ರೀತಿ ಮತ್ತು ಸಾಮರಸ್ಯಕ್ಕೆ ಕಾರಣವಾಗುತ್ತದೆ.
  3. ಇಲ್ಲಿ ತಿಳಿಸಲಾದ ವ್ಯಕ್ತಿಗಳು ಸಮಾನ ಸ್ಥಿತಿಯಲ್ಲಿದ್ದರೆ, (ಅಂದರೆ ಪಾದಚಾರಿಗಳಿಗೆ ಪಾದಚಾರಿಗಳು ಎದುರಾದರೆ) ಮೊತ್ತಮೊದಲು ಸಲಾಂ ಹೇಳುವವರು ಅತ್ಯುತ್ತಮರಾಗಿದ್ದಾರೆ.
  4. ಜನರಿಗೆ ಅಗತ್ಯವಿರುವ ಎಲ್ಲವನ್ನೂ ವಿವರಿಸಿಕೊಟ್ಟಿರುವುದು ಇಸ್ಲಾಮಿ ಧರ್ಮಶಾಸ್ತ್ರದ ಸಂಪೂರ್ಣತೆಯನ್ನು ತೋರಿಸುತ್ತದೆ.
  5. ಸಲಾಂ ಹೇಳುವುದರ ಶಿಷ್ಟಾಚಾರಗಳನ್ನು ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಅವರ ಹಕ್ಕು ನೀಡುವುದನ್ನು ಕಲಿಸಲಾಗಿದೆ.