- ಇದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಿಂದ ವರದಿ ಮಾಡುವ ಹದೀಸ್ ಆಗಿದ್ದು ಇದನ್ನು ಪವಿತ್ರ (ಕುದ್ಸಿ) ಅಥವಾ ದೈವಿಕ ಹದೀಸ್ ಎಂದು ಕರೆಯಲಾಗುತ್ತದೆ. ಇಂತಹ ಹದೀಸ್‌ಗಳ ಪದಗಳು ಮತ್ತು ಅರ್ಥವು ಅಲ್ಲಾಹನದ್ದೇ ಆಗಿವೆ. ಆದರೆ ಇವುಗಳಿಗೆ ಕುರ್‌ಆನ್‌ನ ವಚನಗಳಿಗೆ ಇರುವ ವಿಶೇಷತೆಗಳಿಲ್ಲ. ಅಂದರೆ ಈ ವಚನಗಳನ್ನು ಪಠಿಸುವುದು ಆರಾಧನೆಯಲ್ಲ, ಇವುಗಳನ್ನು ಸ್ಪರ್ಶಿಸಲು ಶುದ್ಧಿಯಿರಬೇಕಾದ ಅಗತ್ಯವಿಲ್ಲ ಮತ್ತು ಇವು ಸವಾಲಿನ ರೂಪದಲ್ಲಿ ಅಥವಾ ಪವಾಡದ ರೂಪದಲ್ಲಿ ಅವತೀರ್ಣವಾಗಿಲ್ಲ.
- ಮನುಷ್ಯರು ಪಡೆಯುವ ಯಾವುದೇ ಜ್ಞಾನ ಅಥವಾ ಮಾರ್ಗದರ್ಶನವು ಅಲ್ಲಾಹನ ಮಾರ್ಗದರ್ಶನ ಮತ್ತು ಬೋಧನೆಯಿಂದಲೇ ಬರುತ್ತದೆ.
- ದಾಸನಿಗೆ ಏನಾದರೂ ಒಳಿತುಂಟಾದರೆ ಅದು ಅಲ್ಲಾಹನ ಅನುಗ್ರಹದಿಂದಾಗಿದೆ. ಅವನಿಗೆ ಏನಾದರೂ ಕೆಡುಕುಂಟಾದರೆ ಅದು ಅವನ ಮನಸ್ಸು ಮತ್ತು ಮೋಹದಿಂದಾಗಿದೆ.
- ಯಾರಾದರೂ ಒಳಿತು ಮಾಡಿದರೆ ಅದು ಅಲ್ಲಾಹನ ಅನುಗ್ರಹದಿಂದಲೇ ಆಗಿದೆ. ಅದಕ್ಕೆ ಅಲ್ಲಾಹು ಪ್ರತಿಫಲ ನೀಡುವುದು ಕೂಡ ಅವನ ಅನುಗ್ರಹದಿಂದಲೇ ಆಗಿದೆ. ಆದ್ದರಿಂದ ಅವನು ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಬೇಕು. ಇನ್ನು ಯಾರಾದರೂ ಕೆಡುಕು ಮಾಡಿದರೆ ಅವನು ಅವನ ಮನಸ್ಸನ್ನೇ ಹೊರತು ಇನ್ನಾರನ್ನೂ ದೂಷಿಸಬೇಕಾಗಿಲ್ಲ.