- ಇಸ್ಲಾಂ ಧರ್ಮದ ಶ್ರೇಷ್ಠತೆ ಮತ್ತು ಮಹಾತ್ಮೆಯನ್ನು ಮತ್ತು ಇಸ್ಲಾಂ ಅದಕ್ಕಿಂತ ಮೊದಲಿನ ಎಲ್ಲಾ ಪಾಪಗಳನ್ನು ಅಳಿಸುತ್ತದೆ ಎಂದು ತಿಳಿಸಲಾಗಿದೆ.
- ಅಲ್ಲಾಹನ ಕರುಣೆ ಮತ್ತು ಕ್ಷಮೆಯ ವಿಶಾಲತೆಯನ್ನು ತಿಳಿಸಲಾಗಿದೆ.
- ಶಿರ್ಕ್, ಕಾನೂನುಬಾಹಿರ ಹತ್ಯೆ, ವ್ಯಭಿಚಾರವನ್ನು ನಿಷೇಧಿಸಲಾಗಿದೆ ಮತ್ತು ಈ ಪಾಪವೆಸಗುವವರಿಗೆ ಉಗ್ರ ಎಚ್ಚರಿಕೆ ನೀಡಲಾಗಿದೆ.
- ನಿಷ್ಕಳಂಕತೆ ಮತ್ತು ಸತ್ಕರ್ಮಗಳಿಂದ ಕೂಡಿದ ಪ್ರಾಮಾಣಿಕ ಪಶ್ಚಾತ್ತಾಪವು ಸತ್ಯನಿಷೇಧ ಸೇರಿದಂತೆ ಎಲ್ಲಾ ಮಹಾಪಾಪಗಳನ್ನು ಅಳಿಸುತ್ತದೆ.
- ಅಲ್ಲಾಹನ ಕರುಣೆಯ ಬಗ್ಗೆ ನಿರಾಶರಾಗುವುದನ್ನು ಮತ್ತು ಹತಾಶೆ ವ್ಯಕ್ತಪಡಿಸುವುದನ್ನು ನಿಷೇಧಿಸಲಾಗಿದೆ.