ಮಹ್ಮೂದ್ ಬಿನ್ ಲಬೀದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಖಂಡಿತವಾಗಿಯೂ ನಾನು...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರು ತಮ್ಮ ಸಮುದಾಯದ ಬಗ್ಗೆ ಸಣ್ಣ ಶಿರ್ಕನ್ನು (ಸಣ್ಣ ಬಹುದೇವತ್ವವನ್ನು), ಅಂದರೆ ತೋರಿಕ...
ಅಬೂ ಮರ್ಸದ್ ಗನವಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸಮಾಧಿ...
ಸಮಾಧಿಗಳ ಮೇಲೆ ಕೂರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ.
ಅದೇ ರೀತಿ, ಸಮಾಧಿಗಳ ಕಡೆಗೆ ನಮಾಝ್ ಮಾಡುವುದನ್ನೂ ವಿರೋಧಿಸಿದ್ದ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದೇವದೂತರು ನಾಯಿ ಅಥವಾ ಗಂಟೆಯಿ...
ನಾಯಿ ಅಥವಾ ಗಂಟೆ ಇರುವ ಪ್ರಯಾಣದಲ್ಲಿ ದೇವದೂತರು ಅವರ ಜೊತೆ ಸೇರುವುದಿಲ್ಲ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸಿದ್ದಾರೆ. ಗಂಟೆ ಎಂದರೆ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಶೈತಾನನು ನಿಮ್...
ಶೈತಾನನು ಸತ್ಯವಿಶ್ವಾಸಿಯ ಮನಸ್ಸಿನಲ್ಲಿ ಪಿಸುಗುಡುವ ಇಂತಹ ಪ್ರಶ್ನೆಗಳಿಗೆ ಔಷಧಿಯನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ತಿಳಿಸುತ್ತಿದ್...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಕುದ್ಸಿ (ಪವಿತ್ರ) ಹದೀಸಿನಲ್ಲಿ ಹೀಗೆ ಹೇಳಿದ್ದಾನೆ: ಯಾರಾದರೂ ನ...
ಮಹ್ಮೂದ್ ಬಿನ್ ಲಬೀದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಖಂಡಿತವಾಗಿಯೂ ನಾನು ನಿಮ್ಮ ಬಗ್ಗೆ ಸಣ್ಣ ಶಿರ್ಕ್ (ಸಣ್ಣ ಬಹುದೇವತ್ವ) ವನ್ನು ಅತಿಯಾಗಿ ಭಯಪಡುತ್ತೇನೆ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸಣ್ಣ ಶಿರ್ಕ್ ಎಂದರೇನು?" ಅವರು ಉತ್ತರಿಸಿದರು: "ತೋರಿಕೆಗಾಗಿ ಕೆಲಸ ಮಾಡುವುದು. ಪುನರುತ್ಥಾನ ದಿನದಂದು ಜನರಿಗೆ ಅವರ ಕರ್ಮಗಳ ಪ್ರತಿಫಲವನ್ನು ನೀಡುವಾಗ ತೋರಿಕೆಗಾಗಿ ಕೆಲಸ ಮಾಡಿದವರೊಡನೆ ಅಲ್ಲಾಹು ಹೇಳುವನು: 'ನೀವು ಇಹಲೋಕದಲ್ಲಿ ಯಾರಿಗೆ ತೋರಿಸಲು ಕೆಲಸ ಮಾಡಿದ್ದೀರೋ ಅವರ ಬಳಿಗೆ ಹೋಗಿ, ಅವರಿಂದ ಏನಾದರೂ ಪ್ರತಿಫಲ ಸಿಗಬಹುದೇ ಎಂದು ನೋಡಿ."
ಅಬೂ ಮರ್ಸದ್ ಗನವಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸಮಾಧಿಗಳ ಮೇಲೆ ಕೂರಬೇಡಿ ಮತ್ತು ಅವುಗಳ ಕಡೆಗೆ ನಮಾಝ್ ಮಾಡಬೇಡಿ."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದೇವದೂತರು ನಾಯಿ ಅಥವಾ ಗಂಟೆಯಿರುವ ಗುಂಪಿನ ಜೊತೆ ಸೇರುವುದಿಲ್ಲ."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಶೈತಾನನು ನಿಮ್ಮಲ್ಲೊಬ್ಬನ ಬಳಿಗೆ ಬಂದು ಕೇಳುತ್ತಾನೆ: "ಇದನ್ನು ಸೃಷ್ಟಿಸಿದ್ದು ಯಾರು? ಇದನ್ನು ಸೃಷ್ಟಿಸಿದ್ದು ಯಾರು?" ಹೀಗೆ ಅವನು "ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಸೃಷ್ಟಿಸಿದ್ದು ಯಾರು?" ಎಂದು ಕೇಳುವ ತನಕ ಮುಂದುವರಿಯುತ್ತಾನೆ. ಯಾರಿಗಾದರೂ ಇಂತಹ ಅನುಭವವಾದರೆ ಅವನು ಅಲ್ಲಾಹನಲ್ಲಿ ಅಭಯ ಯಾಚಿಸಿ ಅಲ್ಲಿಯೇ ನಿಂತುಬಿಡಲಿ."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಹೇಳಿದನು: ನನ್ನ ಮಿತ್ರರ ಮೇಲೆ ದ್ವೇಷ ತೋರುವವನು ಯಾರೋ ಅವನ ವಿರುದ್ಧ ನಾನು ಯುದ್ಧವನ್ನು ಘೋಷಿಸಿದ್ದೇನೆ. ನಾನು ನನ್ನ ದಾಸನಿಗೆ ಕಡ್ಡಾಯಗೊಳಿಸಿದ ಕರ್ಮಗಳ ಮೂಲಕವಲ್ಲದೆ ನಾನು ಇಷ್ಟಪಡುವ ಇತರ ಯಾವುದರ ಮೂಲಕವೂ ಅವನು ನನಗೆ ಹತ್ತಿರವಾಗುವುದಿಲ್ಲ. ನನ್ನ ದಾಸನು ಹೆಚ್ಚುವರಿ ಕರ್ಮಗಳನ್ನು (ಐಚ್ಛಿಕ ಕರ್ಮಗಳನ್ನು) ಮಾಡುವ ಮೂಲಕ ನನಗೆ ಹತ್ತಿರವಾಗುತ್ತಲೇ ಇರುತ್ತಾನೆ, ಎಲ್ಲಿಯವರೆಗೆಂದರೆ ನಾನು ಅವನನ್ನು ಪ್ರೀತಿಸುವ ತನಕ. ನಾನು ಅವನನ್ನು ಪ್ರೀತಿಸಿದರೆ, ಅವನು ಕೇಳುವ ಅವನ ಶ್ರವಣ ನಾನಾಗುತ್ತೇನೆ, ಅವನು ನೋಡುವ ಅವನ ದೃಷ್ಟಿ ನಾನಾಗುತ್ತೇನೆ, ಅವನು ಹಿಡಿಯುವ ಅವನ ಕೈ ನಾನಾಗುತ್ತೇನೆ ಮತ್ತು ಅವನು ನಡೆಯುವ ಅವನ ಕಾಲು ನಾನಾಗುತ್ತೇನೆ. ಅವನು ನನ್ನಲ್ಲಿ ಏನಾದರೂ ಕೇಳಿದರೆ ನಾನು ಅದನ್ನು ಖಂಡಿತ ಕೊಡುತ್ತೇನೆ. ಅವನು ನನ್ನಲ್ಲಿ ರಕ್ಷೆ ಬೇಡಿದರೆ ನಾನು ಖಂಡಿತ ಅವನಿಗೆ ರಕ್ಷೆ ನೀಡುತ್ತೇನೆ. ನನ್ನ ದಾಸನ ಆತ್ಮವನ್ನು ವಶಪಡಿಸಲು ನಾನು ಹಿಂಜರಿಯುವಂತೆ, ನಾನು ಮಾಡುವ ಇತರ ಯಾವುದರ ಬಗ್ಗೆಯೂ ನಾನು ಹಿಂಜರಿಯುವುದಿಲ್ಲ. ಏಕೆಂದರೆ, ಅವನು ಮರಣವನ್ನು ಇಷ್ಟಪಡುವುದಿಲ್ಲ ಮತ್ತು ಅವನನ್ನು ನೋಯಿಸಲು ನಾನು ಇಷ್ಟಪಡುವುದಿಲ್ಲ."
ಇರ್ಬಾದ್ ಬಿನ್ ಸಾರಿಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ನಡುವೆ ನಿಂತು, ಹೃದಯಗಳು ನಡುಗುವ ಮತ್ತು ಕಣ್ಣೀರು ಹರಿಯುವ ರೀತಿಯಲ್ಲಿ ಮನಮುಟ್ಟುವ ಪ್ರವಚನವನ್ನು ನೀಡಿದರು. ಆಗ ಅವರೊಡನೆ ಹೇಳಲಾಯಿತು: "ಓ ಅಲ್ಲಾಹನ ಸಂದೇಶವಾಹಕರೇ! ಇದು ವಿದಾಯದ ಪ್ರವಚನದಂತಿದೆ. ಆದ್ದರಿಂದ ನಮಗೆ ಉಪದೇಶ ನೀಡಿರಿ." ಆಗ ಅವರು ಹೇಳಿದರು: "ಅಲ್ಲಾಹನನ್ನು ಭಯಪಡಿರಿ, ಕಿವಿಗೊಡಿರಿ ಮತ್ತು ಅನುಸರಿಸಿರಿ, ನಿಮ್ಮ ಆಡಳಿತಗಾರನು ಅಬಿಸೀನಿಯಾದ ಗುಲಾಮನಾಗಿದ್ದರೂ ಸಹ. ನನ್ನ ಕಾಲಾನಂತರ ನಿಮ್ಮಲ್ಲಿ ಯಾರು ಬದುಕಿರುತ್ತಾರೋ ಅವರು ಬಹಳಷ್ಟು ಭಿನ್ನಾಭಿಪ್ರಾಯಗಳನ್ನು ಕಾಣುವರು. ಆಗ ನೀವು ನನ್ನ ಚರ್ಯೆಗೆ ಮತ್ತು ಸರಿಯಾದ ಸನ್ಮಾರ್ಗದಲ್ಲಿರುವ ಖಲೀಫರ ಚರ್ಯೆಗೆ ಬದ್ಧರಾಗಿರಿ. ಅದನ್ನು ನಿಮ್ಮ ದವಡೆ ಹಲ್ಲುಗಳಿಂದ ಕಚ್ಚಿ ಹಿಡಿಯಿರಿ. ಹೊಸದಾಗಿ ಆವಿಷ್ಕರಿಸಲಾದ ವಿಷಯಗಳ ಬಗ್ಗೆ ಎಚ್ಚರದಿಂದಿರಿ. ಏಕೆಂದರೆ ಪ್ರತಿಯೊಂದು ಹೊಸ ಆಚಾರವೂ ದಾರಿಗೇಡಾಗಿದೆ."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಆಜ್ಞಾಪಾಲನೆಯಿಂದ ಹಿಂದೆ ಸರಿದು, ಸಮಾಜದಿಂದ ಬೇರ್ಪಟ್ಟು, ಅದೇ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾನೋ, ಅವನು ಅಜ್ಞಾನಕಾಲದ ಸಾವನ್ನಪ್ಪಿದ್ದಾನೆ. ಯಾರು ಅಂಧ ಪತಾಕೆಯ ಅಡಿಯಲ್ಲಿ ಯುದ್ಧ ಮಾಡುತ್ತಾ, ಜನಾಂಗೀಯತೆಗಾಗಿ ಕೋಪಗೊಳ್ಳುತ್ತಲೂ, ಜನಾಂಗೀಯತೆಯ ಕಡೆಗೆ ಕರೆಯುತ್ತಲೂ, ಜನಾಂಗೀಯತೆಯನ್ನು ಬೆಂಬಲಿಸುತ್ತಲೂ ಇರುತ್ತಾ ಅದೇ ಸ್ಥಿತಿಯಲ್ಲಿ ಸಾಯುತ್ತಾನೋ, ಅವನು ಅಜ್ಞಾನಕಾಲದ ಸಾವನ್ನಪ್ಪಿದ್ದಾನೆ. ಯಾರು ನನ್ನ ಸಮುದಾಯದ ವಿರುದ್ಧ ಬಂಡೆದ್ದು, ಅವರಲ್ಲಿರುವ ನೀತಿವಂತರಿಗೂ ದುಷ್ಟರಿಗೂ ಬಡಿಯುತ್ತಾನೋ, ಅವರಲ್ಲಿರುವ ಸತ್ಯವಿಶ್ವಾಸಿಗಳನ್ನು ಕೂಡ ಬಿಟ್ಟುಬಿಡುವುದಿಲ್ಲವೋ, ಮತ್ತು ಕರಾರು ಮಾಡಿಕೊಂಡವರ ಕರಾರನ್ನು ಸಹ ನೆರವೇರಿಸುವುದಿಲ್ಲವೋ, ಅವನು ನನಗೆ ಸೇರಿದವನಲ್ಲ ಮತ್ತು ನಾನು ಅವನಿಗೆ ಸೇರಿದವನಲ್ಲ."
ಮಅಕಿಲ್ ಬಿನ್ ಯಸಾರ್ ಮುಝನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಲ್ಲಾಹು ಒಬ್ಬನಿಗೆ ಆಡಳಿತದ ಅಧಿಕಾರವನ್ನು ನೀಡಿ, ಅವನು ಇಹಲೋಕ ತ್ಯಜಿಸುವಾಗ ತನ್ನ ಪ್ರಜೆಗಳಿಗೆ ವಂಚನೆ ಮಾಡಿದ ಸ್ಥಿತಿಯಲ್ಲಿ ಇಹಲೋಕ ತ್ಯಜಿಸಿದರೆ ಅಲ್ಲಾಹು ಅವನಿಗೆ ಸ್ವರ್ಗವನ್ನು ನಿಷೇಧಿಸದೇ ಇರಲಾರ.”
ಸತ್ಯವಿಶ್ವಾಸಿಗಳ ಮಾತೆ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಆಡಳಿತಗಾರರು ಬರುವರು. ಆಗ ಅವರು ಮಾಡುವ ಕೆಲವು ಕಾರ್ಯಗಳನ್ನು ನೀವು ಗುರುತಿಸುವಿರಿ ಮತ್ತು ಕೆಲವು ಕಾರ್ಯಗಳನ್ನು ಅಲ್ಲಗಳೆಯುವಿರಿ. ಯಾರು (ಅವರ ಕೆಡುಕುಗಳನ್ನು) ಗುರುತಿಸುತ್ತಾರೋ ಅವರು ದೋಷಮುಕ್ತರಾಗುವರು. ಯಾರು (ಅವುಗಳಿಗೆ) ಅಸಮ್ಮತಿ ಸೂಚಿಸುತ್ತಾರೋ ಅವರು ಸುರಕ್ಷಿತರಾಗುವರು. ಆದರೆ ಅವರ ಬಗ್ಗೆ ಸಂತೃಪ್ತರಾಗಿ ಅವರನ್ನು ಅನುಸರಿಸುವವರು ಇದಕ್ಕೆ ಹೊರತಾಗಿದ್ದಾರೆ.” ಅವರು (ಸಹಾಬಿಗಳು) ಕೇಳಿದರು: “ನಾವು ಅವರ (ಆಡಳಿತಗಾರರ) ವಿರುದ್ಧ ಯುದ್ಧ ಮಾಡಬೇಕೇ?” ಪ್ರವಾದಿಯವರು ಉತ್ತರಿಸಿದರು: “ಬೇಡ, ಅವರು ನಮಾಝ್ ನಿರ್ವಹಿಸುತ್ತಿರುವ ತನಕ.”
ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಆದ್ಯತೆಗಳು ಮತ್ತು ನೀವು ಒಪ್ಪಿಕೊಳ್ಳದಂತಹ ವಿಷಯಗಳು ಇರುತ್ತವೆ." ಅನುಯಾಯಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಾವು ನಮಗೆ ಏನು ಆದೇಶಿಸುತ್ತೀರಿ?" ಅವರು ಉತ್ತರಿಸಿದರು: "ಅವರ ಹಕ್ಕುಗಳನ್ನು ನೆರವೇರಿಸಿರಿ ಮತ್ತು ನಿಮ್ಮ ಹಕ್ಕನ್ನು ಅಲ್ಲಾಹನಲ್ಲಿ ಬೇಡಿಕೊಳ್ಳಿ."
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು. ಆಡಳಿತಗಾರನು ಜನರಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅವರಿಗೆ ಅವನೇ ಜವಾಬ್ದಾರನಾಗಿದ್ದಾನೆ. ಪುರುಷನು ತನ್ನ ಮನೆಯವರಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅವರಿಗೆ ಅವನೇ ಜವಾಬ್ದಾರನಾಗಿದ್ದಾನೆ. ಮಹಿಳೆ ತನ್ನ ಗಂಡನ ಮನೆಗೆ ಮತ್ತು ಅವನ ಮಕ್ಕಳಿಗೆ ಕುರಿಗಾಹಿಯಾಗಿದ್ದಾಳೆ ಮತ್ತು ಅವರಿಗೆ ಅವಳೇ ಜವಾಬ್ದಾರಳಾಗಿದ್ದಾಳೆ. ಗುಲಾಮನು ತನ್ನ ಯಜಮಾನನ ಆಸ್ತಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅದಕ್ಕೆ ಅವನೇ ಜವಾಬ್ದಾರನಾಗಿದ್ದಾನೆ. ತಿಳಿಯಿರಿ! ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು."
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಈ ಮನೆಯಲ್ಲಿ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಓ ಅಲ್ಲಾಹ್! ನನ್ನ ಸಮುದಾಯದ ಮೇಲೆ ಅಧಿಕಾರ ಪಡೆದು ಅವರೊಡನೆ ಕಠಿಣವಾಗಿ ವರ್ತಿಸುವವರೊಡನೆ ನೀನು ಕೂಡ ಕಠಿಣವಾಗಿ ವರ್ತಿಸು; ಮತ್ತು ನನ್ನ ಸಮುದಾಯದ ಮೇಲೆ ಅಧಿಕಾರ ಪಡೆದು ಅವರೊಡನೆ ಮೃದುವಾಗಿ ವರ್ತಿಸುವವರೊಡನೆ ನೀನು ಕೂಡ ಮೃದುವಾಗಿ ವರ್ತಿಸು."