/ ಆದ್ಯತೆಗಳು ಮತ್ತು ನೀವು ಒಪ್ಪಿಕೊಳ್ಳದಂತಹ ವಿಷಯಗಳು ಇರುತ್ತವೆ." ಅನುಯಾಯಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಾವು ನಮಗೆ ಏನು ಆದೇಶಿಸುತ್ತೀರಿ?" ಅವರು ಉತ್ತರಿಸಿದರು: "ಅವರ ಹಕ್ಕುಗಳನ್ನು ನೆರವೇರಿಸಿರಿ ಮತ್ತು ನಿಮ್ಮ ಹಕ್ಕನ್ನು ಅಲ್ಲಾಹನಲ್ಲಿ ಬೇಡಿಕೊಳ್ಳಿ...

ಆದ್ಯತೆಗಳು ಮತ್ತು ನೀವು ಒಪ್ಪಿಕೊಳ್ಳದಂತಹ ವಿಷಯಗಳು ಇರುತ್ತವೆ." ಅನುಯಾಯಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಾವು ನಮಗೆ ಏನು ಆದೇಶಿಸುತ್ತೀರಿ?" ಅವರು ಉತ್ತರಿಸಿದರು: "ಅವರ ಹಕ್ಕುಗಳನ್ನು ನೆರವೇರಿಸಿರಿ ಮತ್ತು ನಿಮ್ಮ ಹಕ್ಕನ್ನು ಅಲ್ಲಾಹನಲ್ಲಿ ಬೇಡಿಕೊಳ್ಳಿ...

ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಆದ್ಯತೆಗಳು ಮತ್ತು ನೀವು ಒಪ್ಪಿಕೊಳ್ಳದಂತಹ ವಿಷಯಗಳು ಇರುತ್ತವೆ." ಅನುಯಾಯಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಾವು ನಮಗೆ ಏನು ಆದೇಶಿಸುತ್ತೀರಿ?" ಅವರು ಉತ್ತರಿಸಿದರು: "ಅವರ ಹಕ್ಕುಗಳನ್ನು ನೆರವೇರಿಸಿರಿ ಮತ್ತು ನಿಮ್ಮ ಹಕ್ಕನ್ನು ಅಲ್ಲಾಹನಲ್ಲಿ ಬೇಡಿಕೊಳ್ಳಿ."
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಮುಸಲ್ಮಾನರ ಮೇಲೆ ಕೆಲವರು ಆಡಳಿತ ವಹಿಸುವರು. ಅವರು ಮುಸಲ್ಮಾನರ ಸಂಪತ್ತು ಹಾಗೂ ಇತರ ಲೌಕಿಕ ವಿಷಯಗಳಿಗೆ ಆದ್ಯತೆ ನೀಡುವರು. ಅವರು ಅದರೊಡನೆ ಮನಬಂದಂತೆ ವ್ಯವಹರಿಸುವರು ಮತ್ತು ಮುಸಲ್ಮಾನರಿಗೆ ಅವರ ಹಕ್ಕುಗಳನ್ನು ನಿರಾಕರಿಸುವರು. ಅವರಿಂದ ನೀವು ಒಪ್ಪಿಕೊಳ್ಳದಂತಹ ಕೆಲವು ಧಾರ್ಮಿಕ ಕಾರ್ಯಗಳು ಕೂಡ ಉಂಟಾಗುವುವು. ಆಗ ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂತೃಪ್ತನಾಗಲಿ) ಅಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ಕೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದೇನೆಂದರೆ, ಅವರು ನಿಮ್ಮ ಸಂಪತ್ತಿನಲ್ಲಿ ಮನಬಂದಂತೆ ವ್ಯವಹರಿಸುವುದನ್ನು ಕಂಡು ನೀವು ಕಡ್ಡಾಯವಾಗಿ ಮಾಡಬೇಕಾದ ಕರ್ತವ್ಯಗಳನ್ನು, ಅಂದರೆ ಅವರ ಮಾತನ್ನು ಕೇಳುವುದು ಮತ್ತು ಅನುಸರಿಸುವುದನ್ನು ನೀವು ಬಿಟ್ಟುಬಿಡಬೇಡಿ. ಬದಲಿಗೆ, ನೀವು ತಾಳ್ಮೆಯಿಂದಿರಿ, ಅವರ ಮಾತನ್ನು ಕೇಳಿರಿ ಮತ್ತು ಅನುಸರಿಸಿರಿ. ಅಧಿಕಾರದ ವಿಷಯದಲ್ಲಿ ಅವರೊಡನೆ ಜಗಳವಾಡಲು ಹೋಗಬೇಡಿ. ನಿಮ್ಮ ಹಕ್ಕುಗಳನ್ನು ಅಲ್ಲಾಹನೊಂದಿಗೆ ಬೇಡಿಕೊಳ್ಳಿ. ಅದೇ ರೀತಿ, ಅವರನ್ನು ಸರಿ ಮಾಡಲು ಮತ್ತು ಅವರ ಕೆಡುಕು-ಅನ್ಯಾಯಗಳಿಂದ ನಿಮ್ಮನ್ನು ರಕ್ಷಿಸಲು ಅಲ್ಲಾಹನೊಂದಿಗೆ ಬೇಡಿಕೊಳ್ಳಿ.

Hadeeth benefits

  1. ಈ ಹದೀಸ್ ಪ್ರವಾದಿತ್ವದ ಚಿಹ್ನೆಗಳಲ್ಲಿ ಒಂದಾಗಿದೆ. ಏಕೆಂದರೆ, ಇದು ಸಮುದಾಯದಲ್ಲಿ ಸಂಭವಿಸಲಿರುವ ಘಟನೆಯನ್ನು ವಿವರಿಸುತ್ತದೆ. ಅದು ಹಾಗೆಯೇ ಸಂಭವಿಸಿದೆ.
  2. ಪರೀಕ್ಷೆಗೆ ಒಳಗಾಗುವವರಿಗೆ ಅವರಿಗೆ ಎದುರಾಗುವ ಪರೀಕ್ಷೆಗಳ ಬಗ್ಗೆ ಮುಂದಾಗಿ ತಿಳಿಸಲು ಅನುಮತಿಯಿದೆ. ಇದು ಆ ಪರೀಕ್ಷೆ ಬಂದಾಗ ಅವರು ಮನಸ್ಸನ್ನು ಗಟ್ಟಿ ಮಾಡಿ, ಸಹನೆಯಿಂದ ಪ್ರತಿಫಲವನ್ನು ಅಪೇಕ್ಷಿಸುತ್ತಾ ಇರಲೆಂದಾಗಿದೆ.
  3. ಕುರ್‌ಆನ್ ಮತ್ತು ಸುನ್ನತ್ತನ್ನು ಬಲವಾಗಿ ಹಿಡಿದುಕೊಳ್ಳುವುದರಿಂದ ಪರೀಕ್ಷೆಗಳು ಹಾಗೂ ಭಿನ್ನಾಭಿಪ್ರಾಯಗಳಿಂದ ಪಾರಾಗಬಹುದು.
  4. ಒಳಿತಿನ ಕಾರ್ಯಗಳಲ್ಲಿ ಆಡಳಿತಗಾರರ ಮಾತನ್ನು ಕೇಳಬೇಕು ಮತ್ತು ಅನುಸರಿಸಬೇಕು, ಅವರಿಂದ ಅನ್ಯಾಯ ಸಂಭವಿಸಿದರೂ ಅವರ ವಿರುದ್ಧ ದಂಗೆಯೇಳಬಾರದು ಎಂದು ಒತ್ತಿಹೇಳಲಾಗಿದೆ.
  5. ಪರೀಕ್ಷೆಗಳ ಸಮಯದಲ್ಲಿ ವಿವೇಚನೆಯನ್ನು ಬಳಸಬೇಕು ಮತ್ತು ಸುನ್ನತ್ತನ್ನು ಅನುಸರಿಸಬೇಕು.
  6. ಅನ್ಯಾಯವಾದರೂ ಸಹ ತಾನು ನಿರ್ವಹಿಸಬೇಕಾದ ಕರ್ತವ್ಯಗಳನ್ನು ನಿರ್ವಹಿಸುವುದು ಕಡ್ಡಾಯವಾಗಿದೆ.
  7. "ಎರಡು ಕೆಡುಕುಗಳಲ್ಲಿ ಅತ್ಯಂತ ಚಿಕ್ಕ ಕೆಡುಕನ್ನು ಮತ್ತು ಎರಡು ಹಾನಿಗಳಲ್ಲಿ ಅತ್ಯಂತ ಕಡಿಮೆ ಹಾನಿಯಿರುವುದನ್ನು ಆರಿಸಬೇಕು" ಎಂಬ ಸಿದ್ಧಾಂತಕ್ಕೆ ಇದರಲ್ಲಿ ಪುರಾವೆಯಿದೆ.