- ಇದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಿಂದ ವರದಿ ಮಾಡುವ ಹದೀಸ್ ಆಗಿದೆ. ಇದನ್ನು ಹದೀಸ್ ಕುದ್ಸಿ (ಪವಿತ್ರ ಹದೀಸ್) ಅಥವಾ ಹದೀಸ್ ಇಲಾಹಿ (ದೈವಿಕ ಹದೀಸ್) ಎಂದು ಕರೆಯಲಾಗುತ್ತದೆ. ಇದರ ಪದಗಳು ಮತ್ತು ಅರ್ಥವು ಅಲ್ಲಾಹನಿಂದಾಗಿವೆ. ಆದರೆ ಪಠಣವು ಆರಾಧನೆಯಾಗಿರುವುದು, ಸ್ಪರ್ಶಿಸಲು ಶುದ್ಧಿ ಇರಬೇಕಾದುದು, ಸವಾಲುಗಳು ಮತ್ತು ಪವಾಡಗಳನ್ನು ಒಳಗೊಂಡಿರುವುದು ಮುಂತಾದ ಕುರ್‌ಆನನ್ನು ಇತರ ವಚನಗಳಿಂದ ಬೇರ್ಪಡಿಸುವ ವಿಶೇಷತೆಗಳು ಕುದ್ಸಿ ಹದೀಸ್‌ಗಳಿಗಿಲ್ಲ.
- ಅಲ್ಲಾಹನ ಮಿತ್ರರಿಗೆ ತೊಂದರೆ ಕೊಡುವುದನ್ನು ನಿಷೇಧಿಸಲಾಗಿದೆ ಮತ್ತು ಅವರನ್ನು ಪ್ರೀತಿಸಲು ಹಾಗೂ ಅವರ ಶ್ರೇಷ್ಠತೆಯನ್ನು ಅಂಗೀಕರಿಸಲು ಒತ್ತಾಯಿಸಲಾಗಿದೆ.
- ಅಲ್ಲಾಹನ ಶತ್ರುಗಳನ್ನು ದ್ವೇಷಿಸಲು ಮತ್ತು ಅವರೊಡನೆ ಮೈತ್ರಿ ಮಾಡಿಕೊಳ್ಳದಿರಲು ಆದೇಶಿಸಲಾಗಿದೆ.
- ಅಲ್ಲಾಹನ ನಿಯಮಗಳನ್ನು ಅನುಸರಿಸದೆ ತಾನು ವಲಿ (ಅಲ್ಲಾಹನ ಮಿತ್ರ) ಎಂದು ವಾದಿಸುವವನು ಸುಳ್ಳನಾಗಿದ್ದಾನೆ.
- ಕಡ್ಡಾಯ ಕರ್ಮಗಳನ್ನು ನಿರ್ವಹಿಸುವ ಮೂಲಕ ಮತ್ತು ನಿಷಿದ್ಧ ಕರ್ಮಗಳಿಂದ ದೂರವಿರುವ ಮೂಲಕ ಅಲ್ಲಾಹನ ಸ್ನೇಹವನ್ನು ಗಳಿಸಬಹುದು.
- ಅಲ್ಲಾಹನ ಪ್ರೀತಿ ಗಳಿಸುವ ಮತ್ತು ಪ್ರಾರ್ಥನೆಗೆ ಉತ್ತರ ಪಡೆಯುವ ಮಾರ್ಗಗಳಲ್ಲಿ ಒಂದು ಏನೆಂದರೆ, ಕಡ್ಡಾಯ ಕರ್ಮಗಳನ್ನು ನಿರ್ವಹಿಸುವುದು ಮತ್ತು ನಿಷಿದ್ಧ ಕರ್ಮಗಳಿಂದ ದೂರವಿರುವುದನ್ನು ಮಾಡಿದ ಬಳಿಕ ಹೆಚ್ಚುವರಿ (ಐಚ್ಛಿಕ) ಆರಾಧನೆಗಳನ್ನು ನಿರ್ವಹಿಸುವುದು.
- ಅಲ್ಲಾಹನ ಮಿತ್ರರ ಘನತೆ ಹಾಗೂ ಶ್ರೇಷ್ಠ ಹಾಗೂ ಉನ್ನತ ಸ್ಥಾನಮಾನದ ಕಡೆಗೆ ಸೂಚನೆ ನೀಡಲಾಗಿದೆ.