- ಶೈತಾನನ ದುರ್ಬೋಧನೆ ಮತ್ತು ದುರ್ವಿಚಾರಗಳನ್ನು ನಿರ್ಲಕ್ಷಿಸಬೇಕು, ಅವುಗಳ ಬಗ್ಗೆ ಆಲೋಚಿಸಬಾರದು ಮತ್ತು ಅವುಗಳನ್ನು ನಿವಾರಿಸಲು ಅಲ್ಲಾಹನಲ್ಲಿ ಅಭಯ ಕೋರಬೇಕು ಎಂದು ಈ ಹದೀಸ್ ತಿಳಿಸುತ್ತದೆ.
- ಧರ್ಮಕ್ಕೆ ವಿರುದ್ಧವಾಗಿ ಮನುಷ್ಯನ ಮನಸ್ಸಿನಲ್ಲಿ ಮೂಡುವ ದುರ್ವಿಚಾರಗಳೆಲ್ಲವೂ ಶೈತಾನನಿಂದಾಗಿವೆ ಎಂದು ಈ ಹದೀಸ್ ತಿಳಿಸುತ್ತದೆ.
- ಅಲ್ಲಾಹನ ಸಾರದ ಬಗ್ಗೆ ಆಲೋಚಿಸುವುದನ್ನು ಈ ಹದೀಸ್ ವಿರೋಧಿಸುತ್ತದೆ; ಅವನ ಸೃಷ್ಟಿಗಳ ಬಗ್ಗೆ ಹಾಗೂ ಅವನ ದೃಷ್ಟಾಂತಗಳ ಬಗ್ಗೆ ಆಲೋಚಿಸುವುದನ್ನು ಪ್ರೇರೇಪಿಸುತ್ತದೆ.