- ಯಾವುದೇ ಕೆಲಸ ಮಾಡುವಾಗ ಅಲ್ಲಾಹನ ಸಂಪ್ರೀತಿಯನ್ನು ಮಾತ್ರ ಬಯಸುವುದು ಮತ್ತು ತೋರಿಕೆಯ (ರಿಯಾ) ಬಗ್ಗೆ ಎಚ್ಚರವಾಗಿರುವುದು ಕಡ್ಡಾಯವಾಗಿದೆ.
- ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದ ಮೇಲಿದ್ದ ಸಹಾನುಭೂತಿ ಮತ್ತು ಹಿತಚಿಂತನೆ ಮತ್ತು ಅವರಿಗೆ ಸನ್ಮಾರ್ಗವನ್ನು ತೋರಿಸುವ ತವಕವನ್ನು ತಿಳಿಸಲಾಗಿದೆ.
- ಮಹಾಪುರುಷರ ನೇತಾರರಾಗಿರುವ ಸಹಾಬಿಗಳ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಷ್ಟೊಂದು ಭಯಪಡಬೇಕಾದರೆ, ಅವರ ಹೊರತಾದವರ ಬಗ್ಗೆ ಅವರಿಗಿದ್ದ ಭಯವು ಎಷ್ಟು ತೀವ್ರವಾಗಿತ್ತೆಂದು ಊಹಿಸಬಹುದಾಗಿದೆ.