- ನಾಯಿಗಳನ್ನು ಸಾಕುವುದು ಮತ್ತು ಜೊತೆಯಲ್ಲಿಡುವುದನ್ನು ನಿಷೇಧಿಸಲಾಗಿದೆ. ಆದರೆ ಬೇಟೆ ನಾಯಿಗಳು ಅಥವಾ ಕಾವಲು ನಾಯಿಗಳು ಈ ನಿಷೇಧದಿಂದ ಹೊರತಾಗಿವೆ.
- ಜೊತೆಯಲ್ಲಿ ಸೇರಲು ನಿರಾಕರಿಸುವುದು ಕರುಣೆಯ ದೇವದೂತರು ಮಾತ್ರ. ಕಾವಲುಗಾರರಾದ ದೇವದೂತರು ಊರಿನಲ್ಲಾಗಲಿ ಅಥವಾ ಪ್ರಯಾಣದಲ್ಲಾಗಲಿ ಯಾವುದೇ ಸಮಯದಲ್ಲೂ ಮನುಷ್ಯರಿಂದ ಬೇರ್ಪಡುವುದಿಲ್ಲ.
- ಗಂಟೆಯನ್ನು ನಿಷೇಧಿಸಲಾಗಿದೆ. ಏಕೆಂದರೆ, ಅದು ಶೈತಾನನ ವಾದ್ಯಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೆ, ಅದರಲ್ಲಿ ಕ್ರೈಸ್ತರ ಗಂಟೆಗಳಿಗೆ ಹೋಲಿಕೆಯಿದೆ.
- ಯಾವೆಲ್ಲಾ ವಿಷಯಗಳಲ್ಲಿ ದೇವದೂತರು ತನ್ನಿಂದ ದೂರವಾಗುತ್ತಾರೋ ಅವೆಲ್ಲಾ ವಿಷಯಗಳಿಂದಲೂ ದೂರವಿರಲು ಮುಸಲ್ಮಾನನು ಆಸಕ್ತಿ ತೋರುವುದು ಕಡ್ಡಾಯವಾಗಿದೆ.