/ “ಅಲ್ಲಾಹು ಒಬ್ಬನಿಗೆ ಆಡಳಿತದ ಅಧಿಕಾರವನ್ನು ನೀಡಿ, ಅವನು ಇಹಲೋಕ ತ್ಯಜಿಸುವಾಗ ತನ್ನ ಪ್ರಜೆಗಳಿಗೆ ವಂಚನೆ ಮಾಡಿದ ಸ್ಥಿತಿಯಲ್ಲಿ ಇಹಲೋಕ ತ್ಯಜಿಸಿದರೆ ಅಲ್ಲಾಹು ಅವನಿಗೆ ಸ್ವರ್ಗವನ್ನು ನಿಷೇಧಿಸದೇ ಇರಲಾರ.”...

“ಅಲ್ಲಾಹು ಒಬ್ಬನಿಗೆ ಆಡಳಿತದ ಅಧಿಕಾರವನ್ನು ನೀಡಿ, ಅವನು ಇಹಲೋಕ ತ್ಯಜಿಸುವಾಗ ತನ್ನ ಪ್ರಜೆಗಳಿಗೆ ವಂಚನೆ ಮಾಡಿದ ಸ್ಥಿತಿಯಲ್ಲಿ ಇಹಲೋಕ ತ್ಯಜಿಸಿದರೆ ಅಲ್ಲಾಹು ಅವನಿಗೆ ಸ್ವರ್ಗವನ್ನು ನಿಷೇಧಿಸದೇ ಇರಲಾರ.”...

ಮಅಕಿಲ್ ಬಿನ್ ಯಸಾರ್ ಮುಝನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಲ್ಲಾಹು ಒಬ್ಬನಿಗೆ ಆಡಳಿತದ ಅಧಿಕಾರವನ್ನು ನೀಡಿ, ಅವನು ಇಹಲೋಕ ತ್ಯಜಿಸುವಾಗ ತನ್ನ ಪ್ರಜೆಗಳಿಗೆ ವಂಚನೆ ಮಾಡಿದ ಸ್ಥಿತಿಯಲ್ಲಿ ಇಹಲೋಕ ತ್ಯಜಿಸಿದರೆ ಅಲ್ಲಾಹು ಅವನಿಗೆ ಸ್ವರ್ಗವನ್ನು ನಿಷೇಧಿಸದೇ ಇರಲಾರ.”
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರನ್ನೆಲ್ಲಾ ಅಲ್ಲಾಹು ಜನರ ಮೇಲೆ ಆಡಳಿತಗಾರರನ್ನಾಗಿ ಅಥವಾ ಹೊಣೆಗಾರರನ್ನಾಗಿ ಮಾಡುತ್ತಾನೋ, ಅದು ಆಡಳಿತಗಾರರು ನಡೆಸುವ ಸಾರ್ವಜನಿಕ ಆಡಳಿತವಾಗಿದ್ದರೂ, ಅಥವಾ ಪುರುಷನು ಅಥವಾ ಮಹಿಳೆಯು ನಡೆಸುವ ಮನೆಯೊಳಗಿನ ಆಡಳಿತವಾಗಿದ್ದರೂ, ಅವರು ತಮ್ಮ ಅಧೀನದಲ್ಲಿರುವವರ ಹಕ್ಕುಗಳಲ್ಲಿ ಏನಾದರೂ ಚ್ಯುತಿ ಮಾಡುವುದು, ಅವರಿಗೆ ಮೋಸ ಮಾಡುವುದು, ಅಥವಾ ಅವರೊಡನೆ ಪ್ರಾಮಾಣಿಕತೆ ತೋರದಿರುವುದು ಮುಂತಾದ ಅವರ ಧಾರ್ಮಿಕ ಮತ್ತು ಭೌತಿಕ ಹಕ್ಕುಗಳನ್ನು ನೆರವೇರಿಸದಿದ್ದರೆ ಅವನು ಈ ಕಠೋರ ಶಿಕ್ಷೆಗೆ ಅರ್ಹನಾಗುತ್ತಾನೆ.

Hadeeth benefits

  1. ಈ ಎಚ್ಚರಿಕೆ ಕೇವಲ ದೇಶದ ಆಡಳಿತಗಾರ ಅಥವಾ ಅವನ ಪ್ರತಿನಿಧಿಗಳಿಗೆ ಮಾತ್ರ ಸೀಮಿತವಲ್ಲ; ಬದಲಿಗೆ, ಅಲ್ಲಾಹು ಆಡಳಿತವನ್ನು ಒಪ್ಪಿಸಿರುವ ಎಲ್ಲರಿಗೂ ಇದು ಅನ್ವಯಿಸುತ್ತದೆ.
  2. ಮುಸಲ್ಮಾನರ ಮೇಲೆ ಯಾವುದೇ ರೀತಿಯ ಆಡಳಿತವನ್ನು ಹೊಂದಿರುವವರು ಅವರೊಡನೆ ಪ್ರಾಮಾಣಿಕವಾಗಿ ವರ್ತಿಸುವುದು, ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಲು ಕಠಿಣವಾಗಿ ಪರಿಶ್ರಮಿಸುವುದು ಮತ್ತು ಜನರಿಗೆ ಮೋಸವಾಗದಂತೆ ಎಚ್ಚರವಹಿಸುವುದು ಕಡ್ಡಾಯವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  3. ಸಾರ್ವಜನಿಕ ಅಥವಾ ಖಾಸಗಿ, ದೊಡ್ಡ ಅಥವಾ ಚಿಕ್ಕ ಆಡಳಿತವನ್ನು ವಹಿಸಿಕೊಂಡವರೆಲ್ಲರಿಗೂ ಮಹಾ ಹೊಣೆಗಾರಿಕೆಯಿದೆಯೆಂದು ಈ ಹದೀಸ್ ತಿಳಿಸುತ್ತದೆ.