- ಅಲ್ಲಾಹನ ಆಜ್ಞೋಲ್ಲಂಘನೆ ಮಾಡದ ರೀತಿಯಲ್ಲಿ ಆಡಳಿತಗಾರರನ್ನು ಅನುಸರಿಸುವುದು ಕಡ್ಡಾಯವಾಗಿದೆ.
- ಮುಖಂಡರ ವಿರುದ್ಧ ಬಂಡೆದ್ದು ಮುಸ್ಲಿಂ ಸಮಾಜದಿಂದ ಬೇರ್ಪಡುವವರಿಗೆ ಇದರಲ್ಲಿ ಕಠಿಣ ಎಚ್ಚರಿಕೆಯಿದೆ. ಅವರು ಇದೇ ಸ್ಥಿತಿಯಲ್ಲಿ ಸತ್ತರೆ ಅವರು ಅಜ್ಞಾನಕಾಲದ ಜನರು ಸಾಯುವ ರೀತಿಯಲ್ಲಿ ಸತ್ತಿದ್ದಾರೆ.
- ಪಕ್ಷಪಾತದಿಂದ ಹೋರಾಡುವುದನ್ನು ಈ ಹದೀಸ್ ವಿರೋಧಿಸುತ್ತದೆ.
- ಕರಾರು ಮತ್ತು ಒಪ್ಪಂದಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
- ಆಜ್ಞಾಪಾಲನೆ ಮಾಡುವುದರಿಂದ ಮತ್ತು ಸಮಾಜಕ್ಕೆ ಅಂಟಿಕೊಳ್ಳುವುದರಿಂದ ಯಥೇಷ್ಟ ಒಳಿತುಗಳು, ಸುರಕ್ಷತೆ, ಸಮಾಧಾನ ಮತ್ತು ಸ್ಥಿರತೆ ದೊರಕುತ್ತವೆ.
- ಅಜ್ಞಾನಕಾಲದ ಜನರ ವರ್ತನೆಗಳನ್ನು ಅನುಕರಿಸುವುದನ್ನು ವಿರೋಧಿಸಲಾಗಿದೆ.
- ಮುಸ್ಲಿಂ ಸಮಾಜಕ್ಕೆ ಅಂಟಿಕೊಂಡಿರಬೇಕೆಂದು ಆಜ್ಞಾಪಿಸಲಾಗಿದೆ.