- ಸಮಾಧಿ ಸ್ಥಳದಲ್ಲಿ, ಸಮಾಧಿಗಳ ಮಧ್ಯೆ ಅಥವಾ ಸಮಾಧಿಗಳ ಕಡೆಗೆ ನಮಾಝ್ ಮಾಡುವುದನ್ನು ವಿರೋಧಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಆದರೆ ಅಂತ್ಯಕ್ರಿಯೆಯ (ಜನಾಝ) ನಮಾಝ್ ಇದಕ್ಕೆ ಹೊರತಾಗಿದೆ. ಅದನ್ನು ಸಮಾಧಿ ಸ್ಥಳದಲ್ಲಿ ನಿರ್ವಹಿಸಬಹುದೆಂದು ಸುನ್ನತ್ತಿನಲ್ಲಿ ಸಾಬೀತಾಗಿದೆ.
- ಬಹುದೇವಾರಾಧನೆಗೆ ಕಾರಣವಾಗುವ ಮಾರ್ಗವನ್ನು ಮುಚ್ಚುವುದಕ್ಕಾಗಿ ಸಮಾಧಿಗಳ ಕಡೆಗೆ ನಮಾಝ್ ಮಾಡುವುದನ್ನು ವಿರೋಧಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
- ಸಮಾಧಿಗಳನ್ನು ಮಿತಿ ಮೀರಿ ಗೌರವಿಸುವುದು ಮತ್ತು ಅವುಗಳಿಗೆ ಅಗೌರವ ತೋರುವುದು ಎರಡನ್ನೂ ಇಸ್ಲಾಂ ಧರ್ಮವು ವಿರೋಧಿಸುತ್ತದೆ.
- ಮುಸಲ್ಮಾನನ ಪಾವಿತ್ರ್ಯವು ಮರಣದ ನಂತರವೂ ಉಳಿಯುತ್ತದೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ: "ಮೃತವ್ಯಕ್ತಿಯ ಮೂಳೆಗಳನ್ನು ತುಂಡು ಮಾಡುವುದು ಜೀವಂತ ವ್ಯಕ್ತಿಯ ಮೂಳೆಗಳನ್ನು ತುಂಡು ಮಾಡುವುದಕ್ಕೆ ಸಮ."