/ ಅಲ್ಲಾಹನ ಸೃಷ್ಟಿಯನ್ನು ಅನುಕರಿಸುವವರು ಯಾರೋ ಅವರು ಪುನರುತ್ಥಾನ ದಿನದಂದು ಅಲ್ಲಾಹನಿಂದ ಕಠೋರವಾಗಿ ಶಿಕ್ಷಿಸಲ್ಪಡುವರು...

ಅಲ್ಲಾಹನ ಸೃಷ್ಟಿಯನ್ನು ಅನುಕರಿಸುವವರು ಯಾರೋ ಅವರು ಪುನರುತ್ಥಾನ ದಿನದಂದು ಅಲ್ಲಾಹನಿಂದ ಕಠೋರವಾಗಿ ಶಿಕ್ಷಿಸಲ್ಪಡುವರು...

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಬಳಿಗೆ ಬಂದಾಗ, ನಾನು ಚಿತ್ರಗಳಿರುವ ಒಂದು ಪರದೆಯಿಂದ ನನ್ನ ಗೋಡೆಯಲ್ಲಿನ ರಂಧ್ರವನ್ನು ಮುಚ್ಚಿಟ್ಟಿದ್ದೆ. ಅವರು ಅದನ್ನು ನೋಡಿ ಅದನ್ನು ಹರಿದು ಹಾಕಿದರು. ಅವರ ಮುಖದ ಬಣ್ಣ ಬದಲಾಯಿತು. ಅವರು ಹೇಳಿದರು: “ಓ ಆಯಿಶಾ! ಅಲ್ಲಾಹನ ಸೃಷ್ಟಿಯನ್ನು ಅನುಕರಿಸುವವರು ಯಾರೋ ಅವರು ಪುನರುತ್ಥಾನ ದಿನದಂದು ಅಲ್ಲಾಹನಿಂದ ಕಠೋರವಾಗಿ ಶಿಕ್ಷಿಸಲ್ಪಡುವರು.” ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: “ಆದ್ದರಿಂದ ನಾವು ಅದನ್ನು ಕತ್ತರಿಸಿ, ಅದರಿಂದ ಒಂದೆರಡು ದಿಂಬುಗಳನ್ನು ಮಾಡಿದೆವು.”
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮನೆಗೆ ಪ್ರವೇಶಿಸಿದಾಗ, ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ವಸ್ತುಗಳನ್ನು ಜೋಪಾನವಾಗಿಡುವ ಗೋಡೆಯಲ್ಲಿರುವ ರಂಧ್ರವನ್ನು (ಮಾಡ) ಜೀವಿಗಳ ಚಿತ್ರವಿರುವ ಬಟ್ಟೆಯಿಂದ ಮುಚ್ಚಿಟ್ಟಿದ್ದರು. ಆಗ ಅಲ್ಲಾಹನಿಗಾಗಿ ಕೋಪಿಸುತ್ತಾ ಅವರ ಮುಖದ ಬಣ್ಣ ಬದಲಾಯಿತು ಮತ್ತು ಅವರು ಅದನ್ನು ತೆಗೆದು ಹಾಕಿದರು. ಅವರು ಹೇಳಿದರು: "ಅಲ್ಲಾಹನ ಸೃಷ್ಟಿಯನ್ನು ತಮ್ಮ ಚಿತ್ರಗಳ ಮೂಲಕ ಅನುಕರಿಸುವವರು ಯಾರೋ ಅವರನ್ನು ಪುನರುತ್ಥಾನ ದಿನದಂದು ಅತ್ಯಂತ ಕಠೋರವಾಗಿ ಶಿಕ್ಷಿಸಲಾಗುವುದು." ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: “ಆದ್ದರಿಂದ ನಾವು ಅದರಿಂದ ಒಂದೆರಡು ದಿಂಬುಗಳನ್ನು ಮಾಡಿದೆವು.”

Hadeeth benefits

  1. ತಪ್ಪನ್ನು ನೋಡಿದ ಕೂಡಲೇ ವಿರೋಧಿಸಬೇಕು. ಅದರಲ್ಲಿ ತಡ ಮಾಡಬಾರದು. ವಿರೋಧಿಸುವುದರಿಂದ ದೊಡ್ಡ ತೊಂದರೆ ಸಂಭವಿಸುವುದಿಲ್ಲವಾದರೆ.
  2. ಪಾಪದ ತೀವ್ರತೆಗೆ ಅನುಗುಣವಾಗಿ ಪುನರುತ್ಥಾನ ದಿನದ ಶಿಕ್ಷೆಯಲ್ಲಿ ಹೆಚ್ಚು-ಕಡಿಮೆ ಉಂಟಾಗುತ್ತದೆ.
  3. ಜೀವಿಗಳ ಚಿತ್ರಗಳನ್ನು ರಚಿಸುವುದು ಮಹಾಪಾಪಗಳಲ್ಲಿ ಒಂದಾಗಿದೆ.
  4. ಅಲ್ಲಾಹನ ಸೃಷ್ಟಿಯನ್ನು ಅನುಕರಿಸುವುದು ಚಿತ್ರ ರಚನೆಯನ್ನು ನಿಷೇಧಿಸಲು ಒಂದು ಕಾರಣವಾಗಿದೆ. ಕಲಾವಿದನು ಚಿತ್ರ ರಚಿಸುವಾಗ ಅನುಕರಿಸುವ ಉದ್ದೇಶವನ್ನು ಹೊಂದಿದ್ದರೂ ಇಲ್ಲದಿದ್ದರೂ ಅದರಲ್ಲಿ ವ್ಯತ್ಯಾಸವಿಲ್ಲ.
  5. ಇಸ್ಲಾಮಿ ಧರ್ಮಶಾಸ್ತ್ರಕ್ಕೆ ಸಂಪತ್ತು ಹಾಳಾಗದಂತೆ ಸಂರಕ್ಷಿಸುವ ಆಸಕ್ತಿಯಿರುವುದರಿಂದ, ಅನುಮತಿಸದ ಅಂಶಗಳನ್ನು ತೆಗೆದುಹಾಕಿದ ನಂತರ ಆ ವಸ್ತುಗಳನ್ನು ಸದುಪಯೋಗಪಡಿಸಲು ಅನುಮತಿಸಿದೆ.
  6. ಜೀವಿಗಳ ಚಿತ್ರಗಳನ್ನು ಯಾವುದೇ ರೂಪದಲ್ಲಿ ರಚಿಸುವುದನ್ನು ನಿಷೇಧಿಸಲಾಗಿದೆ. ಅದು ಕ್ಷುಲ್ಲಕ ಉದ್ದೇಶಗಳಿಗಾದರೂ ಸಹ.