/ “ನಿಮ್ಮಲ್ಲೊಬ್ಬನಿಗೆ ಸ್ವರ್ಗವು ಅವನ ಚಪ್ಪಲಿಯ ತೊಗಲಪಟ್ಟಿಗಿಂತಲೂ ಹತ್ತಿರದಲ್ಲಿದೆ; ಹಾಗೆಯೇ ನರಕವೂ ಕೂಡ.”...

“ನಿಮ್ಮಲ್ಲೊಬ್ಬನಿಗೆ ಸ್ವರ್ಗವು ಅವನ ಚಪ್ಪಲಿಯ ತೊಗಲಪಟ್ಟಿಗಿಂತಲೂ ಹತ್ತಿರದಲ್ಲಿದೆ; ಹಾಗೆಯೇ ನರಕವೂ ಕೂಡ.”...

ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಹೇಳಿದರು: “ನಿಮ್ಮಲ್ಲೊಬ್ಬನಿಗೆ ಸ್ವರ್ಗವು ಅವನ ಚಪ್ಪಲಿಯ ತೊಗಲಪಟ್ಟಿಗಿಂತಲೂ ಹತ್ತಿರದಲ್ಲಿದೆ; ಹಾಗೆಯೇ ನರಕವೂ ಕೂಡ.”
رواه البخاري

ವಿವರಣೆ

ಮನುಷ್ಯನ ಚಪ್ಪಲಿಯ ಮೇಲಿರುವ ತೊಗಲಪಟ್ಟಿಗಿಂತಲೂ ಸ್ವರ್ಗ ಮತ್ತು ನರಕ ಅವನಿಗೆ ಹತ್ತಿರದಲ್ಲಿದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸಿದ್ದಾರೆ. ಏಕೆಂದರೆ, ಅವನು ಅಲ್ಲಾಹನನ್ನು ಸಂಪ್ರೀತಗೊಳಿಸುವ ಒಂದು ಸತ್ಕರ್ಮವನ್ನು ಮಾಡಿ ಸ್ವರ್ಗವನ್ನು ಪ್ರವೇಶಿಸಬಹುದು, ಅಥವಾ ಒಂದು ಪಾಪವನ್ನು ಮಾಡಿ ಅದು ಅವನ ನರಕ ಪ್ರವೇಶಕ್ಕೆ ಕಾರಣವಾಗಬಹುದು.

Hadeeth benefits

  1. ಒಳಿತು ಎಷ್ಟೇ ಚಿಕ್ಕದಾದರೂ ಅದರ ಬಗ್ಗೆ ಈ ಹದೀಸಿನಲ್ಲಿ ಪ್ರೇರಣೆ ನೀಡಲಾಗಿದೆ; ಮತ್ತು ಕೆಡುಕು ಎಷ್ಟೇ ಚಿಕ್ಕದಾದರೂ ಅದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
  2. ಮುಸಲ್ಮಾನನು ತನ್ನ ಜೀವನದಲ್ಲಿ ಸದಾ ನಿರೀಕ್ಷೆ ಮತ್ತು ಭಯದ ನಡುವೆ ಇದ್ದು, ಸತ್ಯದಲ್ಲಿ ದೃಢವಾಗಿ ನಿಲ್ಲಿಸಲು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾ ಇರಬೇಕು. ಇದರಿಂದ ಅವನು ಕೆಡುಕುಗಳಿಂದ ಪಾರಾಗುತ್ತಾನೆ ಮತ್ತು ತನ್ನ ಉತ್ತಮ ಸ್ಥಿತಿಯನ್ನು ಕಂಡು ತಾನು ಸ್ವರ್ಗವಾಸಿಯಾಗುತ್ತೇನೆಂದು ಭಾವಿಸಿ ವಂಚಿತನಾಗಲಾರ.