- ವುದೂ, ಅದರ ಐಚ್ಛಿಕ ಕಾರ್ಯಗಳು ಮತ್ತು ಅದರ ಶಿಷ್ಟಾಚಾರಗಳನ್ನು ಸರಿಯಾಗಿ ಕಲಿತು, ಅದರಂತೆ ವುದೂ ನಿರ್ವಹಿಸಲು ಕಾಳಜಿ ತೋರಬೇಕೆಂದು ಈ ಹದೀಸ್ ಒತ್ತಾಯಿಸುತ್ತದೆ.
- ವುದೂವಿನ ಶ್ರೇಷ್ಠತೆಯನ್ನು ಮತ್ತು ಅದು ಸಣ್ಣ ಪಾಪಗಳಿಗೆ ಪರಿಹಾರವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಮಹಾಪಾಪಗಳಿಗೆ ಪಶ್ಚಾತ್ತಾಪ (ತೌಬ) ಕಡ್ಡಾಯವಾಗಿದೆ.
- ಪಾಪಗಳು ದೇಹದಿಂದ ನಿವಾರಣೆಯಾಗಬೇಕಾದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಲಿಸಿಕೊಟ್ಟ ರೀತಿಯಲ್ಲಿ ಪೂರ್ಣವಾಗಿ ಯಾವುದೇ ಲೋಪಗಳನ್ನು ಮಾಡದೆ ವುದೂ ನಿರ್ವಹಿಸಬೇಕಾಗಿದೆ.
- ಈ ಹದೀಸಿನಲ್ಲಿ ಹೇಳಲಾದಂತೆ ಸಣ್ಣ ಪಾಪಗಳು ಪರಿಹಾರವಾಗಬೇಕಾದರೆ, ಮಹಾಪಾಪಗಳಿಂದ ದೂರವಿರುವುದು ಮತ್ತು ಪಶ್ಚಾತ್ತಾಪ ಪಡುವುದು ಕಡ್ಡಾಯವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನಿಮಗೆ ವಿರೋಧಿಸಲಾದ ಮಹಾಪಾಪಗಳಿಂದ ನೀವು ದೂರವಿದ್ದರೆ, ನಿಮ್ಮ ಸಣ್ಣ ಪಾಪಗಳನ್ನು ನಾವು ಅಳಿಸಿಬಿಡುವೆವು." [ನಿಸಾಅ್ 31]