- ಪಶ್ಚಾತ್ತಾಪದ ಬಾಗಿಲು ತೆರೆದಿರುವ ತನಕ ಪಶ್ಚಾತ್ತಾಪವು ಸ್ವೀಕಾರವಾಗುತ್ತದೆ. ಸೂರ್ಯ ಪಶ್ಚಿಮ ದಿಕ್ಕಿನಿಂದ ಉದಯವಾಗುವಾಗ ಅದರ ಬಾಗಿಲು ಮುಚ್ಚುತ್ತದೆ. ಅದೇ ರೀತಿ, ಮನುಷ್ಯನು ಸಾವಿನ ಗೊರ ಗೊರ ಶಬ್ಧ ಉಂಟಾಗುವುದಕ್ಕೆ ಮೊದಲು ಪಶ್ಚಾತ್ತಾಪ ಪಡಬೇಕು. ಅಂದರೆ, ಆತ್ಮವು ಗಂಟಲಿಗೆ ತಲುಪುವುದಕ್ಕೆ ಮೊದಲು.
- ಪಾಪಗಳ ಕಾರಣದಿಂದ ನಿರಾಸೆ ಅಥವಾ ಹತಾಶೆ ಉಂಟಾಗಬಾರದು. ಏಕೆಂದರೆ, ಸರ್ವಶಕ್ತನಾದ ಅಲ್ಲಾಹನ ಕ್ಷಮೆ ಮತ್ತು ಕರುಣೆ ವಿಶಾಲವಾಗಿದೆ ಮತ್ತು ಪಶ್ಚಾತ್ತಾಪದ ಬಾಗಿಲು ತೆರೆದುಕೊಂಡಿದೆ.
- ಪಶ್ಚಾತ್ತಾಪದ ಷರತ್ತುಗಳು: ಒಂದು: ಪಾಪವನ್ನು ಸಂಪೂರ್ಣವಾಗಿ ವರ್ಜಿಸುವುದು. ಎರಡು: ಅದನ್ನು ಎಸಗಿದ್ದಕ್ಕಾಗಿ ವಿಷಾದಿಸುವುದು. ಮೂರು: ಅದನ್ನು ಮತ್ತೆ ಎಂದಿಗೂ ಆವರ್ತಿಸುವುದಿಲ್ಲವೆಂದು ದೃಢ ನಿರ್ಧಾರ ತಳೆಯುವುದು. ಇವೆಲ್ಲವೂ ಪಾಪವು ಅಲ್ಲಾಹನ ಹಕ್ಕುಗಳಿಗೆ ಸಂಬಂಧಿಸಿದ್ದಾಗಿದ್ದರೆ ಮಾತ್ರ. ಆದರೆ ಅದು ಮನುಷ್ಯರ ಹಕ್ಕುಗಳಿಗೆ ಸಂಬಂಧಿಸಿದ್ದಾಗಿದ್ದರೆ, ಪಶ್ಚಾತ್ತಾಪವು ಸಿಂಧುವಾಗಲು ಆ ಮನುಷ್ಯನ ಹಕ್ಕನ್ನು ಸಂದಾಯ ಮಾಡಬೇಕು ಅಥವಾ ಅವನು ಅದನ್ನು ಕ್ಷಮಿಸಬೇಕು ಎಂಬ ಷರತ್ತಿದೆ.