- ಅಲ್ಲಾಹನಲ್ಲಿ, ಅವನ ಪ್ರಭುತ್ವದಲ್ಲಿ, ಅವನ ದೈವಿಕತೆಯಲ್ಲಿ ಮತ್ತು ಅವನ ಹೆಸರು ಹಾಗೂ ಗುಣಲಕ್ಷಣಗಳಲ್ಲಿ ವಿಶ್ವಾಸವಿಡುವುದು ಧರ್ಮದ ಅಡಿಪಾಯವಾಗಿದೆ.
- ವಿಶ್ವಾಸವಿಟ್ಟ ಬಳಿಕ ದೃಢವಾಗಿ ನಿಲ್ಲುವುದು, ಆರಾಧನೆಗಳಲ್ಲಿ ಮುಂದುವರಿಯುವುದು ಮತ್ತು ಅದರಲ್ಲಿ ಸ್ಥಿರವಾಗಿರುವುದರ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.
- ಕರ್ಮಗಳು ಸ್ವೀಕಾರವಾಗಲು ವಿಶ್ವಾಸವು ಒಂದು ಷರತ್ತಾಗಿದೆ.
- ಅಲ್ಲಾಹನಲ್ಲಿರುವ ವಿಶ್ವಾಸವು ಕಡ್ಡಾಯವಾಗಿ ವಿಶ್ವಾಸವಿಡಬೇಕಾದ ನಂಬಿಕೆಗಳು ಮತ್ತು ಅದರ ತತ್ವಗಳು, ಅದಕ್ಕೆ ಅನುಬಂಧಿತವಾಗಿರುವ ಹೃದಯ ಸಂಬಂಧಿತ ಕರ್ಮಗಳು, ಆಂತರಿಕವಾಗಿ ಮತ್ತು ಬಾಹ್ಯವಾಗಿ ಅಲ್ಲಾಹನಿಗೆ ಸಂಪೂರ್ಣ ಶರಣಾಗುವುದು ಮತ್ತು ಸಮರ್ಪಿಸಿಕೊಳ್ಳುವುದು ಮುಂತಾದವುಗಳನ್ನು ಒಳಗೊಂಡಿದೆ.
- ದೃಢವಾಗಿ ನಿಲ್ಲುವುದು ಎಂದರೆ ಕಡ್ಡಾಯ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಮತ್ತು ನಿಷೇಧಿಸಲಾದ ಕಾರ್ಯಗಳಿಂದ ದೂರವಿರುವ ಮೂಲಕ ನೇರ ಮಾರ್ಗಕ್ಕೆ ಸದಾ ಅಂಟಿಕೊಂಡಿರುವುದು.