/ ನೀವು ಮಲ ವಿಸರ್ಜನೆ ಮಾಡುವ ಸ್ಥಳಕ್ಕೆ ಹೋದರೆ ಕಿಬ್ಲದ ದಿಕ್ಕಿಗೆ ಮುಖ ಮಾಡಬೇಡಿ ಮತ್ತು ಅದರ ಕಡೆಗೆ ಬೆನ್ನು ಹಾಕಬೇಡಿ. ಬದಲಿಗೆ, ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಮುಖ ಮಾಡಿರಿ...

ನೀವು ಮಲ ವಿಸರ್ಜನೆ ಮಾಡುವ ಸ್ಥಳಕ್ಕೆ ಹೋದರೆ ಕಿಬ್ಲದ ದಿಕ್ಕಿಗೆ ಮುಖ ಮಾಡಬೇಡಿ ಮತ್ತು ಅದರ ಕಡೆಗೆ ಬೆನ್ನು ಹಾಕಬೇಡಿ. ಬದಲಿಗೆ, ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಮುಖ ಮಾಡಿರಿ...

ಅಬೂ ಅಯ್ಯೂಬ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಮಲ ವಿಸರ್ಜನೆ ಮಾಡುವ ಸ್ಥಳಕ್ಕೆ ಹೋದರೆ ಕಿಬ್ಲದ ದಿಕ್ಕಿಗೆ ಮುಖ ಮಾಡಬೇಡಿ ಮತ್ತು ಅದರ ಕಡೆಗೆ ಬೆನ್ನು ಹಾಕಬೇಡಿ. ಬದಲಿಗೆ, ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಮುಖ ಮಾಡಿರಿ." ಅಬೂ ಅಯ್ಯೂಬ್ ಹೇಳಿದರು: ನಾವು ಶಾಮ್‌ಗೆ ಬಂದಾಗ ಅಲ್ಲಿ ಶೌಚಾಲಯಗಳನ್ನು ಕಿಬ್ಲದ ದಿಕ್ಕಿಗೆ ನಿರ್ಮಿಸಿರುವುದನ್ನು ಕಂಡೆವು. ಆಗ ನಾವು (ಆ ದಿಕ್ಕಿನಿಂದ) ಸರಿಯುತ್ತಿದ್ದೆವು ಮತ್ತು ಅಲ್ಲಾಹನಲ್ಲಿ ಕ್ಷಮೆಯಾಚಿಸುತ್ತಿದ್ದೆವು.
متفق عليه

ವಿವರಣೆ

ಮಲ-ಮೂತ್ರ ವಿಸರ್ಜನೆ ಮಾಡಲು ಬಯಸುವವರು ಕಿಬ್ಲಕ್ಕೆ ಮತ್ತು ಕಅಬಾದ ದಿಕ್ಕಿಗೆ ಮುಖ ಮಾಡುವುದನ್ನು ಮತ್ತು ಅದರ ಕಡೆಗೆ ಬೆನ್ನು ಹಾಕುವುದನ್ನು, ಅಂದರೆ ಅದು ತನ್ನ ಬೆನ್ನ ಹಿಂದೆ ಇರುವಂತೆ ಮಾಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದರು. ಬದಲಿಗೆ, ಅವರು ಅದರಿಂದ ಸರಿದು ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ತಿರುಗಬೇಕು. ಇದು ಮದೀನ ನಿವಾಸಿಗಳಿಗೆ ಕಿಬ್ಲ ಯಾವ ದಿಕ್ಕಿನಲ್ಲಿದೆಯೋ ಆ ದಿಕ್ಕಿನಲ್ಲಿ ಕಿಬ್ಲ ಇರುವವರಿಗೆ ಮಾತ್ರ. ನಂತರ, ಅಬೂ ಅಯ್ಯೂಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅವರು ಶಾಮ್‌ಗೆ ಬಂದಾಗ ಅಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಲು ಶೌಚಾಲಯಗಳನ್ನು ನಿರ್ಮಿಸಿರುವುದನ್ನು ಕಂಡರು. ಅವುಗಳನ್ನು ಕಅಬಾದ ದಿಕ್ಕಿಗೆ ಮುಖ ಮಾಡಿ ನಿರ್ಮಿಸಲಾಗಿತ್ತು. ಆಗ ಅವರು ಕಿಬ್ಲದ ದಿಕ್ಕಿನಿಂದ ಸರಿಯುತ್ತಿದ್ದರು ಮತ್ತು ಅದರೊಂದಿಗೆ ಅಲ್ಲಾಹನಲ್ಲಿ ಕ್ಷಮೆಯಾಚಿಸುತ್ತಿದ್ದರು.

Hadeeth benefits

  1. ಇದರ ಉದ್ದೇಶ ಪವಿತ್ರ ಕಅಬಾಲಯವನ್ನು ಗೌರವಿಸುವುದು ಮತ್ತು ಆದರಿಸುವುದಾಗಿದೆ.
  2. ಮಲಮೂತ್ರ ವಿಸರ್ಜನೆ ಮಾಡುವ ಸ್ಥಳದಿಂದ ಹೊರಬಂದ ನಂತರ ಅಲ್ಲಾಹನಲ್ಲಿ ಕ್ಷಮೆಯಾಚಿಸಬೇಕಾಗಿದೆ.
  3. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮ ಬೋಧನಾ ಶೈಲಿಯನ್ನು ತಿಳಿಸಲಾಗಿದೆ. ಅದು ಹೇಗೆಂದರೆ, ಅವರು ನಿಷೇಧದ ಬಗ್ಗೆ ಪ್ರಸ್ತಾಪಿಸಿದ ನಂತರ ಅದರ ಧರ್ಮಸಮ್ಮತ ಮಾರ್ಗವನ್ನು ಕೂಡ ತಿಳಿಸಿದ್ದಾರೆ.