- ಮಕ್ಕಳಿಗೆ ಏಕದೇವಾರಾಧನೆ, ಶಿಷ್ಟಾಚಾರ ಮುಂತಾದ ಧಾರ್ಮಿಕ ವಿಷಯಗಳನ್ನು ಕಲಿಸುವ ಮಹತ್ವವನ್ನು ಈ ಹದೀಸ್ ತಿಳಿಸುತ್ತದೆ.
- ಪ್ರತಿಫಲವು ಕರ್ಮದ ಅದೇ ವರ್ಗಕ್ಕೆ ಸೇರಿರುತ್ತದೆ.
- ಅಲ್ಲಾಹನ ಮೇಲೆ ಅವಲಂಬಿತರಾಗಲು ಮತ್ತು ಅವನ ಮೇಲೆ ಮಾತ್ರ ಭರವಸೆಯಿಡಲು ಈ ಹದೀಸ್ ಆಜ್ಞಾಪಿಸುತ್ತದೆ. ಅವನು ಅತ್ಯುತ್ತಮ ಕಾರ್ಯನಿರ್ವಾಹಕನಾಗಿದ್ದಾನೆ.
- ಅಲ್ಲಾಹನ ತೀರ್ಮಾನ ಮತ್ತು ನಿರ್ಣಯದಲ್ಲಿ ವಿಶ್ವಾಸವಿಡಬೇಕು ಮತ್ತು ಅದರ ಬಗ್ಗೆ ತೃಪ್ತಿಯನ್ನು ಹೊಂದಿರಬೇಕು ಎಂದು, ಮತ್ತು ಅಲ್ಲಾಹು ಎಲ್ಲಾ ವಿಷಯಗಳನ್ನು ಈಗಾಗಲೇ ನಿರ್ಣಯಿಸಿದ್ದಾನೆಂದು ಈ ಹದೀಸ್ ತಿಳಿಸುತ್ತದೆ.
- ಯಾರು ಅಲ್ಲಾಹನ ಆಜ್ಞೆಗಳನ್ನು ನಿರ್ಲಕ್ಷಿಸುತ್ತಾನೋ, ಅವನನ್ನು ಅಲ್ಲಾಹು ನಿರ್ಲಕ್ಷಿಸುತ್ತಾನೆ. ಅವನು ಅವನ ಸಂರಕ್ಷಣೆಯನ್ನು ವಹಿಸಿಕೊಳ್ಳುವುದಿಲ್ಲ.