- ಈ ಹದೀಸ್ ಅಬೂಬಕರ್ ಸಿದ್ದೀಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ತಿಳಿಸುತ್ತದೆ. ಅವರು ಪ್ರವಾದಿಯವರ ಸಂಗಡಿಗರಲ್ಲಿ ಅತ್ಯುತ್ತಮರು, ಹಾಗೂ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಧನದ ಬಳಿಕ ಅವರ ಉತ್ತರಾಧಿಕಾರಿಯಾಗಲು ಹೆಚ್ಚು ಅರ್ಹರು ಎಂದು ಈ ಹದೀಸಿನಿಂದ ತಿಳಿಯುತ್ತದೆ.
- ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ನಿರ್ಮಿಸುವುದು ಹಿಂದಿನ ಸಮುದಾಯಗಳು ಮಾಡಿದ ನೀಚಕೃತ್ಯಗಳಾಗಿವೆಂದು ಈ ಹದೀಸಿನಲ್ಲಿ ತಿಳಿಸಲಾಗಿದೆ.
- ಸಮಾಧಿಗಳನ್ನು ಆರಾಧನಾ ಸ್ಥಳಗಳಾಗಿ ಮಾಡಿಕೊಂಡು, ಅವುಗಳ ಬಳಿ ಅಥವಾ ಅವುಗಳಿಗೆ ತಿರುಗಿ ನಮಾಝ್ ಮಾಡುವುದು, ಅವುಗಳ ಮೇಲೆ ಆರಾಧನಾಲಯಗಳನ್ನು ಅಥವಾ ಗುಮ್ಮಟಗಳನ್ನು ನಿರ್ಮಿಸುವುದು ಮುಂತಾದವುಗಳನ್ನು ಈ ಹದೀಸಿನಲ್ಲಿ ವಿರೋಧಿಸಲಾಗಿದೆ. ಇದರಿಂದ ಬಹುದೇವಾರಾಧನೆ (ಶಿರ್ಕ್) ಉಂಟಾಗಬಾರದು ಎಂಬ ಕಾರಣದಿಂದಲೇ ಇದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
- ಮಹಾಪುರುಷರ ವಿಷಯದಲ್ಲಿ ಎಲ್ಲೆ ಮೀರಿ ವರ್ತಿಸಬಾರದೆಂದು ಈ ಹದೀಸಿನಲ್ಲಿ ಎಚ್ಚರಿಕೆ ನೀಡಲಾಗಿದೆ. ಏಕೆಂದರೆ ಅದು ಬಹುದೇವಾರಾಧನೆಗೆ ಕಾರಣವಾಗುತ್ತದೆ.
- ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಳ್ಳಬಾರದೆಂದು ಎಚ್ಚರಿಕೆ ನೀಡಿದ ಶೈಲಿಯು ಅದರ ಅಪಾಯವನ್ನು ಮನದಟ್ಟು ಮಾಡುತ್ತದೆ. ಏಕೆಂದರೆ, ಅವರು ತಮ್ಮ ನಿಧನಕ್ಕೆ ಐದು ದಿನಗಳ ಮೊದಲು ಇದರ ಬಗ್ಗೆ ಪ್ರಬಲವಾಗಿ ಎಚ್ಚರಿಸಿದ್ದಾರೆ.