- ಜೀವವಿರುವ ವಸ್ತುವಿನ ಚಿತ್ರವನ್ನು ರಚಿಸುವುದು ನಿಷಿದ್ಧವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಬಹುದೇವಾರಾಧನೆಗೆ ಕಾರಣವಾಗುತ್ತದೆ.
- ಅಧಿಕಾರವಿರುವವನು ಅಥವಾ ಸಾಮರ್ಥ್ಯವಿರುವವನು ಕೆಡುಕನ್ನು ಕೈಯಿಂದ ನಿವಾರಿಸುವುದು ಧರ್ಮನಿಯಮವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
- ಅಜ್ಞಾನಕಾಲದ ಅವಶೇಷಗಳಾದ ಚಿತ್ರಗಳು, ಪ್ರತಿಮೆಗಳು ಮತ್ತು ಸಮಾಧಿಗಳ ಮೇಲಿರುವ ಕಟ್ಟಡಗಳನ್ನು ತೊಲಗಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ಸಾಹ ತೋರುತ್ತಿದ್ದರೆಂದು ಈ ಹದೀಸ್ ತಿಳಿಸುತ್ತದೆ.