/ “ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು.”

“ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು.”

ಇಬ್ನ್ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಬ್ಬ ವ್ಯಕ್ತಿ ಹೀಗೆ ಹೇಳುವುದನ್ನು ಅವರು ಕೇಳಿದರು: “ಕಅಬಾಲಯದ ಮೇಲಾಣೆ!” ಆಗ ಇಬ್ನ್ ಉಮರ್ ಹೇಳಿದರು: “ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವಂತಿಲ್ಲ. ಏಕೆಂದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು.”
رواه أبو داود والترمذي وأحمد

ವಿವರಣೆ

ಅಲ್ಲಾಹು ಅಲ್ಲದವರ ಹೆಸರಿನಲ್ಲಿ ಅಥವಾ ಅವರ ಗುಣಲಕ್ಷಣಗಳನ್ನು ಹೇಳಿ ಯಾರಾದರೂ ಆಣೆ ಮಾಡಿದರೆ ಅವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುತ್ತಿದ್ದಾರೆ ಏಕೆಂದರೆ, ಒಬ್ಬರ ಮೇಲೆ ನಾವು ಆಣೆ ಮಾಡಬೇಕಾದರೆ ನಾವು ಅವರ ಬಗ್ಗೆ ಅತಿಯಾದ ಗೌರವಭಾವವನ್ನು ಹೊಂದಿರುತ್ತೇವೆ. ಆದರೆ ಅತಿಯಾದ ಗೌರವ ಭಾವ ಇರಬೇಕಾದದು ಅಲ್ಲಾಹನಲ್ಲಿ ಮಾತ್ರ. ಆದ್ದರಿಂದ ಅಲ್ಲಾಹನ ಮೇಲೆ, ಅಥವಾ ಅವನ ಹೆಸರು ಮತ್ತು ಗುಣಲಕ್ಷಣಗಳ ಮೇಲೆ ಮಾತ್ರ ಆಣೆ ಮಾಡತಕ್ಕದ್ದು. ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವುದು ಸಣ್ಣ ಶಿರ್ಕ್ (ಬಹುದೇವತ್ವ) ಆಗಿದೆ. ಆದರೆ ಆಣೆ ಮಾಡುವವನು ಅಲ್ಲಾಹನಿಗೆ ಗೌರವ ತೋರುವಂತೆ ಅಥವಾ ಅದಕ್ಕಿಂತಲೂ ಹೆಚ್ಚು ಗೌರವವನ್ನು ತಾನು ಆಣೆ ಮಾಡುವ ವಸ್ತುವಿಗೆ ತೋರಿದರೆ, ಆಗ ಅದು ದೊಡ್ಡ ಶಿರ್ಕ್ (ಬಹುದೇವತ್ವ) ಆಗುತ್ತದೆ.

Hadeeth benefits

  1. ಆಣೆ ಮಾಡುವ ಮೂಲಕ ಗೌರವ ತೋರಬೇಕಾದದ್ದು ಸರ್ವಶಕ್ತನಾದ ಅಲ್ಲಾಹನಿಗೆ ಮಾತ್ರ. ಆದ್ದರಿಂದ ಅಲ್ಲಾಹನ ಮೇಲೆ, ಅವನ ಹೆಸರುಗಳು ಮತ್ತು ಗುಣಲಕ್ಷಣಗಳ ಮೇಲೆಯೇ ಹೊರತು ಆಣೆ ಮಾಡಬಾರದು.
  2. ಒಳಿತನ್ನು ಆದೇಶಿಸಲು ಮತ್ತು ಕೆಡುಕನ್ನು ವಿರೋಧಿಸಲು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರು ತೋರುತ್ತಿದ್ದ ಉತ್ಸಾಹವನ್ನು ಈ ಹದೀಸಿನಲ್ಲಿ ಕಾಣಬಹುದು. ವಿಶೇಷವಾಗಿ, ವಿರೋಧಿಸಲಾಗುವ ವಿಷಯವು ಬಹುದೇವತ್ವ ಅಥವಾ ಸತ್ಯನಿಷೇಧಕ್ಕೆ ಸಂಬಂಧಿಸಿದ್ದಾಗಿದ್ದರೆ.